ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಚರ್ಚಾ ವಿಷಯವಾಗಿದ್ದೇ, ಕನ್ಕ್ಯುಶನ್. ಪಂದ್ಯ ಮುಗಿದ ಮೇಲೂ ಇಂಗ್ಲೆಂಷ್ ಆಟಗರರು ಈ ವಿಷಯದ ಬಗ್ಗೆ ತಮ್ಮ ಗಮನ ಸೆಳೆದರು. ಈಗ ಮತ್ತೆ ಈ ವಿವಾದಕ್ಕೆ ಜೀವ ಬಂದಂತೆ ಕಾಣುತ್ತಿದೆ. ಎಲ್ಲರ ಚಿತ್ತದಿಂದ ಮರೆಯಾಗಿದ್ದ ವಿವಾದಕ್ಕೆ ಸುನಿಲ್ ಗವಾಸ್ಕರ್ ಮರು ಜೀವ ನೀಡಿದ್ದಾರೆ. ಯಾವಾಗಲೂ ತಮ್ಮ ಹೇಳಿಕೆಗಳಿಂದ ಚರ್ಚೆಗೆ ಗ್ರಾಸವಾಗುವ ಸುನಿಲ್ ಗವಸ್ಕಾರ್ ಈಗ ಮತ್ತೊಂದು ಕಿಡಿ ಹಚ್ಚಿದ್ದಾರೆ.
ಪುಣೆಯಲ್ಲಿ ನಡೆದ ಪಂದ್ಯದ ವೇಳೆ ಶಿವಂ ದುಬೆ ಬ್ಯಾಟಿಂಗ್ ಮಾಡುವಾಗ ಚೆಂಡು ಅವರ ಹೆಲ್ಮೆಟ್‌ಗೆ ತಾಗಿತು. ಆಗ ವೈದ್ಯರು ಬಂದು ತಪಾಸಣೆಯನ್ನು ಸಹ ನಡೆಸಿದರು. ಆದರೆ ಶಿವಂ ದುಬೆ ಡ್ರೆಸ್ಸಿಂಗ್ ರೂಮ್‌ಗೆ ಹೋಗ್ತಾ ಇದ್ದಂತೆ ತಲೆ ತಿರುಗುತ್ತಿದೆ ಎಂದು ದೂರಿದರು. ಆಗ ಟೀಮ್ ಮ್ಯಾನೇಜ್ಮೆಂಟ್ ಹನ್ನೆಡನೇ ಆಟಗಾರ ಹರ್ಷಿತ್ ರಾಣಾ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಮ್ಯಾಚ್ ರೆಫ್ರಿ ಜಾಗವಗಲ್ ಶ್ರೀನಾಥ್ ಸಮ್ಮತಿ ಸೂಚಿಸಿದರು. ತಮಗೆ ಅರಿವಿಲ್ಲದಂತೆ ಹರ್ಷಿತ್ ರಾಣಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಬಿಟ್ಟರು.

ಪಂದ್ಯ ಮುಗಿದ ಬಳಿಕ ಕನ್ಕ್ಯುಶನ್ ವಿಚಾರವೇ ದೊಡ್ಡದಾಯಿತು. ಈ ವಿವಾದಕ್ಕೆ ಸಂಬಂಧಿಸಿದಂತೆ ವಿರೋಧದ ಹೇಳಿಕೆಗಳು ಹೆಚ್ಚಾಗಿ ಕೇಳಿ ಬಂದವು. ಇಂಗ್ಲೆಂಡ್ ಸಹ ಈ ಬಗ್ಗೆ ಹೆಚ್ಚಾಗಿ ಗೊಂದಲವನ್ನು ಸೃಷ್ಟಿಸಿತು. ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ತುಟಿ ಬಿಚ್ಚಿದ್ದಾರೆ. ಅಲ್ಲದೆ ಪೆಟ್ಟು ತಿಂದಿದ್ದ ಶಿವಂ ದುಬೆಗೆ ಏನು ಆಗಿರಲೇ ಇಲ್ಲ ಎಂದು ತಿಳಿಸಿದ್ದಾರೆ.
"ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಚೆಂಡು ಶಿವಂ ದುಬೆ ಅವರ ಹೆಲ್ಮೆಟ್‌ಗೆ ತಗುಲಿತು, ಆದರೆ ಅವರು ಕೊನೆಯವರೆಗೂ ಆಡಿದ್ದರು. ಇದರಿಂದ ಅವರಿಗೆ ಹೆಚ್ಚು ಪೆಟ್ಟಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಸುನಿಲ್ ಗವಾಸ್ಕರ್ ಟೆಲಿಗ್ರಾಫ್‌ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಹೇಳಿದ್ದಾರೆ. ಶಿವಂ ದುಬೆಗೆ ಕನ್ಕ್ಯುಶನ್ ಬದಲಿ ಆಟಗಾರ ನೀಡಿರುವ ನಿರ್ಣಯ ತಪ್ಪಾಗಿತ್ತು. ಅವರು ಬ್ಯಾಟಿಂಗ್ ಮುಗಿಸಿದ್ದರು. ಅವರು ಇನ್ನು ಬೌಲಿಂಗ್ ಅಲ್ಲ, ಫೀಲ್ಡಿಂಗ್ ಅಷ್ಟೇ ಮಾಡಬೇಕಿತ್ತು ಎಂದು ಸುನಿಲ್ ಗವಾಸ್ಕರ್ ಬರೆದುಕೊಂಡಿದ್ದಾರೆ.

ಶಿವಂ ದುಬೆ ಹಾಗೂ ಹರ್ಷಿತ್ ರಾಣಾರಲ್ಲಿ ಸಾಮ್ಯತೆ ಇಲ್ಲ. ಅವರಿಬ್ಬರೂ ಒಂದೇ ಹೈಟ್ ಹೊಂದಿದ್ದಾರೆ ಎಂದು ತಮಾಷೆಯಾಗಿ ಹೇಳಬಹುದು. ಇಂಗ್ಲೆಂಡ್ ತಂಡದ ಆಟಗಾರರ ಕೋಪ ನೈಜವಾಗಿದೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.
ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಸಹ ಈ ಕುರಿತು ಮಾತನಾಡಿದ್ದರು. ಅಲ್ಲದೆ ಬದಲಿ ಆಟಗಾರನ ಆಯ್ಕೆಯನ್ನು ಪ್ರಶ್ನಿಸಿದ್ದರು. ಇನ್ನು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಸಹ ಈ ಬಗ್ಗೆ ತುಟಿ ಬಿಚ್ಚಿದ್ದರು. ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ತಂಡಕ್ಕೆ ಬಂದಿದ್ದು ಬೌಲಿಂಗ್ ವಿಭಾಗವನ್ನು ಬಲಪಡಿಸಿತು ಎಂದು ತಿಳಿಸಿದ್ದರು.