For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ಗೆ ಮೂರು ಪಂದ್ಯ ಬೇಕು ಎಂದ ರೋಹಿತ್ ಶರ್ಮಾಗೆ ಸುನಿಲ್ ಗವಾಸ್ಕರ್ ತರಾಟೆ!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ತಂಡವನ್ನು ಆಯ್ಕೆ ಮಾಡಲು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಚಾರವಾಗಿ ಈಗ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ಅವರ ಈ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿದ್ದು ಐಪಿಎಲ್‌ನಲ್ಲಿ ಮೂರು ಪಂದ್ಯಗಳ ಫೈನಲ್ ಯಾಕೆ ಕೇಳಲ್ಲ ಎಂದು ಪ್ರಶ್ನಿಸಿದ್ದಾರೆ.

"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ನಾನು ಬಯಸುತ್ತೇನೆ. ನಾವು ಬಹಳ ಪರಿಶ್ರಮಪಟ್ಟಿದ್ದೇವೆ ಹಾಗೂ ಹೋರಾಟ ನಡೆಸಿದ್ದೇವೆ. ಆದರೆ ಇಲ್ಲಿ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿಯಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿಸುವುದು ಸೂಕ್ತ" ಎಂದು ನಾಯಕ ರೋಹಿತ್ ಶರ್ಮಾ ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದರು.

Sunil Gavaskar reaction on Rohit Sharmas calls for 3-match WTC Final

ರೋಹಿತ್ ಶರ್ಮಾ ಅವರ ಈ ಅಭಿಪ್ರಾಯದ ಬಗ್ಗೆ ಸುನಿಲ್ ಗವಾಸ್ಕರ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. "WTC ಆವೃತ್ತಿ ಪ್ರಾರಂಭವಾಗುವ ಮೊದಲೇ ತಂಡಗಳಿಗೆ ಒಂದು ಫೈನಲ್ ಪಂದ್ಯ ಇರಲಿದೆ ಎಂಬುದು ಗೊತ್ತಿತ್ತು. ಐಪಿಎಲ್‌ನಲ್ಲಿ ಆಟಗಾರರು "ಬೆಸ್ಟ್ ಆಫ್ ಥ್ರೀ"ಯನ್ನು ಕೇಳುತ್ತಾರೆಯೇ" ಪ್ರಶ್ನಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿಲ್ಲ.

"ಅದನ್ನು ಒಪ್ಪಲಿ ಸಾಧ್ಯವಿಲ್ಲ. ಒಂದು ಪಂದ್ಯಗಳ ಫೈನಲ್ ಪಂದ್ಯ ಎಂದು ಬಹಳ ಸಮಯದ ಹಿಂದೆಯೇ ನಿರ್ಧರಿಸಲಾಗಿದೆ. ನೀವು ಆವೃತ್ತಿಯ ಮೊದಲ ಪಂದ್ಯವನ್ನು ಪಂದ್ಯವನ್ನು ಆಡುವ ಮುನ್ನವೇ ನಿಮಗೆ ಫೈನಲ್ ಕೇವಲ ಒಂದು ಪಂದ್ಯ ಇರಲಿದೆ ಎಂದು ತಿಳಿದಿತ್ತು. ಹಾಗಾಗಿ ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು" ಎಂದಿದ್ದಾರೆ ಗವಾಸ್ಕರ್.

"ನೀವು ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವಾಗ ನೀವು ಬೆಸ್ಟ್ ಆಫ್ ಥ್ರೀ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರೂ ಒಂದೆರಡು ಕೆಟ್ಟ ದಿನಗಳನ್ನು ಹೊಂದಿರುತ್ತಾರೆ. ಆದರೆ ಆವೃತ್ತಿಯ ಆರಂಭದಲ್ಲಿಯೇ ಫೈನಲ್ ಪಂದ್ಯ ಒಂದು ಮಾತ್ರವೇ ಇರಲಿದೆ ಎಂಬುದು ತಿಳಿದಿದೆ. ಹಾಗಾಗಿ 'ಬೆಸ್ಟ್ ಆಫ್ ತ್ರಿ'ಯನ್ನು ಕೇಳಲು ಸಾಧ್ಯವಿಲ್ಲ. ನಾಳೆ ಐದು ಪಂದ್ಯಗಳಲ್ಲಿ ನಿರ್ಧರಿಸಿ ಎಂದು ಕೇಳಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಇನ್ನು ರೋಹಿತ್ ಶರ್ಮಾ ಅವರ ಈ ಅನಿಸಿಕೆಯ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಜೊತೆಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ಯಾಟ್ ಕಮ್ಮಿನ್ಸ್ ಭಿನ್ನವಾಗಿ ಉತ್ತರವನ್ನು ನೀಡಿದ್ದಾರೆ. "ನಾವು ಈಗಾಗಲೇ ಐಸಿಸಿ ಟ್ರೋಫಿಯನ್ನು ಗೆದ್ದಾಗಿದೆ. WTC ಫೈನಲ್‌ಗೆ ಕೇವಲ 3 ಪಂದ್ಯಗಳ ಸರಣಿಯನ್ನು ಮಾತ್ರವಲ್ಲ, 16 ಪಂದ್ಯಗಳ ಸರಣಿಯನ್ನಾದರೂ ಇಡಬಹುದು. ಆದರೆ ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲಲು ಕೇವಲ ಒಂದು ಆಟ ಮಾತ್ರವೇ ದೊರೆಯುತ್ತದೆ. ಆಟ ಅಂದರೆ ಅದು ಇರುವುದೇ ಹಾಗೆ" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.

"ಇಲ್ಲಿ ಗೆಲುವು ಸಾಧಿಸಬೇಕಾದರೆ ನೀವು ವಿಶ್ವದ ಎಲ್ಲಾ ಭಾಗದಲ್ಲಿಯೂ ಆಡಬೇಕಾಗುತ್ತದೆ. ನನ್ನ ಪ್ರಕಾರ ಈ ಆವೃತ್ತಿ 20 ಪಂದ್ಯಗಳ ಸರಣಿಯನ್ನು ಹೊಂದಿತ್ತು. ನಾವು ಬಹುಶಃ ಮೂರು ಅಥವಾ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಸೋಲು ಕಂಡಿದ್ದೇವೆ. ಉಳಿದೆಲ್ಲಾ ಪಂದ್ಯಗಳಲ್ಲಿಯೂ ಆಟಗಾರರು ಅದ್ಭುತ ಪ್ರದರ್ಶನ ನೀಡಿದ ಕಾರಣ ಇಲ್ಲಿಗೆ ತಲುಪಲು ಸಾಧ್ಯವಾಯಿತು. ನಾವು ಎಲ್ಲಾ ಪರಿಸ್ಥಿತಿಗಳಿಗೂ ಅದ್ಭುತವಾಗಿ ಒಗ್ಗಿಕೊಂಡೆವು. ಹಾಗಾಗಿ ಈ ಗೆಲುವು ಬಹಳ ತೃಪ್ತಿದಾಯಕ" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.

Story first published: Sunday, June 11, 2023, 23:51 [IST]
Other articles published on Jun 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+