
ಭಾನುವಾರ ಪರ್ತ್‌ನಲ್ಲಿ ನಡೆದ ಟಿ20 ವಿಶ್ವಕಪ್ ಥ್ರಿಲ್ಲರ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳಿಂದ ಸೋಲನುಭವಿಸಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಕಡಿಮೆ ಮೊತ್ತಕ್ಕೆ ಭಾರತವನ್ನು ನಿಯಂತ್ರಿಸಿತು. ನಂತರ ಭಾರತ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು, ಭಾರತ ತಂಡದ ಕಳಪೆ ಫೀಲ್ಡಿಂಗ್ ಪ್ರದರ್ಶನದಿಂದಾಗಿ ಸೋಲನುಭವಿಸಿತು.
ವಿರಾಟ್ ಕೊಹ್ಲಿ ಡೀಪ್ ಮಿಡ್-ವಿಕೆಟ್‌ನಲ್ಲಿ ಸುಲಭದ ಕ್ಯಾಚ್ ಕೈ ಬಿಟ್ಟರು, ಏಡೆನ್ ಮಾರ್ಕ್ರಾಮ್ ಸುಲಭದ ರನ್ ಔಟ್ ಆಗುವ ಅವಕಾಶವಿದ್ದರೂ, ರೋಹಿತ್ ಶರ್ಮಾ ಎರಡು ಬಾರಿ ಅವಕಾಶ ಕೈಚೆಲ್ಲಿದರು. ಭಾರತದ ಕಳಪೆ ಫೀಲ್ಡಿಂಗ್ ನಡುವೆಯೂ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ತಂಡವನ್ನು ಬೆಂಬಲಿಸಿದ್ದಾರೆ. ಭಾರತದ ಸೋಲಿಗೆ ಫೀಲ್ಡಿಂಗ್ ಅಲ್ಲ, ಬದಲಾಗಿ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಕಾರಣ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ನಾಲ್ಕು ಓವರ್ ಬೌಲ್ ಮಾಡಿ 43 ರನ್ ನೀಡಿ ಟ್ರಿಸ್ಟಾನ್ ಸ್ಟಬ್ಸ್ ವಿಕೆಟ್ ಪಡೆದರು. ಎಲ್ಲಾ ಬೌಲರ್ ಗಳು ರನ್ ನೀಡದೆ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರೆ ಅಶ್ವಿನ್ ಮಾತ್ರ ಸುಲಭವಾಗಿ ರನ್ ಬಿಟ್ಟುಕೊಟ್ಟರು. ಇದರಿಂದ, ಬ್ಯಾಟರ್ ಮೇಲೆ ಒತ್ತಡ ಕಡಿಮೆಯಾಯಿತು.

ಅಶ್ವಿನ್ ಬೌಲಿಂಗ್ ಭಾರತ ಸೋಲಲು ಕಾರಣ
"ಕ್ಯಾಚ್ ಅನ್ನು ಕೈಬಿಡುವುದು ಮತ್ತು ರನ್ ಔಟ್ ಅವಕಾಶವನ್ನು ಕಳೆದುಕೊಳ್ಳುವಂತಹ ವಿಷಯಗಳು ಕ್ರಿಕೆಟ್‌ನಲ್ಲಿ ನಡೆಯುತ್ತವೆ. ಸೋಲಿಗೆ ನಾವು ಯಾವುದೇ ಆಟಗಾರನನ್ನು ದೂಷಿಸಲು ಸಾಧ್ಯವಿಲ್ಲ. ಅದೃಷ್ಟವು ಒಬ್ಬರ ಕಡೆಯಿಲ್ಲದಿದ್ದಾಗ, ದೊಡ್ಡ ಆಟಗಾರರು ಕೂಡ ಕ್ಯಾಚ್‌ಗಳನ್ನು ಬಿಡಬಹುದು ಅಥವಾ ರನ್ ಔಟ್ ಅವಕಾಶಗಳನ್ನು ಕಳೆದುಕೊಳ್ಳಬಹುದು. ಭಾರತ ಫೀಲ್ಡಿಂಗ್ ಮಾಡಿದಾಗ ಪ್ರಮುಖ ಸಮಸ್ಯೆ ಎಂದರೆ ಒಬ್ಬ ಬೌಲರ್ 43 ರನ್ ನೀಡುವುದು ಎಂದು ನಾನು ನಂಬುತ್ತೇನೆ" ಎಂದು ಗವಾಸ್ಕರ್ ಹೇಳಿದ್ದಾರೆ.
ಡೇವಿಡ್ ಮಿಲ್ಲರ್ 46 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು ಮತ್ತು ಏಡೆನ್ ಮಾರ್ಕ್ರಾಮ್ 52 ರನ್ ಗಳಿಸಿದರು, ದಕ್ಷಿಣ ಆಫ್ರಿಕಾವು ಭಾನುವಾರ ಪರ್ತ್‌ನಲ್ಲಿ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
134 ರನ್‌ಗಳ ಚೇಸ್ ಮಾಡುವಾಗ ದಕ್ಷಿಣ ಆಫ್ರಿಕಾ 24 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಏಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ 76 ರನ್‌ಗಳ ಜೊತೆಯಾಟ ನೆರವಿನಿಂದ ಗೆಲುವು ಸಾಧಿಸಿದರು.