Champions Trophy: ಭಾರತ ಸೆಮಿಫೈನಲ್‌ನಲ್ಲಿ ಈ ತಂಡದ ವಿರುದ್ಧ ಆಡಿದರೆ ಲಾಭ ಹೆಚ್ಚು; ಸುನಿಲ್ ಗವಾಸ್ಕರ್
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯವು ಸೆಮಿಫೈನಲ್‌ಗೆ ಮುನ್ನ ಡ್ರೆಸ್ ರಿಹರ್ಸಲ್‌ನಂತಿರಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲದೆ. ಒಂದು ವೇಳೆ ಭಾರತ ಸೋತರೆ, ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಭಾರತ ಯಾವ ತಂಡವನ್ನು ಎದುರಿಸುವುದು ಪ್ರಯೋಜನಕಾರಿ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಬದಲು ಆಸ್ಟ್ರೇಲಿಯಾವನ್ನು ಎದುರಿಸುವುದರಿಂದ ಭಾರತಕ್ಕೆ ಹೆಚ್ಚುವರಿ ಪ್ರೇರಣೆ ಸಿಗುತ್ತದೆ ಎಂದು ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸಂರ್ಶನವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, 'ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ತುಂಬಾ ಬಲಿಷ್ಠವಾಗಿವೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ ನಾಕೌಟ್ ಹಂತದಲ್ಲಿದ್ದೇವೆ ಎಂದು ಈಗ ತಿಳಿದಿರುವುದರಿಂದ ಅವರು ಏನನ್ನೂ ಹೇಳಬಹುದಾದ ಯಾವುದೇ ತಂಡವಿಲ್ಲ. ಈಗ ನಾವು ಗೆಲ್ಲುತ್ತೇವೆಯೋ ಸೋಲುತ್ತೇವೆಯೋ ಎಂಬುದನ್ನು ನಿರ್ಧರಿಸಬೇಕಾಗಿದೆ. ಆದ್ದರಿಂದ ಭಾರತ ಯಾವುದೇ ತಂಡಕ್ಕೆ ಆದ್ಯತೆ ನೀಡುತ್ತದೆ ಅಂದುಕೊಂಡಿಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾ ಜೊತೆ ಆಡಿರುವುದರಿಂದ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಆದ್ಯತೆ ನೀಡಬಹುದು. ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾಕ್ಕಿಂತ ಆಸ್ಟ್ರೇಲಿಯಾ ಬಗ್ಗೆ ಸ್ವಲ್ಪ ಚೆನ್ನಾಗಿ ಗೊತ್ತು. ಆದ್ದರಿಂದ ಅವರು ಆಸ್ಟ್ರೇಲಿಯಾಕ್ಕೆ ಆದ್ಯತೆ ನೀಡಬಹುದು. ಏಕೆಂದರೆ ಆಸ್ಟ್ರೇಲಿಯಾ ತನ್ನ ಸ್ಟಾರ್ ಬೌಲರ್‌ಗಳಿಲ್ಲದೆ ಆಡುತ್ತಿದೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ತಂಡದಲ್ಲಿಲ್ಲ, ಆದ್ದರಿಂದ ಭಾರತ ಅವರ ವಿರುದ್ಧ ಆಡಲು ಬಯಸಬಹುದು. ಇತ್ತೀಚಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಸಮಯದಲ್ಲಿದ್ದಂತೆ ಈ ಆಸ್ಟ್ರೇಲಿಯಾ ತಂಡ ಈಗ ಇಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಕಳವಳಕಾರಿ ವಿಷಯ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 59 ರನ್ ಗಳಿಸಿದರು. ಇತ್ತೀಚಿನ ದಿನಗಳಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಟ್ರಾವಿಸ್ ಹೆಡ್ 2023 ರ ವಿಶ್ವಕಪ್ ಫೈನಲ್ ಮತ್ತು 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಪಂದ್ಯ ಗೆಲ್ಲುವ ಶತಕಗಳನ್ನು ಬಾರಿಸಿದ್ದಾರೆ. ಆದ್ದರಿಂದ, ಭಾರತವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರೆ, ಟ್ರಾವಿಸ್ ಹೆಡ್ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ ಎಂದು ಟೀಮ್ ಇಂಡಿಯಾಕ್ಕೆ ಗವಾಸ್ಕರ್ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications