ಪ್ರವಾಸದ ಬದಲಿಗೆ ಅಭ್ಯಾಸ ಮಾಡಿದ್ದರೆ ಭಾರತ ಟೆಸ್ಟ್ ಸೋಲುತ್ತಿರಲಿಲ್ಲ: ಗವಾಸ್ಕರ್

ನವದೆಹಲಿ, ಆಗಸ್ಟ್ 06: ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯ ಸೋತಿರುವ ಭಾರತ ತಂಡವನ್ನು ಜರಿದಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೆಸ್ಟ್ ಸೋಲಲು ಅಭ್ಯಾಸದ ಕೊರತೆಯೇ ಕಾರಣ ಎಂದಿದ್ದಾರೆ.
ಆಟಗಾರರು ಟೆಸ್ಟ್ ಪ್ರಾರಂಭಕ್ಕೆ ಮುನ್ನಾ ದೊರೆತ ಸಮಯದಲ್ಲಿ ಯೂರೋಪ್ ಸುತ್ತುವ ಬದಲಿಗೆ ಅಭ್ಯಾಸ ಮಾಡಿದ್ದರೆ, ಹೀಗೆ ಹೀನಾಯ ಪ್ರದರ್ಶನ ತೋರುತ್ತಿರಲಿಲ್ಲ ಎಂದು ಅವರು ಕಟು ಟೀಕೆ ಮಾಡಿದ್ದಾರೆ.
ಬ್ಯಾಟ್ಸ್‌ಮನ್‌ಗಳು ಸ್ವಿಂಗ್ ಆಗುವ ಬಾಲನ್ನು ಆಡಲು ಪರದಾಡುತ್ತಿರುವುದಕ್ಕೆ ಕಾರಣ ಅವರು ಸರಿಯಾಗಿ ಅಭ್ಯಾಸ ಮಾಡಿಲ್ಲ, ತೋರಿಕೆಗೆಂಬಂತೆ ಒಂದು ಅಭ್ಯಾಸ ಪಂದ್ಯ ಆಡಿದ್ದಾರೆ ಅದನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ದೂರಿದ್ದಾರೆ.

ಯೂರೋಪ್ ಸುತ್ತು ಹೊಡೆದ ಆಟಗಾರರು
ಏಕದಿನ ಮತ್ತು ಟಿ20 ಸರಣಿಯ ನಂತರ ಕಾಲಾವಕಾಶದಲ್ಲಿ ಭಾರತದ ಆಟಗಾರರು ಯೂರೋಪ್ ಸುತ್ತು ಹೊಡೆದಿದ್ದಾರೆ ಆ ಸಮಯವನ್ನು ಅಭ್ಯಾಸ ಮಾಡಲು ವಿನಿಯೋಗಿಸಿದ್ದರೆ ಮೊದಲ ಪಂದ್ಯದಲ್ಲಿ ಗೆಲ್ಲಬಹುದಾಗಿತ್ತು ಎಂದು ಅವರು ಹೇಳಿದ್ದಾರೆ.

ದ.ಆಫ್ರಿಕಾದಲ್ಲಿ ಅಭ್ಯಾಸ ಪಂದ್ಯ ರದ್ದು ಮಾಡಿದ್ದರು
ಕಳೆದ ಬಾರಿಯ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸಹ ಭಾರತ ತಂಡ ಒಂದು ಅಭ್ಯಾಸ ಪಂದ್ಯವನ್ನು ರದ್ದು ಮಾಡಿತು ಆ ನಂತರ ಮೊದಲೆರಡು ಪಂದ್ಯದಲ್ಲಿ ಹೀನಾಯ ಸೋಲು ಕಂಡಿತು ಎಂದು ಅವರು ಉದಾಹರಣೆ ನೀಡಿದರು.

ಐದು ದಿನದ ವಿಶ್ರಾಂತಿ ಬೇಡ
ಟೆಸ್ಟ್ ಪಂದ್ಯಗಳ ನಡುವೆ ಐದು ದಿನ ವಿಶ್ರಾಂತಿ ಪಡೆಯುವ ಕ್ರಮದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಎರಡು ಪಂದ್ಯಗಳ ನಡುವೆ ಮೂರು ದಿನಗಳ ಅಂತರ ಸರಿ ಆದರೆ ಐದು ದಿನಗಳ ಅಂತರ ಇರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಹಲವು ಆಟಗಾರರು ಪ್ರವಾಸ ಮಾಡಿದ್ದರು
ಕೊಹ್ಲಿ, ಶಿಖರ್ ಧವನ್ ಸೇರಿದಂತೆ ಹಲವು ಆಟಗಾರರು ಟೆಸ್ಟ್ ಪ್ರಾರಂಭವಾಗುವ ಮುಂಚೆ ಪ್ರವಾಸಗಳಲ್ಲಿ ನಿರತರಾಗಿದ್ದರು. ಕೊಹ್ಲಿ ಹಾಗೂ ಶಿಖರ್ ಧವನ್ ಒಟ್ಟಾಗಿ ಕುಟುಂಬ ಸದಸ್ಯರೊಂದಿಗೆ ಇಂಗ್ಲೆಂಡ್‌ನಲ್ಲಿ ಪ್ರವಾಸ ಮಾಡಿದ್ದರು. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಎರಡನೇ ಟೆಸ್ಟ್ ಆಗಸ್ಟ್ 9ರಿಂದ ಪ್ರಾರಂಭ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತವು 31 ರನ್‌ಗಳ ಅಂತರದಿಂದ ಸೋಲು ಕಂಡಿತು. ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ತೋರಿದ್ದರು. ಎರಡನೇ ಟಸ್ಟ್ ಆಗಸ್ಟ್ 9 ರಿಂದ ಪ್ರಾರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications