ಭಾರತ ಈ ಪರಿಸ್ಥಿತಿಯಿಂದ ಹೊರಬರಲಿದೆ: ಸಿಎಎ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿಕೆ

ಸಿಎಎ ಬಗ್ಗೆ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಶನಿವಾರ ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮರಣಾರ್ಥ 26ನೇ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸುನಿಲ್ ಗವಾಸ್ಕರ್ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.
ದೆಹಲಿಯ ಜವಾಹರ್‌ಲಾಲ್ ನೆಹರು ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳು ಹಲ್ಲೆ ವಿಚಾರವಾಗಿ ಸುನಿಲ್ ಗವಾಸ್ಕರ್ ಮಾತನಾಡಿದರು. ಭಾರತ ಈ ಪ್ರಕ್ಷುಬ್ಧತೆಯಿಂದ ಹೊರಬರಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ತರಗತಿಯಲ್ಲಿರಬೇಕಾದ ಯುವ ಜನತೆ ಬೀದಿಗಳಲ್ಲಿದ್ದಾರೆ. ಅದರಲ್ಲೂ ಕೆಲ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿರಬೇಕಾದ ಪರಿಸ್ಥಿತಿಯಲ್ಲಿದ್ದಾರೆ ಎಂಬ ಹೇಳಿಕೆಯನ್ನು ಭಾರತದ ಮಾಜಿ ಲೆಜೆಂಡರಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ಜನರು ಒಗ್ಗೂಡುವ ಅಗತ್ಯವಿದೆ. ರಾಷ್ಟ್ರವಾಗಿ ನಾವೆಲ್ಲ ಮತ್ತಷ್ಟು ಎತ್ತರಕ್ಕೇರಬೇಕಾದರೆ ಎಲ್ಲರೂ ಜೊತೆಯಾಗಿ ಮುನ್ನಡೆಯಬೇಕು. ಪ್ರತಿಯೊಬ್ಬರೂ ಭಾರತೀಯರಾಗಿ ಇರಬೇಕು. ಕ್ರೀಡೆ ನಮಗೆ ಅದನ್ನು ಕಲಿಸಿದೆ ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.
ಭಾರತ ಅನೇಕ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಎದುರಿಸಿದೆ, ಇದೂ ಅದೇ ರೀತಿಯಾಗಿ ಬಗೆಹರಿಯಲಿದೆ. ನಾವು ಜೊತೆಯಾಗಿ ಮುನ್ನುಗ್ಗಿದರೆ ಗೆಲುವು ನಮ್ಮದಾಗಲಿದೆ. ಈ ಪರಿಸ್ಥಿತಿ ಭಾರತವನ್ನು ಮತ್ತಷ್ಟು ಬಲಿಷ್ಠಗೊಳ್ಳುವಂತೆ ಮಾಡುತ್ತದೆ. ದೇಶವಾಗಿ ನಾವೆಲ್ಲಾ ಜೊತೆಯಾಗಿ ಮುನ್ನುಗ್ಗಿದರೆ ಮಾತ್ರವೇ ಮತ್ತಷ್ಟು ಎತ್ತರಕ್ಕೇರಲು ಸಾಧ್ಯ ಎಂಬ ಮಾತನ್ನು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications