For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಹೊಸ ನಿಯಮದ ವಿರುದ್ಧ ಕಿಡಿ ಕಾರಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

Sunil Gavaskar Unhappy With Mandating The YO YO Test For Team India Selection

ಭಾರತ ಕ್ರಿಕೆಟ್ ಹಿರಿಯ ಪುರುಷರ ತಂಡಕ್ಕೆ ಆಯ್ಕೆಯಾಗಲು ಯೋ-ಯೋ ಮತ್ತು ಡೆಕ್ಸಾ ಫಿಟ್‌ನೆಸ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿರುವ ಬಿಸಿಸಿಐ ಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಬೇಕು, ಆದರೆ ಈ ರೀತಿಯ ಟೆಸ್ಟ್‌ಗಳು ಅನಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಸಿಸಿಐ ಇತ್ತೀಚೆಗೆ ಭಾರತ ತಂಡಕ್ಕೆ ಆಯ್ಕೆಯಾಗಲು, ಗಾಯಗೊಂಡ ಆಟಗಾರರು ತಂಡಕಕ್ಕೆ ಮರಳಲು ಯೋ-ಯೋ ಮತ್ತು ಡೆಕ್ಸಾ ಪರೀಕ್ಷೆ ಕಡ್ಡಾಯವಾಗಿದೆ.

ಒಬ್ಬ ಉದಯೋನ್ಮುಖ ಆಟಗಾರರ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಶತಕ, ದ್ವಿಶತಕಗಳನ್ನು ಬಾರಿಸಿ ಅಥವಾ ಬೌಲರ್ ಒಬ್ಬ 5 ಅಥವಾ 10 ವಿಕೆಟ್‌ಗಳನ್ನು ಪಡೆದು ಸಾಮರ್ಥ್ಯ ತೋರಿದ ಹೊರತಾಗಿಯೋ ಆತ ಯೋ-ಯೋ, ಡೆಕ್ಸಾ ಟೆಸ್ಟ್‌ನಲ್ಲಿ ಪಾಸಾಗದಿದ್ದರೆ ಆತ ಭಾರತ ತಂಡಕ್ಕೆ ಆಯ್ಕೆಯಾಗಲು ಅರ್ಹನಾಗುವುದಿಲ್ಲ.

ಬಿಸಿಸಿಐ ತೀರ್ಮಾನವನ್ನು ವ್ಯಂಗ್ಯವಾಗಿ ಟೀಕಿಸಿರುವ ಅವರು, "ಬಯೋಮೆಕಾನಿಸ್ಟ್‌ಗಳು ಮತ್ತು ದೇಹ ವಿಜ್ಞಾನ ತಜ್ಞರು, ಆಯ್ಕೆಗಾರರಾಗಿ ಯಾಕಿಲ್ಲ" ಎಂದು ಕೇಳಿದ್ದಾರೆ.

"ಆಯ್ಕೆಗಾರರ ಸಮಿತಿಯಲ್ಲಿ ಬಯೋ-ಮೆಕಾನಿಕ್ಸ್ ತಜ್ಞ ಅಥವಾ ದೇಹ ವಿಜ್ಞಾನದ ವ್ಯಕ್ತಿಯಾಗಿ ಸೇರಿಸಿಕೊಳ್ಳಿ. ಆಟಗಾರನ ಫಿಟ್ನೆಸ್ ಮಾತ್ರ ಆತನ ಅರ್ಹತೆ ಎಂದರೆ, ಮಾಜಿ ಕ್ರಿಕೆಟಿಗರಿಗಿಂತ ಈ ತಜ್ಞರು ಆಯ್ಕೆ ಸಮಿತಿಯಲ್ಲಿ ಇರುವುದು ಉತ್ತಮ" ಎಂದು ಬಿಸಿಸಿಐ ಕಾಲೆಳೆದಿದ್ದಾರೆ.

Sunil Gavaskar Unhappy With Mandating The YO YO Test For Team India Selection

ರನ್, ವಿಕೆಟ್‌ಗಿಂತ ಫಿಟ್ನೆಸ್‌ ಮುಖ್ಯ

"ತಂಡದಲ್ಲಿ ಸ್ಥಾನಪಡೆಯಲು ಇಬ್ಬರು ಆಟಗಾರರ ನಡುವೆ ಪೈಪೋಟಿ ಇದ್ದಾಗ, ಇಬ್ಬರು ಆಟಗಾರರಲ್ಲಿ ಯಾರು ಹೆಚ್ಚು ಫಿಟ್ ಆಗಿದ್ದಾರೆ ಎಂದು ಪರೀಕ್ಷೆ ಮಾಡಿ, ಅವರಿಗೆ ಅವಕಾಶ ಕೊಡಿ. ಅವರು ಗಳಿಸಿದ ರನ್ ಅಥವಾ ವಿಕೆಟ್‌ಗಳನ್ನು ಪರಿಗಣಿಸಬೇಡಿ" ಎಂದು ಗವಾಸ್ಕರ್ ಬಿಸಿಸಿಐ ನಿರ್ಣಯವನ್ನು ಟೀಕಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಯೋ-ಯೋ ಟೆಸ್ಟ್ ಕಡ್ಡಾಯಗೊಳಿಸಿದಾಗ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿಯಬೇಕಾಯಿತು ಎಂದು ಸುನಿಲ್ ಗವಾಸ್ಕರ್ ಹೇಳಿದರು.

"ತಾವು ಆಡುತ್ತಿದ್ದ ದಿನಗಳಲ್ಲಿ, ಇಬ್ಬರು ಕ್ರಿಕೆಟಿಗರು, ಭಾರತ ತಂಡಕ್ಕೆ ಆಯ್ಕೆಯಾಗಬೇಕಿದ್ದವರು, ಫಿಟ್‌ನೆಸ್‌ ಮಟ್ಟಗಳ ಹತ್ತಿರವೂ ಬರುತ್ತಿರಲಿಲ್ಲ. ಉತ್ತರ ಭಾರತದ ಆಟಗಾರರು ಮಾತ್ರ ಮೈದಾನದಲ್ಲಿ ಓಡುತ್ತಿದ್ದರು, ವ್ಯಾಯಾಮ ಮಾಡುತ್ತಿದ್ದರು. ದಕ್ಷಿಣ ಮತ್ತು ಪಶ್ಚಿಮ ಭಾರತದ ಆಟಗಾರರು ಮಾತ್ರ ಕ್ರಿಕೆಟ್ ಫಿಟ್‌ನೆಸ್ ಮೇಲೆ ಗಮನ ಕೇಂದ್ರೀಕರಿಸಿದರು. ಇದರಿಂದ ಹಲವರು ಅವಕಾ ಕಳೆದುಕೊಂಡರು" ಎಂದು ಹೇಳಿದರು.

"ನಾನು ಶಾಲಾದಿನಗಳ ಕ್ರಿಕೆಟ್ ಆಡುವಾಗಿನಿಂದಲೂ ಶಿನ್ ಸ್ಪ್ಲಿಂಟ್ಸ್ ಎನ್ನುವ ಸಮಸ್ಯೆ ಇತ್ತು. ಮೈದಾನದಲ್ಲಿ ಒಂದೆರಡು ಸುತ್ತು ಓಡುವುರಿಂದ ಮೊಣಕಾಲಿನ ಸುತ್ತಲಿನ ಸ್ನಾಯುಗಳು ಹಿಗ್ಗುತ್ತವೆ, ನಡೆಯಲು ನೋವುಂಟು ಮಾಡುತ್ತವೆ. ಮೊಣಕಾಲಿನ ಸಮಸ್ಯೆಯಿಂದಾಗಿ ನಾನು ಓಡಲು ಸಾಧ್ಯವಿಲ್ಲ ಎಂದು ಮ್ಯಾನೇಜರ್‌ಗಳಿಗೆ ತಿಳಿದಿತ್ತು. ಆದರೂ ಅವರು ಇತರೆ ಆಟಗಾರರಂತೆ ನನಗೂ ಮೈದಾನದ ಸುತ್ತಲೂ ಓಡಲು ಒತ್ತಾಯಿಸಿದ್ದರು" ಎಂದು ಹೇಳಿದ್ದಾರೆ.

ಬಿಸಿಸಿಐ ಆಟಗಾರರ ಫಿಟ್ನೆಸ್ ಪರೀಕ್ಷೆ ಮಾಡಬೇಕು,ಆದರೆ ಯೋ ಯೋ ಮತ್ತು ಡೆಕ್ಸಾ ಟೆಸ್ಟ್‌ಗಳನ್ನು ಕೈಬಿಡಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Story first published: Monday, January 9, 2023, 13:53 [IST]
Other articles published on Jan 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+