Sunil Gavaskar: ಟೀಮ್ ಇಂಡಿಯಾ ಅನುಭವಿ ಬೌಲರ್‌ಗಳ ಮೇಲೆ ಗವಾಸ್ಕರ್ ಬೇಸರವೇಕೆ?
ಪ್ರಸ್ತುತ ಭಾರತದಲ್ಲಿ 2024ರ ದುಲೀಪ್ ಟ್ರೋಫಿ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಮತ್ತು ಯುವ ಆಟಗಾರರು ಕೂಡ ಭಾಗವಹಿಸಿದ್ದಾರೆ. ಅನ್‌ಕ್ಯಾಪ್ಡ್ ಆಟಗಾರರು ಭಾರೀ ಸದ್ದು ಮಾಡುತ್ತಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಅನುಭವಿ ಆಟಗಾರರು ಆಡುತ್ತಿಲ್ಲ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗಾಗಿ ಚೈನ್ನೈನಲ್ಲಿ ಆರಂಭವಾಗಿರುವ ಅಭ್ಯಾಸ ಶಿಬಿರವನ್ನು ಸೇರಿಕೊಂಡಿದ್ದಾರೆ.

ಗವಾಸ್ಕರ್ ಬೇಸರವೇಕೆ?
ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಸುನೀಲ್ ಗವಸ್ಕಾರ್ ಟೀಮ್ ಇಂಡಿಯಾ ಸ್ಟಾರ್ ಬೌಲರ್‌ಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಮಿಡ್-ಡೇ ಪ್ರತಿಕೆಯ ಅಂಕಣದಲ್ಲಿ 'ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಬೌಲರ್‌ಗಳ ಅಲಭ್ಯತೆಯಿಂದಾಗಿ ಟೂರ್ನಿಯಲ್ಲಿ ಆಡುತ್ತಿರುವ ಬ್ಯಾಟರ್‌ಗಳ ಸಾಮರ್ಥ್ಯವನ್ನು ಅಳೆಯುವುದು ಕಷ್ಟಕರವಾಗಿದೆ ಎಂದು ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಬರೆವಣಿಗೆ ಮೂಲಕ ತಿಳಿಸಿದ್ದಾರೆ.
ಗವಸ್ಕಾರ್ ತಮ್ಮ ಅಂಕಣದಲ್ಲಿ 'ಈ ಬಾರಿ, ಎಲ್ಲಾ ಭಾರತೀಯ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಯಾವ ಬ್ಯಾಟರ್ ಉತ್ತಮ ಎಂದು ನೋಡುವುದು ಸುಲಭವಾಗಿಲ್ಲ. ಏಕೆಂದರೆ ಅವರು ಮೂಲತಃ ಎರಡನೇ ದರ್ಜೆಯ ಬೌಲರ್‌ಗಳೊಂದಿಗೆ ಆಡುತ್ತಿದ್ದಾರೆ. ಇದರಿಂದ ಮುಂಬರುವ ಋತುವಿನಲ್ಲಿ ಪಂದ್ಯಗಳು ಉತ್ತಮವಾಗಿದ್ದರೂ, ಬ್ಯಾಟರ್‌ಗಳು ಎಷ್ಟು ಉತ್ತಮರು ಎಂಬುದರ ಕುರಿತು ಆಯ್ಕೆದಾರರಿಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಅತ್ಯುನ್ನತ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಎಲ್ಲಾ ಭಾರತೀಯ ಆಟಗಾರರು ರಣಜಿ ಮತ್ತು ದುಲೀಪ್ ಟ್ರೋಫಿ ಪಂದ್ಯಗಳ ಕೆಲವು ಭಾಗಕ್ಕಾದರೂ ಲಭ್ಯವಿರಬೇಕು ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ಬಲಿಷ್ಠವಾಗಿರಬೇಕಾದರೆ ದೇಶಿಯ ರಚನೆಯೂ ಬಲಿಷ್ಠವಾಗಿರುವುದು ಅಗತ್ಯ. ಇದರರ್ಥ ದೇಶಕ್ಕಾಗಿ ಆಡುವ ಆಟಗಾರರು ರಣಜಿ ಮತ್ತು ದುಲೀಪ್ ಟ್ರೋಫಿ ಪಂದ್ಯಗಳ ಕೆಲವು ಭಾಗಗಳಿಗೆ ಲಭ್ಯವಾಗುವಂತೆ ರೆಡ್-ಬಾಲ್ ಟೂರ್ನಿಗಳನ್ನು ನಿಗದಿಪಡಿಸಬೇಕು. ಇಲ್ಲದಿದ್ದರೆ, ಯುವ ಪ್ರತಿಭೆಗಳಿಗೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗದೆ ವಂಚನೆ ಆಗಬಹುದು.
ಟೂರ್ನಿಯಲ್ಲಿ ಸ್ಟಾರ್ ಬೌಲರ್‌ಗಳ ಅನುಪಸ್ಥಿತಿಯ ಹೊರತಾಗಿಯೂ ಟೀಮ್ ಇಂಡಿಯಾದ ಹಲವು ಆಟಗಾರರು ದುಲೀಪ್ ಟ್ರೋಫಿಯ ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸಿದ್ದರು. ಆದರೆ, ಟೀಮ್ ಇಂಡಿಯಾದ ಬ್ಯಾಟರ್‌ಗಳು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications