Sunil Narine: ಕೆಕೆಆರ್ ಪರ ಇತಿಹಾಸ ನಿರ್ಮಿಸಿದ ಸ್ಪಿನ್ ಬೌಲರ್
ಕೋಲ್ಕತ್ತಾದಲ್ಲಿ ನಡೆದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಎಸ್‌ಆರ್‌ಎಚ್ ಪ್ರಸಕ್ತ ಸಾಲಿನಲ್ಲಿ ಮೊದಲ ಹ್ಯಾಟ್ರಿಕ್ ಸೋಲು ಕಂಡಿದೆ. ಕೆಕೆಆರ್ ತಂಡ ಗೆಲುವಿನ ಖಾತೆ ಓಪನ್ ಮಾಡುವಲ್ಲಿ ಹಲವು ಆಟಗಾರರು ತಮ್ಮದೇ ಆಧ ಕಾಣಿಕೆ ನೀಡಿದ್ದಾರೆ. ಈ ವೇಳೆ ವೆಂಕಟೇಶ್ ಅಯ್ಯರ್, ವೈಭವರ್ ಆರೋರಾ ತಮ್ಮ ಉತ್ತಮ ಆಟದ ಮೂಲಕ ಗಮನ ಸೆಳೆದರು. ಇದೇ ವೇಳೆ ಎಸ್‌ಆರ್‌ಎಚ್ ತಂಡದ ಸುನಿಲ್ ನರೈನ್ ವಿಶೇಷ ದಾಖಲೆಯನ್ನು ಮಾಡಿದ್ದಾರೆ. ಈ ಮೊದಲು ಈ ಸಾಧನೆಯನ್ನು ಯಾವೊಬ್ಬ ಆಟಗಾರ ಕೆಕೆಆರ್ ಪರ ಮಾಡಿರಲಿಲ್ಲ.
ಗುರುವಾರ ನಡೆದ ಪಂದ್ಯದಲ್ಲಿ ಸುನಿಲ್ ನರೈನ್ ತಮ್ಮ ಪಿರ್ಕಿ ಮೂಲಕ ಎಸ್‌ಆರ್‌ಎಚ್ ಬ್ಯಾಟರ್‌ಗಳನ್ನು ಕಾಡಿದರು. ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುತ್ತಿದ್ದಂತೆ ಕೆಕೆಆರ್ ಪರ ಯಾವೊಬ್ಬ ಬೌಲರ್ ಮಾಡದ ಸಾಧನೆಯನ್ನು ಸುನಿಲ್ ಮಾಡಿದರು. ಇವರು ಕೆಕೆಆರ್ ಪರ ಐಪಿಎಲ್‌ನಲ್ಲಿ 182 ಹಾಗೂ ಚಾಂಪಿಯನ್ಸ್ ಲೀಗ್‌ನಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಈ ಫ್ರಾಂಚೈಸಿ ಪರ 200 ವಿಕೆಟ್ ಪಡೆದ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಈ ಮೈಲುಗಲ್ಲು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಕೆಕೆಆರ್ ಪರ ನರೈನ್ ವಿಶೇಷ ಸಾಧನೆ
ಐಪಿಎಲ್‌ನಲ್ಲಿ ಸುನಿಲ್ ನರೈನ್ ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರು 182 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ವೇಳೆ ಇವರ ಸರಾಸರಿ 27 ಆಗಿದೆ. ಅಲ್ಲದೆ ಎಕಾನಮಿ 6.74 ಹೊಂದಿದ್ದಾರೆ. ಇವರು ಐಪಿಎಲ್‌ನಲ್ಲಿ 4 ವಿಕೆಟ್‌ಗಳನ್ನು ಏಳು ಬಾರಿ ಹಾಗೂ ಒಂದು ಬಾರಿ ಐದು ವಿಕೆಟ್ ಕಬಳಿಸಿದ ಹಿರಿಮೆ ಹೊಂದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆ ಕೆಕೆಆರ್ ತಂಡದ್ದಾಗಿದೆ. ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ಹಿರಿಮೆಯನ್ನು ಹೊಂದಿವೆ. ಈ ಬಳಿಕ ಈ ಸಾಲಿನಲ್ಲಿ ಕೆಕೆಆರ್ ಕಾಣಿಸಿಕೊಳ್ಳುತ್ತದೆ. ಕೋಲ್ಕತ್ತಾ 2012, 2014, 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಕೆಕೆಆರ್ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ಪ್ಲೇ ಆಫ್‌ಗೆ ಪ್ರವೇಶ ಪಡೆಯುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ಕೆಕೆಆರ್ ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆಡಿದ 4 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡ 2 ಜಯ, 2 ಸೋಲುಗಳನ್ನು ಕಂಡಿದ್ದು 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕೆಕೆಆರ್ ತನ್ನ ಮುಂದಿನ ಪಂದ್ಯವನ್ನು ಎಪ್ರಿಲ್ 8 ರಂದು ಎಲ್‌ಎಸ್‌ಜಿ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications