Sunil Narine: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಸರಿಗಟ್ಟಿದ ನರೈನ್
ಐಪಿಎಲ್ 2025 ರ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸಿತು. ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ತಮ್ಮ ಸ್ಪಿನ್ ಬೌಲಿಂಗ್ ಮ್ಯಾಜಿಕ್ ಅನ್ನು ಪ್ರದರ್ಶಿಸಿದರು. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಡೆಲ್ಲಿ ತಂಡದಿಂದ ಗೆಲುವನ್ನು ಕಸಿದುಕೊಂಡರು. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ನರೈನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಅವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಕೋಲ್ಕತ್ತಾ ತಂಡ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಅವರು ವಿಶ್ವ ದಾಖಲೆವೊಂದರನ್ನು ಸರಿಗಟ್ಟಿದರು.
ಸುನಿಲ್ ನರೈನ್ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 27 ರನ್ ಗಳಿಸಿದರು. ಇದಾದ ನಂತರ, ಅವರು 4 ಓವರ್‌ಗಳಲ್ಲಿ 29 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಕೋಲ್ಕತ್ತಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಫಾಫ್ ಡು ಪ್ಲೆಸಿಸ್, ಅಕ್ಸರ್ ಪಟೇಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ನರೈನ್ ಔಟ್ ಮಾಡಿದರು.

ವಿಶ್ವ ದಾಖಲೆ ಸರಿಗಟ್ಟಿದ ನರೈನ್
ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸುನಿಲ್ ನರೈನ್ 208 ವಿಕೆಟ್ ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದಕ್ಕೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅವರು ಜಂಟಿಯಾಗಿ ಮೊದಲ ಸ್ಥಾನವನ್ನು ತಲುಪಿದ್ದಾರೆ. ಅವರು ಇಂಗ್ಲೆಂಡ್‌ನ ಸಮಿತ್ ಪಟೇಲ್ ಅವರ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ತಂಡ ನಾಟಿಂಗ್‌ಹ್ಯಾಮ್‌ಶೈರ್ ಪರ ಸಮಿತ್ 208 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ದಾಖಲೆಯನ್ನು ಸರಿಗಟ್ಟಿದ ನಂತರ, ನರೈನ್ ಈಗ ಅವರನ್ನು ಹಿಂದಿಕ್ಕುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ನರೈನ್‌ಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ.
ಟಿ20 ಕ್ರಿಕೆಟ್‌ನಲ್ಲಿ ತಂಡವೊಂದಕ್ಕೆ ಅತಿ ಹೆಚ್ಚು ವಿಕೆಟ್ ಪಡೆದವರು
ಸಮಿತ್ ಪಟೇಲ್ (ನಾಟಿಂಗ್‌ಹ್ಯಾಮ್‌ಶೈರ್)- 208 ವಿಕೆಟ್‌ಗಳು
ಸುನಿಲ್ ನರೈನ್ (ಕೋಲ್ಕತ್ತಾ ನೈಟ್ ರೈಡರ್ಸ್)- 208* ವಿಕೆಟ್‌ಗಳು
ಕ್ರಿಸ್ ವುಡ್ (ಹ್ಯಾಂಪ್‌ಶೈರ್)- 199 ವಿಕೆಟ್‌ಗಳು
ಲಸಿತ್ ಮಾಲಿಂಗ (ಮುಂಬೈ ಇಂಡಿಯನ್ಸ್)- 195 ವಿಕೆಟ್‌ಗಳು
ಡೇವಿಡ್ ಪೇನ್ (ಗ್ಲೌಸೆಸ್ಟರ್‌ಶೈರ್)- 193 ವಿಕೆಟ್‌ಗಳು
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟಕ್ಕೆ 204 ರನ್‌ಗಳನ್ನು ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 190 ರನ್ ಗಳಿಸುವಲ್ಲಿ ಶಕ್ತವಾಯಿತು. ಕೆಕೆಆರ್ ಪಂದ್ಯವನ್ನು 14 ರನ್‌ಗಳಿಂದ ಗೆದ್ದುಕೊಂಡಿತು. ಇದು ಕೋಲ್ಕತ್ತಾ ತಂಡ ಆಡಿದ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು. ಕೆಕೆಆರ್ ಈ ಗೆಲುವಿನ ಬಳಿಕ ತನ್ನ ಖಾತೆಯಲ್ಲಿ 9 ಅಂಕಗಳನ್ನು ಹೊಂದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಸತತ ಎರಡು ಗೆಲ್ಲುವ ಪಂದ್ಯಗಳ ಸೋತಿದ್ದು, 10 ಪಂದ್ಯಗಳಿಂದ 6 ರಲ್ಲಿ ಗೆದ್ದು 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications