Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sunil Narine: ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ 3ನೇ ಆಟಗಾರ ಸುನಿಲ್‌ ನರೈನ್‌

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 54ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ 98 ರನ್‌ಗಳ ಭರ್ಜರಿ ಜಯ ಕಂಡಿದೆ. ಈ ಗೆಲುವಿನೊಂದಿಗೆ 16 ಅಂಕಗಳೊಂದಿಗೆ ಕೆಕೆಆರ್‌ ಅಗ್ರಸ್ಥಾನಕ್ಕೇರಿದೆ.

ಈ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರಂಭಿಕನಾಗಿ ಕಣಕ್ಕೀಳಿದ ಕೆಕೆಆರ್‌ ಸ್ಪಿನ್ನರ್‌ ಸುನಿಲ್‌ ನರೈನ್‌ ಅವರು ಸ್ಫೋಟಕ ಬ್ಯಾಟಿಂಗ್‌ ಮಾಡಿದರು. ಕೇವಲ 39 ಎಸೆತಗಳಲ್ಲಿ ಆರ್ಕಷಕ 7 ಸಿಕ್ಸರ್‌ ಹಾಗು 6 ಬೌಂಡರಿ ನೆರವಿನಿಂದ 81 ರನ್ ಕಲೆಹಾಕಿದರು. ಸುನಿಲ್‌ ನರೈನ್‌ ಅವರ ಅದ್ಭುತ ಇನ್ನಿಂಗ್ಸ್‌ ನಿಂದ ಲಕ್ನೋ ವಿರುದ್ಧ ಕೆಕೆಆರ್‌ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಯಿತು.

Sunil Narine made new record in IPL 2024

ಈ ಆವೃತ್ತಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸುನಿಲ್‌ ನರೈನ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಲಕ್ನೋ ಎದುರು 81 ರನ್‌ ಗಳಿಸುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಸುನಿಲ್‌ ನರೈನ್‌ ಹೊಸ ಮೈಲಿಗಲ್ಲು ತಲುಪಿದ್ದಾರೆ. 150ಕ್ಕೂ ಅಧಿಕ ವಿಕೆಟ್‌ಗಳು ಹಾಗು 1500ಕ್ಕೂ ಅಧಿಕ ರನ್‌ ಗಳಿಸಿದ ಕೇವಲ ಮೂರನೇ ಆಟಗಾರರ ಎಂಬ ವಿಶೇಷ ಹೆಗ್ಗಳಿಕೆಗೆ ಸುನಿಲ್‌ ನರೈನ್‌ ಪಾತ್ರರಾಗಿದ್ದಾರೆ.

Sunil Narine made new record in IPL 2024

ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟಾರ್‌ (ಸಿಎಸ್‌ಕೆ) ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು 2894 ರನ್‌ ಪೇರಸಿದ್ದು, 160 ವಿಕೆಟ್‌ಗಳನ್ನು ಪಡೆದು ಮೊದಲಿಗರಾಗಿದ್ದಾರೆ. ಬಳಿಕ ಸಿಎಸ್‌ಕೆ ಮಾಜಿ ಆಟಗಾರ ಡ್ವೇನ್‌ ಬ್ರಾವೋ 1560 ರನ್‌ಗಳು ಮತ್ತು 183 ವಿಕೆಟ್‌ಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಈ ಪಟ್ಟಿಗೆ ಸುನಿಲ್‌ ನರೈನ್‌ 1507 ರನ್‌ ಹಾಗು 176 ವಿಕೆಟ್‌ ಪಡೆದಿದ್ದಾರೆ.

Sunil Narine made new record in IPL 2024

ಸಿಕ್ಸರ್‌ ಕಿಂಗ್‌ ಆಗ್ತಾರಾ ನರೈನ್‌?:

ಸುನೀಲ್ ನರೈನ್ ಈ ಋತುವಿನಲ್ಲಿ ಅನೇಕ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಭಾನುವಾರ ನರೈನ್‌ ಲಕ್ನೋ ವಿರುದ್ಧ 82 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಇದಾದ ನಂತರ ಈ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದವರ ಸಾಲಿನಲ್ಲಿ ಸುನಿಲ್‌ ನರೈನ್‌ (32) ಮೊದಲ ಸ್ಥಾನದಲ್ಲಿದ್ದಾರೆ. ಈಗಾಗಲೇ ಹೆನ್ರಿಕ್ ಕ್ಲಾಸೆನ್ 31 ಸಿಕ್ಸರ್, ಅಭಿಷೇಕ್ ಶರ್ಮಾ 28 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಸುನಿಲ್ ನಾರಾಯಣ್ ಈ ಋತುವಿನಲ್ಲಿ 461 ರನ್ ಗಳಿಸಿದ ಮೂರನೇ ಅತಿ ಹೆಚ್ಚು ರನ್ ಗಳಿಸಿ ಆಟಗಾರನಾಗಿದ್ದಾರೆ.

Story first published: Monday, May 6, 2024, 13:54 [IST]
Other articles published on May 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+