SRH vs DC: ಸನ್, ಡೆಲ್ಲಿ ತಂಡಕ್ಕೆ ಗೆಲುವೊಂದೇ ಟಾರ್ಗೆಟ್
ಮುತ್ತಿನ ನಗರಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. 18ನೇ ಆವೃತ್ತಿಯ 55ನೇ ಪಂದ್ಯ ರೋಚಕತೆ ಹೆಚ್ಚಿಸಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ಚಿತ್ತ ಎರಡು ಅಂಕ ಮೇಲೆ ನೆಟ್ಟಿರಲಿದೆ. ಈ ವೇಳೆ ಡೆಲ್ಲಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲು ಕಾದಾಟ ನಡೆಸಿದರೆ, ಸನ್ ಲೆಕ್ಕಾಚಾರದ ಮೂಲಕ ಪ್ಲೇ ಆಫ್ ತಲಪುವ ಕನಸಿನಲ್ಲಿದೆ. ಈ ಪಂದ್ಯದಲ್ಲಿ ಆತಿಥೇಯ ತಂಡ ಸೋತಿದ್ದೇ ಆದಲ್ಲಿ ಅವರ ಪ್ಲೇ ಆಫ್ ಆಸೆ ಸಂಪೂರ್ಣ ಬಂದ ಆಗಲಿದೆ.
ಟೂರ್ನಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೆಲ್ಲಿ ಲೀಗ್ ಹಂತದ ಕೊನೆಯಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಬೇಕಿದೆ. ಈ ವೇಳೆ ಡೆಲ್ಲಿ ಹ್ಯಾಟ್ರಿಕ್ ಸೋಲಿನ ಭೀತಿಯನ್ನು ಸಹ ಅನುಭವಿಸುತ್ತಿದೆ. ಡೆಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ವಿರುದ್ಧ ಪಂದ್ಯವನ್ನ ಸೋತು ನಿರಾಸೆ ಅನುಭವಿಸಿತ್ತು. ಈಗ ಅಕ್ಷರ್ ಪಟೇಲ್ ಪಡೆಗೆ ಹ್ಯಾಟ್ರಿಕ್ ಸೋಲಿನ ಭೀತಿ ಕಾಡುತ್ತಿದೆ. ಸನ್ ರೈಸರ್ಸ್ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿ ಗೆಲುವು ದಾಖಲಿಸುವ ಗುರಿಯನ್ನು ಹೊಂದಿದೆ. ಸನ್ ತಂಡದ ನಾಲ್ಕನೇ ಗೆಲುವಿನ ಹುಡುಕಾಟದಲ್ಲಿದೆ.

ಲಯ ಕಂಡುಕೊಳ್ಳಬೇಕಿದೆ ಸ್ಟಾರ್ಸ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಅವಶ್ಯಕತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗತ್ತದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೇನ್, ಅನಿಕೇತ್ ವರ್ಮಾ ದೊಡ್ಡ ಇನಿಂಗ್ಸ್‌ಗೆ ನೆರವಾಗುವ ಬ್ಯಾಟಿಂಗ್ ನಡೆಸಬೇಕಿದೆ. ಅಂದಾಗ ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸಲು ಸಾಧ್ಯ. ಕಳೆದ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.
ಸನ್ ತಂಡದಲ್ಲಿ ಸ್ಟಾರ್ ಬೌಲರ್‌ಗಳ ದಂಡೇ ಇದೆ. ಈ ಬೌಲರ್‌ಗಳು ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಬೇಕಿದೆ. ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಜಯದೇವ್ ಉನಾದ್ಕಟ್, ಹರ್ಷಲ್ ಪಟೇಲ್ ಬಿಗುವಿನ ದಾಳಿ ನಡೆಸಬೇಕಿದೆ. ಜೀಶನ್ ಅನ್ಸಾರಿ ಸ್ಪಿನ್ ಜಾದು ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ.

ಗೆಲುವಿನ ಒತ್ತಡ
ಸತತ ಎರಡೂ ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಒತ್ತಡದಲ್ಲಿದೆ. ಡೆಲ್ಲಿ ಪರ ಫಾಫ್ ಡುಪ್ಲೇಸಿಸ್, ಅಭಿಷೇಕ್ ಪೋರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಆಲ್‌ರೌಂಡರ್ ವಿಪ್ರಜ್ ನಿಗಮ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಆಶುತೋಷ್ ಶರ್ಮಾ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಮಿಚೆಲ್ ಸ್ಟಾರ್ಕ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಬಿಗುವಿನ ದಾಳಿ ನಡೆಸಿದ್ದೇ ಆದಲ್ಲಿ 2 ಅಂಕ ಕಲೆ ಹಾಕಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications