ಐಪಿಎಲ್ 2020: ನೂತನ ಸಹಾಯಕ ಕೋಚ್ ನೇಮಕ ಮಾಡಿದ ಸನ್‌ರೈಸರ್ಸ್

ಹೊಸದಿಲ್ಲಿ, ಆಗಸ್ಟ್ 19: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಚಾಂಪಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡ, ಆಸ್ಟ್ರೇಲಿಯಾದ ಮಾಜಿ ಉಪನಾಯಕ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬ್ರಾಡ್ ಹ್ಯಾಡಿನ್ ಅವರನ್ನು ತಂಡದ ನೂತನ ಸಹಾಯ ಕೋಚ್ ಆಯ್ಕೆ ನೇಮಕ ಮಾಡಿರುವುದಾಗಿ ಸೋಮವಾರ ತಿಳಿಸಿದೆ.
ಹ್ಯಾಡಿನ್ ಅವರ ನೇಮಕಾತಿ ಕುರಿತ ವಿಷಯವನ್ನು ಸನ್‌ರೈಸರ್ಸ್ ತಂಡ ತನ್ನ ಸೋಷಿಯಲ್ಗ್ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. 2020ರ ಐಪಿಎಲ್ ಟೂರ್ನಿಯಲ್ಲಿ 41 ವರ್ಷದ ಮಾಜಿ ಕ್ರಿಕೆಟಿಗ ಆರೆಂಜ್ ಆರ್ಮಿಗೆ ತರಬೇತಿ ನೀಡಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗು ಸ್ಟಾರ್ ಕೋಚ್ ಟಾಮ್ ಮೂಡಿ ಜೊತೆಗಿನ ಒಪ್ಪಂದವನ್ನು ಅಂತ್ಯಗೊಳಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಬಳಿಕ ಟ್ರೆವೊರ್ ಬೇಲಿಸಿಸ್ ಅವರನ್ನು ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಇದೀಗ ತಂಡದ ಸಹಾಯಕ ಕೋಚ್ ಸ್ಥಾನದಲ್ಲಿದ್ದ ಸೈಮನ್ ಹೆಲ್ಮೊಟ್ ಅವರ ಸ್ಥಾನಕ್ಕೆ ಹ್ಯಾಡಿನ್ ಅವರನ್ನು ಕರೆತಂದಿದೆ.
ಐಪಿಎಲ್‌ನಲ್ಲಿ ಅದ್ಭುತ ಸಾಧನೆ ಮೆರೆದಿರುವ ಟ್ರೆವೊರ್ ಬೇಲಿಸಿಸ್, 2012 ಮತ್ತು 2015ರಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಕಳೆದ ತಿಂಗಳು ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದು ಕೂಡ ಇವರೆ.
ಮತ್ತೊಂದೆಡೆ 2011ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ಹ್ಯಾಡಿನ್ ಇದೀಗ ಕೋಚ್ ಜವಾಬ್ದಾರಿ ನಿಭಾಯಿಸುವ ಅಭಿಯಾನ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ 2017ರಲ್ಲಿ ಫೀಲ್ಡಿಂಗ್ ಕೋಚ್ ಮಾಡಿದ್ದ ಹ್ಯಾಡಿನ್ ಇದಕ್ಕೂ ಮುನ್ನ ಆಸ್ಟ್ರೇಲಿಯಾ 'ಎ' ತಂಡಕ್ಕೆ ತರಬೇತಿ ನೀಡಿದ ಅನುಭವವನ್ನೂ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications