For Quick Alerts
ALLOW NOTIFICATIONS  
For Daily Alerts
 

ಕಳಪೆ ಪ್ರದರ್ಶನಕ್ಕೆ ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ಕೇನ್ ವಿಲಿಯಮ್ಸನ್ ನೂತನ ನಾಯಕ

Sunrisers Hyderabad announced Kane Williamson as new captain for rest of IPL 2021

ಈ ಬಾರಿಯ ಐಪಿಎಲ್‌ನ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿಕೊಂಡು ಬಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಭಾರೀ ಬದಲಾವಣೆಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಈಗ ಬದಲಾವಣೆಯಾಗಿದ್ದು ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಲಾಗಿದೆ.

ಈ ಮಹತ್ವದ ಪ್ರಕಟಣೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಅಧಿಕೃತವಾಗಿ ಘೋಷಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಐಪಿಎಲ್‌ನ ಮುಂಬರುವ ಎಲ್ಲಾ ಪಂದ್ಯಗಳಲ್ಲಿಯೂ ಕೇನ್ ವಿಲಿಯಮ್ಸನ್ ನಾಯಕನಾಗಿರಲಿದ್ದಾರೆ ಎಂದು ಎಸ್‌ಆರ್‌ಹೆಚ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

"ನಾಳೆ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಾಗೂ ಐಪಿಎಲ್ 2021ರ ಉಳಿದ ಎಲ್ಲಾ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೇನ್ ವಿಲಿಯಮ್ಸನ್ ನಾಯಕನಾಗಿ ಮುನ್ನಡೆಸಲಿದ್ದಾರೆ"

"ತಂಡದ ಮ್ಯಾನೇಜ್‌ಮೆಂಟ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿದೇಶಿ ಆಟಗಾರರ ಸಂಯೋಜನೆಯಲ್ಲಿಯೂ ಬದಲಾವಣೆಯನ್ನು ಮಾಡಿಕೊಳ್ಳಲಿದೆ" ಎಂದು ಈ ಪ್ರಕಟಣೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ಹೇಳಿಕೊಂಡಿದೆ.

"ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಕಳೆದ ಕೆಲ ವರ್ಷಗಳಿಂದ ಮುನ್ನಡೆಸಿರುವ ಡೇವಿಡ್ ವಾರ್ನರ್ ಅವರ ಕೊಡುಗೆಯನ್ನು ಗೌರವ ಪೂರ್ವಕವಾಗಿ ಪರಿಗಣಿಸುತ್ತದೆ. ಮುಂದಿನ ಪಂದ್ಯಗಳನ್ನು ಎದುರಿಸುವ ಸಂದರ್ಭದಲ್ಲಿ ಅಂಗಳದಲ್ಲಿ ಹಾಗೂ ಅಂಗಳದಾಚೆಗಿನ ಯಶಸ್ಸಿಗೆ ಡೇವಿಡ್ ವಾರ್ನರ್ ಅವರಿಂದ ಸಂಪೂರ್ಣ ಸಹಕಾರ ದೊರೆಯುವ ಭರವಸೆಯಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Story first published: Sunday, May 2, 2021, 7:37 [IST]
Other articles published on May 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+