Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG vs SRH: ಪ್ಲೇ ಅಫ್‌ ರೇಸ್‌ನಿಂದ ತನ್ನೊಂದಿಗೆ ಲಕ್ನೋ ತಂಡವನ್ನು ಕರೆದುಕೊಂಡು ಹೊರ ನಡೆದ ಹೈದರಾಬಾದ್‌

ಲೀಗ್‌ ಹಂತದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿದ ಫಲವಾಗಿ 18ನೇ ಆವೃತ್ತಿಯ ಐಪಿಎಲ್‌ನ 61ನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಲಕ್ನೋ ಸೂಪರ್‌ ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಸನ್‌ ತಂಡ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪ್ಲೇ ಆಫ್‌ ಕನಸಿಗೆ ಕೊಳ್ಳೆ ಇಟ್ಟಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಲ್ಕು ವಿಕೆಟ್‌ ಕಳೆದುಕೊಂಡು, 10 ಎಸೆತ ಬಾಕಿ ಇರುವಂತೆ ಅಗತ್ಯ ರನ್ ಕಲೆ ಹಾಕಿ ಮಿಂಚಿತು.

Sunrisers Hyderabad Crush Lucknow Super Giants by 6 Wickets Shatter Their Playoff Hopes

ಅಭಿಷೇಕ್‌ ಅರ್ಧಶತಕ

ಟ್ರಾವಿಸ್ ಹೆಡ್‌ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಅಥರ್ವ್ ತೆಡೆ 13 ರನ್‌ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್‌ಗೆ ಇಶನ್‌ ಕಿಶನ್‌ ಹಾಗೂ ಅಭಿಷೇಕ್‌ ಶರ್ಮಾ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 35 ಎಸೆತಗಳಲ್ಲಿ 82 ರನ್‌ ಸೇರಿಸಿ ಅಬ್ಬರಿಸಿತು. ಅಭಿಷೇಕ್ ಶರ್ಮಾ 4 ಬೌಂಡರಿ, 6 ಸಿಕ್ಸರ್ ಸೇರಿದಂತೆ 59 ರನ್‌ ಸಿಡಿಸಿ ಔಟ್ ಆದರು. ಇಶಾನ್‌ ಕಿಶನ್‌ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 35 ರನ್‌ ಬಾರಿಸಿ ಔಟ್ ಆದರು.

ನಾಲ್ಕನೇ ವಿಕೆಟ್‌ಗೆ ಕಮಿಂದು ಮೆಂಡಿಸ್ ಹಾಗೂ ಹೆನ್ರಿಕ್ ಕ್ಲಾಸೇನ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 56 ರನ್‌ ಸಿಡಿಸಿತು. ಕ್ಲಾಸೇನ್‌ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 47 ರನ್‌ ಬಾರಿಸಿದರು. ಅನಿಕೆತ್ ವರ್ಮಾ ನಿತೇಶ್‌ ರೆಡ್ಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಭರ್ಜರಿ ಆರಂಭ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕರಾದ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಮ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಸನ್‌ ತಂಡದ ಬೌಲರ್‌ಗಳು ವಿಫಲರಾದರು. ಈ ಜೋಡಿ 10.3 ಓವರ್‌ಗಳಲ್ಲಿ 115 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮಿಚೆಲ್ ಮಾರ್ಷ್‌ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 65 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಐಡೆನ್ ಮಾರ್ಕ್ರಮ್ ಸಹ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರು 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 61 ರನ್‌ ಬಾರಿಸಿ ಹರ್ಷಲ್‌ ಪಟೇಲ್‌ಗೆ ಕ್ಯಾಚ್‌ ನೀಡಿದರು.

Sunrisers Hyderabad Crush Lucknow Super Giants by 6 Wickets Shatter Their Playoff Hopes

ನಾಯಕ ರಿಷಭ್‌ ಪಂತ್‌ ಮತ್ತೊಮ್ಮೆ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಉಳಿದಂತೆ ಭರವಸೆಯ ಆಟಗಾರ ಆಯುಷ್ ಬಡೋನಿ, ಅಬ್ದುಲ್ ಸಮದ್ ಸೇರಿದಂತೆ ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್‌ ಪೂರನ್ ನೈಜ್ಯ ಬ್ಯಾಟಿಂಗ್ ನಡೆಸಿ 6 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 45 ರನ್‌ ಬಾರಿಸಿ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು.

ಸನ್ ತಂಡದ ಪರ ಇಶಾನ್ ಮಾಲಿಂಗ್ 2 ವಿಕೆಟ್ ಕಬಳಿಸಿದರು. ಉಳಿದಂತೆ ಹರ್ಷಲ್‌ ಪಟೇಲ್‌, ನಿತೀಶ್‌ ಕುಮಾರ್ ರೆಡ್ಡಿ, ಹರ್ಷ ದುಬೆ ತಲಾ ಒಂದು ವಿಕೆಟ್ ಪಡೆದರು.

Story first published: Monday, May 19, 2025, 23:49 [IST]
Other articles published on May 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+