IPL 2025: ಸನ್‌ರೈಸರ್ಸ್ ಯಾರನ್ನು ಉಳಿಸಿಕೊಳ್ಳಬಹುದು: ಯಾವ ವಿದೇಶಿ ಆಟಗಾರರಿಗೆ ಸಿಗುತ್ತೆ ಅವಕಾಶ?
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮಾಲೀಕರು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ 10 ತಂಡಗಳು ತಮ್ಮ ಭಿನ್ನ, ವಿಭಿನ್ನ ಲೆಕ್ಕಾಚಾರವನ್ನು ಆರಂಭಿಸಿವೆ. ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಹ ಈಗ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ತೊಡಗಿದೆ.
ಬಿಸಿಸಿಐಗೆ ಐಪಿಎಲ್ ಮಾಲೀಕರು ಅಕ್ಟೋಬರ್ 31ರೊಳಗೆ ರಿಟೇನ್ಶನ್ ಲೀಸ್ಟ್ ನೀಡಬೇಕು. ಬಿಸಿಸಿಐ ಹೊರಡಿಸಿರುವ ರಿಟೇನ್ಶನ್ ಪಾಲೀಸಿಯ ಅಡಿಯಲ್ಲಿ ಒಂದು ತಂಡ ಮ್ಯಾಕ್ಸಿಮಮ್ ಆರು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಸಹ ಸೇರಿದೆ. ಗರಿಷ್ಠ ಇಬ್ಬರು ವಿದೇಶಿ ಆಟಗಾರರು, ಇಬ್ಬರು ಅನ್ ಕ್ಯಾಪ್ಡ್ ಆಟಗಾರರುನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಸನ್ ತಂಡದಲ್ಲಿ ಯಾರಿಗೆಲ್ಲಾ ಸಿಗಬಹುದು ಅವಕಾಶ
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ, ಫೈನಲ್‌ಗೆ ಅರ್ಹತೆ ಪಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದೆ. ಕಳೆದ ಬಾರಿ ಈ ತಂಡ ಪ್ಯಾಟ್ ಕಮಿನ್ಸ್ ಅವರನ್ನು ದುಬಾರಿ ಬೆಲೆಗೆ ಖರೀದಿಸಿತ್ತು. ಈಗ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಇನ್ನೊಬ್ಬ ವಿದೇಶಿ ಆಟಗಾರನ ಸ್ಥಾನ ಟ್ರಾವಿಸ್ ಹೆಡ್ ಪಡೆಯಬಹುದು. ಇವರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಇವರಿಗೆ ಫ್ರಾಂಚೈಸಿ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಇವರು ಕಳೆದ ಆವೃತ್ತಿಯಲ್ಲಿ 567 ರನ್ ಸಿಡಿಸಿದ್ದಾರೆ. ಈ ವರ್ಷ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ ಹಿರಿಮೆ ಟ್ರಾವಿಸ್ ಅವರದ್ದಾಗಿದೆ.
ಯುವ ಬ್ಯಾಟರ್‌ಗೆ ಚಾನ್ಸ್?
ಕಳೆದ ಬಾರಿಯ ಐಪಿಎಲ್‌ನಲ್ಲಿ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸಾಧಕ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ. ಕಳೆದ ಆವೃತ್ತಿಯಲ್ಲಿ ಇವರು 24 ಸಿಕ್ಸರ್ ಬಾರಿಸಿದ ಹಿರಿಮೆ ಹೊಂದಿದ್ದಾರೆ. 17ನೇ ಆವೃತ್ತಿಯಲ್ಲಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿರುವ ಆಟಗಾರ.

ಈ ಮೂವರ ಬಗ್ಗೆ ಚಿಂತನೆ
ಸನ್ ರೈಸರ್ಸ್ ತಂಡ ಹ್ಯಾನ್ರಿ ಕ್ಲಾಸೆನ್, ಟೀಮ್ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಅವರಲ್ಲಿ ಒಬ್ಬರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಆಟಗಾರರನ್ನು ಉಳಿಸಿಕೊಳ್ಳಲು ಸನ್ ತಂಡ ಹಲವು ಲೆಕ್ಕಾಚಾರವನ್ನು ನಡೆಸಲಿದೆ. ಇವರನ್ನು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಾರಿ ಸಹ ಸನ್ ತಂಡ ಅಳೆದು ತೂಗಿ ಆಟಗಾರರನ್ನು ಉಳಿಸಿಕೊಳ್ಳಲಿದೆ. ಸನ್ವೀರ್ ಸಿಂಗ್ ಹಾಗೂ ಅಬ್ದುಲ್ ಸಮದ್ ಸಹ ಮಾಲೀಕರ ಚಿತ್ತ ಕದ್ದ ಪ್ಲೇಯರ್ಸ್. ಈ ಆಟಗಾರರನ್ನು ಫ್ರಾಂಚೈಸಿ ಅನ್ ಕ್ಯಾಪ್ಡ್ ಆಟಗಾರರನ್ನಾಗಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಸನ್ ತಂಡ ಯಾರನ್ನು ಉಳಿಸಿಕೊಂಡಿದೆ ಯಾರನ್ನು ಕೈ ಬಿಟ್ಟಿದೆ ಎಂದು ಅಕ್ಟೋಬರ್ 31ರಂದು ತಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications