SRH IPL 2025: ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಂಪೂರ್ಣ ವೇಳಾ ಪಟ್ಟಿ
ಒಂದು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಈಗಾಗಲೇ ಐಪಿಎಲ್‌ಗೆ ಚಾಲನೆ ಸಿಕ್ಕಿದ್ದು, ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಆರ್‌ಆರ್ ತಂಡಗಳು ಕಾದಾಟ ನಡೆಸಲಿವೆ.
ಸನ್‌ರೈಸರ್ಸ್ ಹೈದರಾಬಾದ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ ಸೋಲು ಕಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ತಂಡ ಶುಭಾರಂಭ ಮಾಡುವ ಇರಾದೆಯನ್ನು ಹೊಂದಿದೆ. ಸನ್‌ರೈಸರ್ಸ್ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದ್ದು ಹೈದರಾಬಾದ್ ಹಾಗೂ ವೈಜಾಗ್‌ನಲ್ಲಿ ತವರಿನ ಪಂದ್ಯಗಳನ್ನು ಆಡಲಿದೆ.

ಬಲ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಾಢ್ಯವಾಗಿದೆ. ಯಾವುದೇ ಬೌಲಿಂಗ್ ವಿಭಾಗದ ರಣ ತಂತ್ರವನ್ನು ಬುಡಮೇಲು ಮಾಡುವ ಕ್ಷಮತೆಯನ್ನು ಎಸ್‌ಆರ್‌ಎಚ್ ತಂಡ ಹೊಂದಿದೆ. ಸನ್ ರೈಸರ್ಸ್ ತಂಡದಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೇನ್ ಅವರಂತಹ ಸ್ಟಾರ್ ಆಟಗಾರರು ಇದ್ದಾರೆ. ಇನ್ನು ಕನ್ನಡಿಗ ಅಭಿನವ್ ಮನೋಹರ್ ಸಹ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ.
ತಂಡಕ್ಕೆ ಮೊಹಮ್ಮದ್ ಶಮಿ ಆಗಮನದೊಂದಿಗೆ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತೆ ಆಗಿದೆ. ಇವರು ಪವರ್ ಪ್ಲೇನಲ್ಲಿ ಹೊಸ ಚೆಂಡಿನೊಂದಿಗೆ ಎದುರಾಳಿಗಳನ್ನು ಕಾಡಬಲ್ಲರು.
ದೌರ್ಬಲ್ಯ
ಸನ್ ತಂಡದಲ್ಲಿ ಹೆಸರಾಂತ ಖ್ಯಾತ ಆಟಗಾರರು ಇದ್ದಾರೆ. ಆದರೆ ಈ ಸ್ಟಾರ್ ಆಟಗಾರರು ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಕೊಂಚ ಹಿನ್ನಡೆ ಅನುಭವಿಸಬಹುದು. ಅಲ್ಲದೆ ತಂಡದ ಬೆಂಚ್ ಸ್ಟ್ರೆಂತ್ ಕೊಂಚ ವೀಕ್ ಇದ್ದಂತೆ ಕಾಣುತ್ತದೆ. ಈ ವೇಳೆ ಸ್ಟಾರ್ ಬೌಲರ್‌ಗಳು ಸಹ ರನ್‌ಗಳನ್ನು ನೀಡುತ್ತಾರೆ. ಹೀಗಾಗಿ ಬೌಲಿಂಗ್ ವಿಭಾಗವೇ ಈ ತಂಡದ ಚಿಂತೆ ಹೆಚ್ಚಿಸಿದೆ.
ಸನ್‌ರೈಸರ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ
- ಮಾರ್ಚ್ 23: ರಾಜಸ್ಥಾನ್ ರಾಯಲ್ಸ್ ವಿರುದ್ಧ, ಮಧ್ಯಾಹ್ನ 3:30
- ಮಾರ್ಚ್ 27: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ, ಸಂಜೆ 7:30
- ಮಾರ್ಚ್ 30: ದೆಹಲಿ ಕ್ಯಾಪಿಟಲ್ಸ್ ವಿರುದ್ಧ, ಮಧ್ಯಾಹ್ನ 3:30
- ಏಪ್ರಿಲ್ 3: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಸಂಜೆ 7:30
- ಏಪ್ರಿಲ್ 6: ಗುಜರಾತ್ ಟೈಟಾನ್ಸ್ ವಿರುದ್ಧ, ಸಂಜೆ 7:30
- ಏಪ್ರಿಲ್ 12: ಪಂಜಾಬ್ ಕಿಂಗ್ಸ್ ವಿರುದ್ಧ, ಸಂಜೆ 7:30
- ಏಪ್ರಿಲ್ 17: ಮುಂಬೈ ಇಂಡಿಯನ್ಸ್ ವಿರುದ್ಧ, ಸಂಜೆ 7:30
- ಏಪ್ರಿಲ್ 23: ಮುಂಬೈ ಇಂಡಿಯನ್ಸ್ ವಿರುದ್ಧ, ಸಂಜೆ 7:30
- ಏಪ್ರಿಲ್ 25: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಸಂಜೆ 7:30
- ಮೇ 2: ಗುಜರಾತ್ ಟೈಟಾನ್ಸ್ ವಿರುದ್ಧ, ಸಂಜೆ 7:30
- ಮೇ 5: ದೆಹಲಿ ಕ್ಯಾಪಿಟಲ್ಸ್ ವಿರುದ್ಧ, ಸಂಜೆ 7:30
- ಮೇ 10: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಸಂಜೆ 7:30
- ಮೇ 13: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ, ಸಂಜೆ 7:30
- ಮೇ 18: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ, ಸಂಜೆ 7:30
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications