IPL 2025 SRH: ಸನ್ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ ಸ್ಟಾರ್ ಬ್ಯಾಟರ್ ಫಾರ್ಮ್
ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‍ಗಳ ಅಬ್ಬರ ಜೋರಾಗಿರುತ್ತದೆ. ಈ ಬಾರಿಯ ಐಪಿಎಲ್‌ನಲ್ಲೂ ಹಲವು ಬ್ಯಾಟರ್‍ಗಳು ತಮ್ಮ ಅಮೋಘ ಪ್ರದರ್ಶನದ ಬಲದಿಂದ ತಂಡಕ್ಕೆ ನೆರವಾಗುತ್ತಿದ್ದಾರೆ. ಆದರೆ ಆ ಒಂದು ತಂಡದಲ್ಲಿ ಸ್ಟಾರ್ ಬ್ಯಾಟರ್‍ಗಳು ಇದ್ದರೂ ಸಹ ತಂಡ ಸಾಲು ಸಾಲು ಸೋಲುಗಳನ್ನು ಕಂಡಿದೆ. ಆ ತಂಡದ ಸ್ಪೋಟಕ ಬ್ಯಾಟರ್‍ಗಳ ಫಾರ್ಮ್ ನಿಜಕ್ಕೂ ತಂಡದ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಈ ಐಪಿಎಲ್‌ನಲ್ಲಿ ಮೂರ ನೂರು ರನ್‌ಗಳ ಟಾರ್ಗೆಟ್‌ನ್ನು ಮುಟ್ಟು ಮಾಡುವ ತಂಡಗಳಲ್ಲಿ ಈ ತಂಡ ಒಂದು ಎಂದು ಪರಿಗಣಿಸಲಾಗಿತ್ತು. ಆದರೆ ಆಟಗಾರರ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಆಡಿದ ಮೊದಲ ಪಂದ್ಯದಲ್ಲಿ ಅಬ್ಬರದ ಆಟವಾಡಿ ಎದುರಾಳಿ ತಂಡಗಳ ತಲೆ ನೋವಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ, ಈಗ ತನ್ನ ಬ್ಯಾಟಿಂಗ್ ತಲೆ ನೋವು ಹೆಚ್ಚಿಸಿದೆ. ಸ್ಫೋಟಕ ಬ್ಯಾಟರ್‌ಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿರುವ ಸನ್ ತಂಡದ, ಬ್ಯಾಟರ್‌ಗಳು ಫ್ಲಾಫ್ ಶೋ ನೀಡುತ್ತಿದ್ದಾರೆ. ಇದು ನಿಶ್ಚಿತವಾಗಿ ಆ ತಂಡದ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ರನ್ನರ್ ಅಪ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ನಿರಾಸೆ ಅನುಭವಿಸಿದೆ. ಅಲ್ಲದೆ ಬ್ಯಾಟರ್‌ಗಳು ಪವರ್ ಪ್ಲೇನ ಸಂಪೂರ್ಣ ಲಾಭವನ್ನು ಪಡೆದು ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇದು ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಪರಿಣಮ ಬೀರುತ್ತಿದೆ. ಸನ್ ತಂಡದಲ್ಲಿರುವ ಟಾಪ್ ಆರ್ಡರ್ ಬ್ಯಾಟರ್‌ಗಳು ಈ ಬಾರಿ ನಿರಾಸೆಯ ಕಡಲಿನಲ್ಲಿ ತಮ್ಮ ಪಯಣ ನಡೆಸಿದ್ದಾರೆ.
ಸ್ಟಾರ್ ಬ್ಯಾಟರ್‌ಗಳ ಮೌನ ಮಾತು
ಸನ್ ತಂಡದ ಟಾಪ್ ಆರ್ಡರ್ ಕಲೆ ಹಾಕಿದ ರನ್ ನೋಡಿದರೆ, ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸುತ್ತದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಅಭಿಷೇಕ್ ಶರ್ಮಾ ಈ ಬಾರಿ ರನ್ ಕಲೆ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಇವರು ಆಡಿದ 5 ಪಂದ್ಯಗಳಲ್ಲಿ 10.20ರ ಸರಾಸರಿಯಲ್ಲಿ 51 ರನ್ ಕಲೆ ಹಾಕಿದ್ದಾರೆ. ಇವರ ಬ್ಯಾಟ್ ಮೌನಕ್ಕೆ ಶರಣಾಗಿರುವುದು ಸನ್ ತಂಡದ ಚಿಂತೆಯನ್ನು ದ್ವಿಗುಣಗೊಳಿಸಿದೆ.
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಟ್ರಾವಿಸ್ ಹೆಡ್ ಆಡಿರುಬ 5 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಭರವಸೆಯನ್ನು ಮೂಡಿಸಿದ್ದ ಇಶಾನ್ ಕಿಶನ್ 31.75ರ ಸರಾಸರಿಯನ್ನು ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಆಧಾರ ಸ್ಥಂಭ ಹ್ಯಾನ್ರಿಕ್ ಕ್ಲಾಸೇನ್ 30.40ರ ಸರಾಸರಿಯಲ್ಲಿ 152 ರನ್ ಕಲೆ ಹಾಕಿದ್ದಾರೆ. ಇನ್ನು ಇದೇ ತಂಡದಲ್ಲಿ ಹೆಸರು ಮಾಡಿದ್ದ ನಿತೀಶ್ ಕುಮಾರ್ ರೆಡ್ಡಿ ಸಹ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಎಡವುತ್ತಿದ್ದಾರೆ.
ಪ್ರಶಸ್ತಿಯ ಕನಸನ್ನು ಕಾಣುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿರುವ ಸನ್ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದು, ಗೆಲುವಿನ ಟ್ರ್ಯಾಕ್‌ಗೆ ಮರಳುವ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications