ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂದುಕೊಂಡ ಪ್ರದರ್ಶನ ನೀಡಲಿಲ್ಲ. ಹೈದರಾಬಾದ್ ತಂಡದ ಶಕ್ತಿ ಎಂದೇ ಬಿಂಬಿತವಾಗಿದ್ದ ಆ ಒಂದು ವಿಭಾಗ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಸ್ಟಾರ್ ಆಟಗಾರರಿಂದಲೇ ತುಂಬಿಕೊಂಡಿರುವ ಸನ್ ಹ್ಯಾಟ್ರಿಕ್ ಸೋಲಿನ ಮುಖಭಂಗವನ್ನು ಅನುಭವಿಸಿದೆ. ಹಾಗಿದ್ದಾರೆ ಹೈದರಾಬಾದ್ ಕೋಲ್ಕತ್ತಾದಲ್ಲಿ ನಡೆದ ಪಂದ್ಯವನ್ನು ಸೋಲಲು ಏನು ಕಾರಣ ಎಂಬ ಬಗ್ಗೆ ವರದಿ ಇಲ್ಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಟಾಸ್ ಸೋತರೂ ಕೆಕೆಆರ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಸೇರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಹೈದರಾಬಾದ್ 16.4 ಓವರ್‌ಗಳಲ್ಲಿ 120 ರನ್ ಸೇರಿಸಿ ಸೋಲು ಕಂಡಿದೆ. ಈ ಪಂದ್ಯವನ್ನು ಸೋಲಲು ಏನು ಕಾರಣ ಎಂಬ ಪ್ರಶ್ನೆ ಮೂಡಿದೆ. ಆಗ ಸನ್ ತಂಡ ಮಾಡಿದ ಆ ಒಂದು ತಪ್ಪು ಎದ್ದು ಕಾಣುತ್ತದೆ. ಆ ತಪ್ಪು ಯಾವುದು?

ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ 201 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್‍ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೈದರಾಬಾದ್ ತಂಡದ ಎಲ್ಲಾ ಸ್ಟಾರ್ ಬ್ಯಾಟರ್‍ಗಳು ತಮ್ಮ ಬೆಲೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ನಡೆದ ಘಟನೆ ಮತ್ತೊಮ್ಮೆ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಜರುಗಿತು. ಕೆಕೆಆರ್ ಬೌಲಿಂಗ್ ದಾಳಿಗೆ ತತ್ತರಿಸಿದ ಹೈದರಾಬಾದ್ ಟಾಪ್ ಆರ್ಡರ್ ಪೆವಿಲಿಯನ್ ಪರೇಡ್ ನಡೆಸಿತು.
ಟ್ರಾವಿಸ್ ಹೆಡ್ (4), ಅಭಿಷೇಕ್ ಶರ್ಮಾ (2) ಮತ್ತು ಇಶಾನ್ ಕಿಶನ್ (2) ಅವರಂತಹ ಸ್ಪೋಟಕ ಬ್ಯಾಟರ್‍ಗಳು ಎರಡಂಕಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದು ಹೈದರಾಬಾದ್ ತಂಡದ ಸೋಲಿಗೆ ಆರಂಭದ ಕಾರಣವಾಯಿತು. ಒಂದು ವೇಳೆ ಈ ಮೂವರು ಬ್ಯಾಟರ್‍ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್ ಇಂದಿನ ಪಂದ್ಯವನ್ನು ಗೆಲ್ಲುವ ಅವಕಾಶವನ್ನು ಹೊಂದಿತ್ತು. ಆದರೆ, ಇಡೀ ತಂಡ 16.4 ಓವರ್‍ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಹೈದರಾಬಾದ್ ಸೋಲು ಕಂಡಿತು.
ಇದರೊಂದಿಗೆ 32.5 ಕೋಟಿ ರೂ. ಬೆಲೆಯ ಹೈದರಾಬಾದ್ ತಂಡದ ಟಾರ್ಪ್ ಆರ್ಡರ್ ಸಂಪೂರ್ಣ ವಿಫಲಾಯಿತು. ಕೆಕೆಆರ್ ಪರ ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು.