ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 41ನೇ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ನಡುವೆ ನಡೆಯಲಿದೆ. ಏಪ್ರಿಲ್ 23 ರ ಬುಧವಾರದಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ 2025 ರಲ್ಲಿ ಇದು ಹೈದರಾಬಾದ್ ತಂಡಕ್ಕೆ 8ನೇ ಪಂದ್ಯವಾಗಿದ್ದರೆ, ಇದುವರೆಗೆ ಮುಂಬೈ 9 ಪಂದ್ಯಗಳನ್ನು ಆಡಿದೆ.
ಮುಂಬೈ ಇಂಡಿಯನ್ಸ್ ತಮ್ಮ ಕೊನೆಯ ಮೂರು ಪಂದ್ಯಗಳನ್ನು ಗೆದ್ದು ತಮ್ಮ ಗೆಲುವಿನ ಓಟವನ್ನು ಮುಂದುವರೆಸುವ ಉತ್ಸಾಹದಲ್ಲಿದೆ. ಹೈದರಾಬಾದ್ ವಿರುದ್ಧ ಗೆದ್ದು ಪ್ಲೇ ಆಫ್ ರೇಸ್‌ನಲ್ಲಿ ಉಳಿಯುವ ಲೆಕ್ಕಚಾರದಲ್ಲಿ ಮುಂಬೈ ತಂಡ ಇದೆ. ಮತ್ತೊಂದೆಡೆ, ಸನ್ ರೈಸರ್ಸ್ ಹೈದರಾಬಾದ್ ತಮ್ಮ ಕೊನೆಯ 5 ಪಂದ್ಯಗಳಲ್ಲಿ ಕೇವಲ ಒಂದು ಜಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಲೀಗ್‌ನಲ್ಲಿ ಜೀವಂತವಾಗಿರಲು ಹೆಣಗಾಡುತ್ತಿದೆ.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಬಲಾಬಲ, ಸಂಭಾವ್ಯ ಪ್ಲೇಯಿಂಗ್-11, ಸ್ಟಾರ್ ಆಟಗಾರರ ಫಾರ್ಮ್ ಮತ್ತು ಪಿಚ್ ವರದಿ ಬಗ್ಗೆ ಇಲ್ಲಿದೆ ಮಾಹಿತಿ.
ಐಪಿಎಲ್ 2025 ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಏಪ್ರಿಲ್ 17 ರಂದು ನಡೆದ ಪಂದ್ಯದಲ್ಲಿ ಹೈದರಾಬಾದ್ ನೀಡಿದ 162 ರನ್‌ಗಳ ಗೆಲುವಿನ ಗುರಿಯನ್ನು ಸುಲಭವಾಗಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೇಡು ತಿರಿಸಿಕೊಳ್ಳಲು ಹೈದರಾಬಾದ್ ಸಜ್ಜಾಗಿದೆ.
ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ 24 ಪಂದ್ಯಗಳು ನಡೆದಿವೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 14 ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ಕೇವಲ 10 ಬಾರಿ ಮಾತ್ರ ಗೆದ್ದಿದೆ. ಕಳೆದ 6 ಮುಖಾಮುಖಿಗಳಲ್ಲಿಯೂ ಸಹ, ಮುಂಬೈ ತಂಡವು 4-2 ಅಂತರದಲ್ಲಿ ಮುನ್ನಡೆಯಲ್ಲಿದೆ.
ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 190 ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿವೆ. ಈ ಪಿಚ್‌ನಲ್ಲಿ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡುವುದು ಸುಲಭವಾಗಿದೆ. ಆದರೆ ಎದುರಾಳಿ ತಂಡಗಳ ಬೌಲರ್ಸ್ ಕೂಡ ಇಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಿ ಹೈಸ್ಕೋರಿಂಗ್ ಗಳಿಸಿದರೆ, ಎದುರಾಳಿ ತಂಡದ ಮೇಲೆ ಒತ್ತಡ ಹೇರಬಹುದು.
ಟ್ರಾವಿಸ್ ಹೆಡ್- 7 ಪಂದ್ಯ, 242 ರನ್
ಅಭಿಷೇಕ್ ಶರ್ಮಾ- 7 ಪಂದ್ಯ, 232 ರನ್
ಹೆನ್ರಿಕ್ ಕ್ಲಾಸೆನ್- 7 ಪಂದ್ಯ, 210 ರನ್
ಹರ್ಷಲ್ ಪಟೇಲ್- 6 ಪಂದ್ಯ, 9 ವಿಕೆಟ್
ಪ್ಯಾಟ್ ಕಮ್ಮಿನ್ಸ್- 7 ಪಂದ್ಯ, 7 ವಿಕೆಟ್
ಮೊಹಮ್ಮದ್ ಶಮಿ- 7 ಪಂದ್ಯ, 5 ವಿಕೆಟ್
ಎಸ್‌ಆರ್‌ಹೆಚ್ ಸಂಭಾವ್ಯ ಪ್ಲೇಯಿಂಗ್-11: ಪ್ಯಾಟ್ ಕಮಿನ್ಸ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹರ್ಷಲ್ ಪಟೇಲ್, ವಿಯಾನ್ ಮುಲ್ಡರ್, ಈಶಾನ್ ಮಾಲಿಂಗ, ಮೊಹಮ್ಮದ್ ಶಮಿ, ಸಿಮ್‌ರಾಜೀತ್ ಸಿಂಗ್, ಮತ್ತು ಜೀಶನ್ ಅನ್ಸಾರಿ.
ಸೂರ್ಯಕುಮಾರ್ ಯಾದವ್- 8 ಪಂದ್ಯ, 333 ರನ್
ತಿಲಕ್ ವರ್ಮಾ- 8 ಪಂದ್ಯ, 231 ರನ್
ರಯಾನ್ ರಿಕೆಲ್ಟನ್- 8 ಪಂದ್ಯ, 204 ರನ್
ಹಾರ್ದಿಕ್ ಪಾಂಡ್ಯ- 7 ಪಂದ್ಯ, 11 ವಿಕೆಟ್
ವಿಘ್ನೇಶ್ ಪುತ್ತೂರು- 4 ಪಂದ್ಯ, 6 ವಿಕೆಟ್
ಟ್ರೆಂಟ್ ಬೌಲ್ಟ್- 8 ಪಂದ್ಯ, 6 ವಿಕೆಟ್
ಎಂಐ ಸಂಭಾವ್ಯ ಪ್ಲೇಯಿಂಗ್-11: ಹಾರ್ದಿಕ್ ಪಾಂಡ್ಯ (ನಾಯಕ), ರಿಯಾನ್ ರಿಕಲ್ಟನ್ (ವಿಕೆಟ್‌ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಮಿಚೆಲ್ ಸ್ಯಾಂಟ್ನರ್, ತಿಲಕ್ ವರ್ಮಾ, ವಿಲ್ ಜಾಕ್ಸ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್ ಮತ್ತು ವಿಘ್ನೇಶ್ ಪುತ್ತೂರು.