ಪಠಾಣ್ ನೀಡಿದ ಸಲಹೆ ನನ್ನ ಆಟದ ಬೆಳವಣಿಗೆಗೆ ಕಾರಣವಾಯಿತು ಎಂದ ಯುವ ಕ್ರಿಕೆಟಿಗ

ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ಯುವ ಪ್ರತಿಭೆಗಳ ಪ್ರದರ್ಶನ ಗಮನಸೆಳೆದಿದೆ. ಅದರಲ್ಲಿ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದ ಓರ್ವ ಆಟಗಾರ ಪ್ರದರ್ಶನ ಕೂಡ ಹಲವರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಸ್ವತಃ ಆ ಯುವ ಆಟಗಾರನೇ ಮಾತನಾಡಿದ್ದು ತನ್ನ ಬೆಳವಣಿಗೆಗೆ ಇರ್ಫಾನ್ ಪಠಾಣ್ ಸಹಕಾರಿಯಾದ ರೀತಿಯನ್ನು ವಿವರಿಸಿದ್ದಾರೆ.
ಹೈದರಾಬಾದ್ ಪರವಾಗಿ ಕಣಕ್ಕಿಳಿದು ಗಮನಸೆಳೆದ ಆ ಆಟಗಾರ ಬೇರೆ ಯಾರ ಅಲ್ಲ. ಅದು ಜಮ್ಮು ಕಾಶ್ಮೀರ ಮೂಲದ ಅಬ್ದುಲ್ ಸಮದ್. ಕೆಲ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡಿದ್ದ ಸಮದ್ ಹೈದರಾಬಾದ್ ತಂಡದ ಪರವಾಗಿ 11 ಪಂದ್ಯಗಳಲ್ಲಿ ಕಣಕ್ಕಿಳಿದು 22ರ ಸರಾಸರಿಯಲ್ಲಿ 111 ರನ್ ಗಳಿಸಿದ್ದಾರೆ. ಇದರಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿ ಒಳಗೊಂಡಿತ್ತು.
ತೃಪ್ತಿದಾಯಕ ಐಪಿಎಲ್ ಆವೃತ್ತಿಯ ಬಳಿಕ ಮಾತನಾಡಿದ ಅಬ್ದುಕ್ ಸಮದ್ ಈ ಹಿಂದೆ ತಾನು ತಾಳ್ಮೆಯ ಕೊರತೆಯಿಂದ ಸಾಕಷ್ಟು ಬಳಲಿದ್ದೆ. ಅಂಡರ್19 ಸಂದರ್ಭದಲ್ಲಿ ದೊಡ್ಡ ಹೊಡೆತಗಳು ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಆದರೆ ಭಾರತೀಯ ಆಲ್‌ರಂಡರ್ ಇರ್ಫಾನ್ ಪಠಾಣ್ ಅವರ ಸಲಹೆಯಿಂದಾಗಿ ಅದರಿಂದ ಹೊರಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಇರ್ಫಾನ್ ಪಠಾಣ್ ನನ್ನ ಬ್ಯಾಟಿಂಗ್‌ನಲ್ಲಿನ ಸುಧಾರಣೆಗೆ ಮಹಳ ಪ್ರಮುಖ ಕಾರಣರಾಗಿದ್ದಾರೆ ಎಂದು ಸಮದ್ ವಿವರಿಸಿದ್ದಾರೆ. ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಸಮದ್ ಆಟದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಒಂದು ಭಾರತದ ಪರವಾಗಿ ಕಣಕ್ಕಿಳಿಯಲು ಕಾಶ್ನೀರ ಮೂಲದ ಈ ಆಟಗಾರ ಸಮರ್ಥನಾಗುತ್ತಾನೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications