SRH Playoff Scenario: ಸನ್ ಪ್ಲೇಆಫ್ ಪ್ರವೇಶಿಸುವುದ ಹೇಗೆ? ಇಲ್ಲಿದೆ ಮಾಹಿತಿ
ಬುಧವಾರ ಹೈದರಾಬಾದ್‌ನಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್‌ನ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಲೆಕ್ಕಾಚಾರ ಆರಂಭವಾಗಿದೆ. ಎಸ್‌ಆರ್‌ಎಚ್ ಆಡಿದ 8 ಪಂದ್ಯಗಳಲ್ಲಿ 2 ಜಯ, 6 ಸೋಲು ಕಂಡಿದ್ದು, 4 ಅಂಕ ಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
ಕಳೆದ ಬಾರಿಯ ರನ್ನರ್ ಅಪ್ ಎಸ್‌ಆರ್‌ಎಚ್ ತಂಡ ಪ್ರಸಕ್ತ ಲೀಗ್‌ನಲ್ಲಿ ರನ್ ಕಲೆ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಲೀಗ್‌ನಲ್ಲಿ ಇನ್ನು ಆರು ಪಂದ್ಯಗಳನ್ನು ಎಸ್‌ಆರ್‌ಎಚ್ ಆಡಲಿದೆ. ಇನ್ನು ಮುಂದಿನ ಎಲ್ಲ ಪಂದ್ಯಗಳೂ ಎಸ್‌ಆರ್‌ಎಚ್ ಪಾಲಿಗೆ ಮಹತ್ವದಾಗಿವೆ. ಮುಂದಿನ ಎಲ್ಲ ಪಂದ್ಯಗಳನ್ನೂ ಸಹ ಗೆಲ್ಲುವ ಅನಿವಾರ್ಯತೆ ಎಸ್‌ಆರ್‌ಎಚ್ ತಂಡಕ್ಕೆ ಇದೆ.

ಸದ್ಯ ಎಸ್‌ಆರ್‌ಎಚ್ ಬುಟ್ಟಿಯಲ್ಲಿ 4 ಅಂಕಗಳಿವೆ. ಒಂದು ವೇಳೆ ಮುಂದಿನ ಆರೂ ಪಂದ್ಯಗಳನ್ನು ಗೆದ್ದಲ್ಲಿ ಈ ತಂಡದ ಒಟ್ಟು ಅಂಕಗಳು 16 ಆಗಲಿವೆ. ಆಗ ಸನ್ ತಂಡ ಸುಲಭವಾಗಿ ಪ್ಲೇ ಆಫ್‌ಗೆ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನು ಒಂದು ವೇಳೆ ಮುಂದಿನ ಆರು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಕಂಡರೂ ಸಹ ಉತ್ತಮ ರನ್ ರೇಟ್ ಹೊಂದಿದ್ದರೆ ಪ್ಲೇ ಆಫ್‌ಗೆ ಪ್ರವೇಶಿಸುವ ಆಸೆ ಫಲಿಸಬಹುದು. ಅದಕ್ಕಾಗಿ ಮುಂದಿನ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿದೆ.
ಪ್ಲೇ ಆಫ್ ಲೆಕ್ಕಾಚಾರ
ಎಸ್‌ಆರ್‌ಎಚ್ ತಂಡ 16 ಅಂಕಗಳನ್ನು ಕಲೆ ಹಾಕುವತ್ತ ದೃಷ್ಟಿ ನೆಟ್ಟಲ್ಲಿ ನಿಶ್ಚಿತವಾಗಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಈ ತಂಡದ ಒಂದೇ ಒಂದು ಸೋಲು ಅದರ ಮುಂದಿನ ಹಾದಿಯ ಕನಸಿಗೆ ಪೆಟ್ಟು ನೀಡಲಿದೆ. ಇನ್ನು ಒಂದು ವೇಳೆ ಒಂದು ಪಂದ್ಯ ಸೋತರೂ ಉಳಿದ ತಂಡಗಳ ಫಲಿತಾಂಶದ ಮೇಲೆ ಎಸ್‌ಆರ್‌ಎಚ್ ಭವಿಷ್ಯ ನಿಂತಿರಲಿದೆ. ಎಸ್‌ಆರ್‌ಎಚ್ ಮುಂದಿನ ಹಾದಿ ನಿಶ್ಚಿತವಾಗಿ ಕಠಿಣವಾಗಿದೆ.
ಸನ್‌ರೈಸರ್ಸ್ ತಂಡ ಮುಂದಿನ 6 ಪಂದ್ಯಗಳಲ್ಲಿ 2 ಪಂದ್ಯಗಳನ್ನು ತನ್ನ ತವರು ಅಂಗಳದಲ್ಲಿ ಆಡಲಿದೆ. ಮುಂದಿನ ನಾಲ್ಕು ಪಂದ್ಯಗಳನ್ನು ಎಸ್‌ಆರ್‌ಎಚ್ ತವರಿನಾಚೆ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಎಸ್‌ಆರ್‌ಎಚ್ ಸಂಘಟಿತ ಆಟದ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರರು ಲಯಕ್ಕೆ ಮರಳಬೇಕಿದೆ. ಅಂದಾಗ ಮಾತ್ರ ಮುಂದಿನ ಹಂತದ ಕನಸು ನನಸಾಗುತ್ತದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಂದಿನ ಪಂದ್ಯಗಳು
ಏ.25, ಚೆನ್ನೈ ಸೂಪರ್ ಕಿಂಗ್ಸ್ (ಚೆನ್ನೈ)
ಮೇ 2, ಗುಜರಾತ್ ಟೈಟನ್ಸ್ (ಅಹಮದಾಬಾದ್)
ಮೇ 5, ಡೆಲ್ಲಿ ಕ್ಯಾಪಿಟಲ್ಸ್ (ಹೈದರಾಬಾದ್)
ಮೇ 10, ಕೋಲ್ಕತ್ತಾ ನೈಟ್ ರೈಡರ್ಸ್ (ಹೈದರಾಬಾದ್)
ಮೆ 13, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು)
ಮೇ 18, ಲಕ್ನೋ ಸೂಪರ್ ಜೈಂಟ್ಸ್ (ಲಕ್ನೋ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications