ವಿಶ್ವಕಪ್ ಫೈನಲ್ ಪಂದ್ಯಕ್ಕೂ ಸೂಪರ್ ಓವರ್ ಬಂತು
ದುಬೈ, , ಜ, 29: ಟಿ-20 ಪಂದ್ಯದ ಫಲಿತಾಂಶ ನಿರ್ಧಾರ ಮಾಡುತ್ತಿದ್ದ ಸೂಪರ್ ಓವರ್ ಇದೀಗ ಏಕದಿನ ಕ್ರಿಕೆಟ್ ಗೂ ಕಾಲಿಟ್ಟಿದೆ. ಅದು ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೂಲಕ ಎಂಬುದು ವಿಶೇಷ.
ವಿಶ್ವಕಪ್ ಏಕದಿನ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಅಗತ್ಯಬಿದ್ದರೆ ಸೂಪರ್ ಓವರ್ ಬಳಸಿಕೊಳ್ಳಲಾಗುವುದು ಎಂದು ಜನವರಿ 28 ರಂದು ನಡೆದ ಐಸಿಸಿ ಸಭೆ ತಿಳಿಸಿದೆ. ಫೈನಲ್ ಪಂದ್ಯ ಟೈ ಆದರೆ ಅಥವಾ ಫಲಿತಾಂಶ ಬಾರದಿದ್ದರೆ ಟ್ರೋಫಿಯನ್ನು ಎರಡೂ ತಂಡಗಳಿಗೆ ಹಂಚಲಾಗುವುದು ಎಂದು ಐಸಿಸಿ ಈ ಹಿಂದೆ ತಿಳಿಸಿತ್ತು. ಆದರೆ ಈಗ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯಲು ತೀರ್ಮಾನ ಮಾಡಿದೆ.[ಟಿ20: ಸ್ಪಿನ್ನರ್ ಸುನಿಲ್ 'ಸೂಪರ್' ವಿಶ್ವದಾಖಲೆ]

ಆದರೆ ಸೆಮಿಫೈನಲ್ ಮತ್ತು ಕ್ವಾಟರ್ ಫೈನಲ್ ಪಂದ್ಯಗಳಿಗೆ ಸೂಪರ್ ಓವರ್ ನೀಡಲಾಗುವುದಿಲ್ಲ. ಮೊದಲೇ ತಿಳಿಸಿದಂತೆ ಲೀಗ್ ಹಂತ ಮತ್ತು ರನ್ ರೇಟ್ ಆಧಾರದಲ್ಲಿಯೇ ತಂಡ ಮುಂದಿನ ಸುತ್ತಿಗೆ ತೇರ್ಗಡೆಯಾಗುತ್ತದೆ.
ಫೈನಲ್ ಪಂದ್ಯದ ವೇಳೆ ಅಗತ್ಯಬಿದ್ದರೆ ಸೂಪರ್ ಓವರ್ ಆಡಿಸಲು ಸಕಲ ಸಿದ್ಧತೆ ಮಾಡಿಕೊಂಡಿರಲಾಗುತ್ತದೆ. ವಾತಾವರಣ ಕೈ ಕೊಡದಿದ್ದರೆ ಫಲಿತಾಂಶವನ್ನು ಅಂದೇ ನೀಡಲು ಈ ಕ್ರಮ ಅನುಸರಿಲಸಾಗುತ್ತಿದೆ ಎಂದು ಐಸಿಸಿ ಅಧಿಕಾರಿಗಳು ಗುರುವಾರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.[ಐಸಿಸಿ ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?]
ನಾಯಕರು ರಿಲೀಫ್ : ತಂಡದ ನಿಧಾನಗತಿಯ ಬೌಲಿಂಗ್ ಗೆ ದಂಡ ತೆರುತ್ತಿದ್ದ ನಾಯಕರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಹಿಂದಿನ ಪಂದ್ಯಾವಳಿಯ ಕೊನೆ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿ ನಿಷೇಧಕ್ಕೆ ಒಳಗಾಗುವ ಪರಿಸ್ಥಿತಿಯಿದ್ದರೆ ಅದು ವಿಶ್ವಕಪ್ ಗೆ ಅನ್ವಯವಾಗಲ್ಲ.[ಧೋನಿ ಅಭಿಮಾನಿಗಳಿಗೆ ಈ ಸುದ್ದಿ ರುಚಿಸುವುದಿಲ್ಲ!]
ಹಿಂದಿನ ಪಂದ್ಯಾವಳಿಯ ಯಾವ ಲೆಕ್ಕಾಚಾರಗಳನ್ನು ವಿಶ್ವಕಪ್ ಒಳಗೊಂಡಿರುವುದಿಲ್ಲ, ಇಲ್ಲಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದರೆ ಮಾತ್ರ ಅದು ಮುಂದಿನ ಪಂದ್ಯದ ಮೇಲೆ ಅಥವಾ ತಂದ ನಾಯಕನ ಮೇಲೆ ಪರಿಣಾಮ ಬೀರುತ್ತದೆ.
Story first published: Wednesday, January 3, 2018, 10:12 [IST]
Other articles published on Jan 3, 2018
Read in English: Super Over to be used if WC final is tie
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications