ಜೂನ್ 3 ಸೋಮವಾರ, 2024ರ ಟಿ20 ವಿಶ್ವಕಪ್‌ನ ಮೂರನೇ ಪಂದ್ಯ ಸೂಪರ್-ಓವರ್ ಅಂತ್ಯಕೊಂಡಿದೆ. ಟಿ20 ವಿಶ್ವಕಪ್‌ನ ಮೂರನೇ ಪಂದ್ಯ ನಮೀಬಿಯಾ ಮತ್ತು ಒಮಾನ್ ನಡುವೆ ನಡೆಯಿತು.
109 ರನ್‌ಗಳ ಗುರಿ ಬೆನ್ನಟ್ಟಿದ ನಮೀಬಿಯಾ 20 ಓವರ್‌ಗಳಲ್ಲಿ ಕೇವಲ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಸೂಪರ್ ಓವರ್‌ನಲ್ಲಿ ನಮೀಬಿಯಾ ಅದ್ಭುತ ಪ್ರದರ್ಶನ ನೀಡಿ ಒಮಾನ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು.

ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿಗೆ ಸೂಪರ್ ಓವರ್ ನಡೆದಿರುವುದು. ಇದಕ್ಕೂ ಮುನ್ನ ಮೂರು ಬಾರಿ ಸೂಪರ್ ಓವರ್ ಪಂದ್ಯಗಳು ನಡೆದಿವೆ. 3 ಸೂಪರ್-ಓವರ್‌ಗಳ ಬಗ್ಗೆ ಮತ್ತು ಯಾವ ತಂಡ ಯಾವಾಗ ಗೆದ್ದಿತು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
2007ರಲ್ಲಿ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯನ್ನು ನಡೆಸಲಾಗಿತ್ತು. ಇದೇ ವರ್ಷ ಭಾರತ ಚಾಂಪಿಯನ್ ಆಗಿತ್ತು. ಬಳಿಕ ಭಾರತ ಇದುವರೆಗೂ ಟಿ20 ಚಾಂಪಿಯನ್ ಆಗಿಲ್ಲ. ಮೊದಲ ಬಾರಿಗೆ ಟಿ20 ವಿಶ್ವಕಪ್ ಸೂಪರ್ ಓವರ್ 2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು.
ಆಗ ಪಂದ್ಯ ಟೈ ಆಗಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೂಪರ್ ಓವರ್ ಆಡಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೂಡ 20 ಓವರ್‌ಗಳಲ್ಲಿ 141 ರನ್ ಗಳಿಸಿತು.
ನಂತರ ಬಾಲ್ ಔಟ್ ಆಡಿಸಲಾಗಿತ್ತು. ಎರಡೂ ತಂಡಗಳ ತಲಾ ಐದು ಆಟಗಾರರು ಚೆಂಡನ್ನು ವಿಕೆಟ್‌ಗೆ ಹೊಡೆಯಬೇಕಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ನಾಲ್ವರು ಬೌಲರ್‌ಗಳು ತಮ್ಮ ಎಸೆತಗಳಿಂದ ವಿಕೆಟ್‌ಗೆ ಹೊಡೆದರು.
ಆದರೆ ಪಾಕಿಸ್ತಾನದ ಒಬ್ಬ ಬೌಲರ್ ಕೂಡ ವಿಕೆಟ್‌ಗೆ ಹೊಡೆಯಲು ಸಾಧ್ಯವಾಗಲಿಲ್. ಹೀಗಾಗಿ ಭಾರತ ಪಂದ್ಯವನ್ನು ಗೆದ್ದಿತು. ಈ ನಿಯಮವನ್ನು ಮೊದಲ ಬಾರಿಗೆ ಬಳಸಲಾಗಿತ್ತು. ಪಂದ್ಯ ಟೈ ಆದ ನಂತರವೂ ಪಾಕಿಸ್ತಾನಿ ಆಟಗಾರರಿಗೆ ಈ ನಿಯಮದ ಅರಿವಿರಲಿಲ್ಲ. ಆದರೆ ಟೀಮ್ ಇಂಡಿಯಾ ಆಟಗಾರರು ಚೆನ್ನಾಗಿ ಅಭ್ಯಾಸ ಮಾಡಿದ್ದರು.
2012ರ ವಿಶ್ವಕಪ್‌ನಲ್ಲಿ ಎರಡು ಪಂದ್ಯ ಟೈ ಆಗಿತ್ತು. ಈ ಎರಡೂ ಪಂದ್ಯಗಳಲ್ಲಿ ಒಂದು ತಂಡ ನ್ಯೂಜಿಲೆಂಡ್ ಆಗಿತ್ತು ಎಂಬುದು ಅದ್ಭುತ ಸಂಗತಿ. ಸೂಪರ್-8ರಲ್ಲಿ ಎರಡೂ ಪಂದ್ಯಗಳು ಟೈ ಆಗಿದ್ದವು.
ಸೂಪರ್-8ರಲ್ಲಿ ಮೊದಲು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಸೂಪರ್ ಪಂದ್ಯವಾಡಿದ್ದವು. ನ್ಯೂಜಿಲೆಂಡ್ ಮೊದಲು ಬ್ಯಾಟ್ ಮಾಡಿ 171 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 174 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯದ ಫಲಿತಾಂಶವನ್ನು ಸೂಪರ್ ಓವರ್ ಮೂಲಕ ನಿರ್ಧರಿಬೇಕಾಯಿತು. ಹೀಗಾಗಿ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 12 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡವು 7 ರನ್ ಗಳಿಸುವ ಮೂಲಕ ಪಂದ್ಯ ಸೋಲ ಕಂಡಿತ್ತು.
ಎರಡನೇ ಪಂದ್ಯ ವೆಸ್ಟ್ ಇಂಡೀಸ್ ಜೊತೆ ನ್ಯೂಜಿಲೆಂಡ್ ಪಂದ್ಯ ಟೈ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 139 ರನ್ ಕಲೆಹಾಕಿತ್ತು.
ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಕೂಡ 20 ಓವರ್ ಗಳಲ್ಲಿ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ನಂತರ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ 17 ರನ್ ಗಳಿಸಿತು. ವೆಸ್ಟ್ ಇಂಡೀಸ್ 19 ರನ್ ಗಳಿಸಿ ಪಂದ್ಯ ಗೆದ್ದಿತು.