ಮಂಧಾನ ಸ್ಫೋಟಕ ಬ್ಯಾಟಿಂಗ್, ಟ್ರಯಲ್ ಬ್ಲೇಸರ್ಸ್‌ಗೆ ರೋಚಕ ಜಯ

ಜೈಪುರ್, ಮೇ 6: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ (ಮೇ 6) ನಡೆದ ಮಹಿಳೆಯರ ಮೊದಲ ಟಿ20 ಚಾಲೆಂಜ್ ಪಂದ್ಯದಲ್ಲಿ ಸೂಪರ್‌ನೋವಾಸ್ ವಿರುದ್ಧ ಟ್ರಯಲ್ ಬ್ಲೇಸರ್ಸ್ ತಂಡ 2 ರನ್ ರೋಚಕ ಗೆಲುವನ್ನಾಚರಿಸಿದೆ. ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ ಅರ್ಧ ಶತಕದೊಂದಿಗೆ ಬ್ಲೇಸರ್ಸ್ ಮೊದಲ ಜಯ ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರೈಯಲ್ ಟ್ರಯಲ್ ಬ್ಲೇಸರ್ಸ್‌ಗೆ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಅರ್ಧ ಶತಕದ ಕೊಡುಗೆಯಿತ್ತರು. 67 ಎಸೆತಗಳಿಗೆ 90 ರನ್‌ಗಳು ಮಂಧಾನ ಬ್ಯಾಟ್‌ನಿಂದ ಸಿಡಿದವು. ಜೊತೆಗೆ ಹರ್ಲೀನ್ ಡಿಯೋಲ್ 36 ರನ್ ಬೆಂಬಲ ಸಿಕ್ಕಿದ್ದರಿಂದ ತಂಡ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 140 ರನ್ ಪೇರಿಸಿತು.
ಗುರಿ ಬೆನ್ನತ್ತಿದ ಸೂಪರ್‌ನೋವಾ ಆರಂಭಿಕ ಓವರ್‌ಗಳಲ್ಲಿ ವೇಗದ ರನ್ ಗಳಿಸಿತು. ಚಾಮರಿ ಅಥಪತ್ತು 26, ಜೆಮಿಮಾ ರೋಡ್ರಿಗಸ್ 24, ನಾಯಕಿ ಹರ್ಮನ್‌ಪ್ರೀತ್ ಕೌರ್ 46, ಶೋಫಿ ಡಿವೈನ್ 32 ರನ್ ಸೇರಿಸಿದ್ದರಿಂದ ಪಂದ್ಯ ರೋಚಕ ಹಂತಕ್ಕೆ ತಲುಪಿತಾದರೂ ಅಂತಿಮವಾಗಿ ಸೂಪರ್ ನೋವಾಸ್ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 138 ರನ್ ಬಾರಿಸಿ 2 ರನ್‌ಗಳಿಂದ ಶರಣಾಯಿತು.
ಸೂಪರ್‌ನೋವಾಸ್ ತಂಡ: ಜೆಮಿಮಾ ರೋಡ್ರಿಗಸ್, ಪ್ರಿಯಾ ಪೂನಿಯಾ, ಚಮರಿ ಅಥಪಥು, ಹರ್ಮನ್‌ಪ್ರೀತ್ ಕೌರ್ (ಸಿ), ಸೋಫಿ ಡಿವೈನ್, ತಾನಿಯ ಭಾಟಿಯಾ (ವಿಕೆ), ಅನ್ಜ ಪಾಟೀಲ್, ನಟಾಲಿ ಸಿವಿಯರ್, ಲೀ ತಾಹುಹು, ಪೂನಮ್ ಯಾದವ್, ರಾಧಾ ಯಾದವ್.
ಟ್ರೈಯಲ್ ಬ್ಲೇಸರ್ಸ್ ತಂಡ: ಸ್ಮೃತಿ ಮಂಧಾನ (ಸಿ), ದಯಾಲನ್ ಹೆಮಾಲತಾ, ದೀಪ್ತಿ ಶರ್ಮಾ, ಸ್ಟಫಾನಿ ಟೇಲರ್, ಹಾರ್ಲೀನ್ ಡಿಯೋಲ್, ಸುಝೀ ಬೇಟ್ಸ್, ರವಿ ಕಲ್ಪನಾ (ವಿಕೆ), ಸೋಫಿ ಎಕ್ಲೆಸ್ಟೋನ್, ಶಕೆರಾ ಸೆಲ್ಮನ್, ಝುಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications