
ಜೈಪುರ, ಮೇ 11: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ (ಮೇ 11) ನಡೆದ ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ ನೋವಾಸ್ 4 ವಿಕೆಟ್ ಗೆಲುವನ್ನಾಚರಿಸಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಶತಕದ ನೆರವಿನಿಂದ ತಂಡ ಟ್ರೋಫಿ ಜಯಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಲಾಸಿಟಿ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಸುಷ್ಮಾ ವರ್ಮಾ ಮತ್ತು ಅಮೇಲಿಯಾ ಕೆರ್ ಅದ್ಭುತ ಜೊತೆಯಾಟದಿಂದಾಗಿ ತಂಡ ರನ್ ಚೇತರಿಕೆ ಕಂಡಿತು.
ನಾಯಕಿ ಮಿಥಾಲಿ ರಾಜ್ 12, ಸುಷ್ಮಾ ವರ್ಮಾ ಅಜೇಯ 40 (32 ಎಸೆತ), ಶೆಫಾಲಿ ವರ್ಮಾ 11, ಹೇಯ್ಲೆ ಮ್ಯಾಥ್ಯೂಸ್ 0, ಡೇನಿಯಲ್ ವ್ಯಾಟ್ 0, ವೇದಾ ಕೃಷ್ಣಮೂರ್ತಿ 8, ಶಿಖಾ ಪಾಂಡೆ 1, ಕೆರ್ 36 (38 ಎಸೆತ) ರನ್ ಕೊಡುಗೆಯೊಂದಿಗೆ ವೆಲಾಸಿಟಿ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತು. ವೆಲಾಸಿಟಿ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಲೀ ಟಾಹುಹು 2 ವಿಕೆಟ್‌ನೊಂದಿಗೆ ಮಿಂಚಿದರು.
ಗುರಿ ಬೆನ್ನಟ್ಟಿದ ಸೂಪರ್ ನೋವಾಸ್ ಪ್ರಿಯಾ ಪೂನಿಯಾ 29, ಜೆಮಿಮಾ ರೋಡ್ರಿಗಸ್ 22, ಹರ್ಮನ್ ಪ್ರೀತ್ 51 (37 ಎಸೆತ) ರನ್ ಸೇರ್ಪಡೆಯೊಂಡಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿತು. ಕೊನೆಯ ಎಸೆತಕ್ಕೆ ಸೂಪರ್ ನೋವಾಸ್‌ಗೆ 1 ರನ್ ಅವಶ್ಯಕತೆಯಿತ್ತು. ಆದರೆ ನೋವಾಸ್ ಬೌಂಡರಿ ಬಾರಿಸಿ ಗೆಲುವನ್ನಾಚರಿಸಿತು.
ಸೂಪರ್‌ನೋವಾಸ್ ಇನ್ನಿಂಗ್ಸ್ ವೇಳೆ ವೆಲಾಸಿಟಿಯ ಜಹಾನರ ಆಲಂ ಮತ್ತು ಅಮೇಲಿಯಾ ಕೆರ್ 2 ವಿಕೆಟ್ ಪಡೆದು ಇತ್ತಂಡಗಳ ಜಿದ್ದಾಜಿದ್ದಿ ಕದನಕ್ಕೆ ಸಾಕ್ಷಿಯಾದರು.
ಸೂಪರ್‌ನೋವಾಸ್ ತಂಡ: ಹರ್ಮನ್‌ಪ್ರೀತ್ ಕೌರ್ (ಸಿ), ತಾನಿಯಾ ಭಾಟಿಯಾ (ವಿ.ಕೆ), ಪ್ರಿಯಾ ಪೂನಿಯಾ, ಚಾಮರಿ ಅಥಪತ್ತೂ, ಜೆಮಿಮಾ ರೋಡ್ರಿಗಸ್, ಸೋಫಿ ದೇವೈನ್, ನಟಾಲಿ ಸಿವಿಯರ್, ಲೀ ತಾಹುಹು, ಅಂಜಜಾ ಪಾಟೀಲ್, ಪೂನಮ್ ಯಾದವ್, ರಾಧಾ ಯಾದವ್, ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ.
ವೆಲಾಸಿಟಿ ತಂಡ: ಮಿಥಾಲಿ ರಾಜ್ (ಸಿ), ಸುಷ್ಮಾ ವರ್ಮಾ (ವಿ.ಕೆ.), ಶೆಫಾಲಿ ವರ್ಮಾ, ಹೇಯ್ಲೆ ಮ್ಯಾಥ್ಯೂಸ್, ಡೇನಿಯಲ್ ವ್ಯಾಟ್, ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ಜಹನರಾ ಆಲಂ, ಅಮೆಲಿಯಾ ಕೆರ್, ಕೋಮಲ್ ಜಂಜಾದ್, ಏಕ್ತಾ ಬಿಶ್ತ್, ದೇವಿಕ ವೈದ್ಯ, ಸುಶ್ರೀ ಪ್ರಧಾನ್.