Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸುವಂತೆ ಬಿಸಿಸಿಐಗೆ ಸೂಚನೆ

Supreme Court asked the BCCI to reconsider its order of life ban on S Sreesanth

ನವದೆಹಲಿ, ಮಾರ್ಚ್‌ 15: ಮೋಸದಾಟದ ಪ್ರಕರಣ ಹೊತ್ತು ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಒಳಗಾಗಿದ್ದ ಕ್ರಿಕೆಟ್ ಆಟಗಾರ ಎಸ್‌.ಶ್ರೀಶಾಂತ್‌ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಶ್ರೀಶಾಂತ್ ಅವರ ಮೇಲೆ ಬಿಸಿಸಿಐ ಹೇರಿರುವ ಆಜೀವ ನಿಷೇಧ ಶಿಕ್ಷೆಯನ್ನು ಸುಪ್ರಿಂಕೋರ್ಟ್‌ ವಾಪಸ್ ಪಡೆಯಲು ಪೀಠವು ಬಿಸಿಸಿಐಗೆ ಆದೇಶಿಸಿದೆ. ಶ್ರೀಕಾಂತ್ ಅವರನ್ನು ಆಟಗಾರರನನ್ನಾಗಿ ಪರಿಗಣಿಸುವಂತೆ ಸಲ್ಲಿಸಿರುವ ಅರ್ಜಿಯನ್ನು ಮೂರು ತಿಂಗಳ ಒಳಗಾಗಿ ಪರಿಗಣಿಸಲು ಸಹ ಸುಪ್ರಿಂ ಸೂಚಿಸಿದೆ. ಮೂರು ತಿಂಗಳೊಳಗೆ ಅರ್ಜಿ ಪರಿಗಣಿಸುವುದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ.

ಶ್ರೀಶಾಂತ್ ಅವರ ಮೇಲೆ ಮೋಸದಾಟ ಆರೋಪ ಬಂದ ಕಾರಣ ಅವರನ್ನು ಬಿಸಿಸಿಐಯು ಅಜೀವಪರ್ಯಂತ ನಿಷೇಧ ಹೇರಿತ್ತು. 2013 ರ ಐಪಿಎಲ್ ಸಮಯ ಪಂದ್ಯವೊಂದರಲ್ಲಿ ಅವರು ಮೋಸದಾಟ ಆಡಿದ್ದಾರೆ ಎಂದು ದೂರಲಾಗಿತ್ತು.

ತನ್ನನ್ನು ಬುಕ್ಕಿ ಒಬ್ಬ ಸಂಪರ್ಕಿಸಿದ್ದ ಮತ್ತು ಮೋಸದಾಟ ಆಡುವಂತೆ ಒತ್ತಾಯ ಮಾಡಿದ್ದೆ ಆದರೆ ತಾನು ಅದಕ್ಕೆ ಒಪ್ಪಿರಲಿಲ್ಲ ಎಂದು ಎಸ್.ಶ್ರೀಶಾಂತ್ ಅವರು ಸುಪ್ರಿಂ ಕೋರ್ಟ್‌ಗೆ ಹೇಳಿದ್ದರು, ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಕಾಲ್ ರೆಕಾರ್ಡ್‌ಗಳನ್ನು ನೀಡಿದ್ದರು.

Story first published: Friday, March 15, 2019, 12:52 [IST]
Other articles published on Mar 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+