ಐಪಿಎಲ್: ಸ್ಫೋಟಕ ಬ್ಯಾಟಿಂಗ್‌ನಿಂದ ದಾಖಲೆ ಬರೆದ ಸುರೇಶ್ ರೈನಾ

ಮುಂಬೈ: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧ ಶತಕ ಬಾರಿಸಿದ ಭಾರತೀಯರಲ್ಲಿ ರೈನಾ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 10) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಸಿಎಸ್‌ಕೆ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸುರೇಶ್ ರೈನಾ 36 ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಇದರಲ್ಲಿ 3 ಫೋರ್ಸ್, 4 ಸಿಕ್ಸರ್ ಸೇರಿತ್ತು.
ಐಪಿಎಲ್ 2021: ಚೆನ್ನೈ vs ಡೆಲ್ಲಿ, Live ಸ್ಕೋರ್‌ಕಾರ್ಡ್
ಈ ಅರ್ಧ ಶತಕದೊಂದಿಗೆ ರೈನಾ ಐಪಿಎಲ್‌ನಲ್ಲಿ ಅತ್ಯಧಿಕ ಅರ್ಧ ಶತಕಗಳನ್ನು ಬಾರಿಸಿದ ಭಾರತೀಯರಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಸುರೇಶ್ 39 ಅರ್ಧಶತಕಗಳೊಂದಿಗೆ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶಿಖರ್ ಧವನ್ 41 ಅರ್ಧಶತಕಗಳು ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿರುವ ಭಾರತೀಯರು
* ಶಿಖರ್ ಧವನ್, 41 ಅರ್ಧಶತಕಗಳು
* ಸುರೇಶ್ ರೈನಾ, 39 ಅರ್ಧಶತಕಗಳು
* ವಿರಾಟ್ ಕೊಹ್ಲಿ, 39 ಅರ್ಧಶತಕಗಳು
* ರೋಹಿತ್ ಶರ್ಮಾ, 39 ಅರ್ಧಶತಕಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications