ದೇಸಿ ಕ್ರಿಕೆಟ್‌ನಲ್ಲಿ ರೈನಾ ಉತ್ತಮ ಫಾರ್ಮ್ ತೋರಿಸಿಲ್ಲ: ಎಂಎಸ್‌ಕೆ ಪ್ರಸಾದ್

ನವದೆಹಲಿ, ಮೇ 5: ಟೀಮ್ ಇಂಡಿಯಾದ ಆಕರ್ಷಣೀಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ರಾಷ್ಟ್ರೀಯ ತಂಡಕ್ಕೆ ವಾಪಸ್ಸಾಗೋದು ದೂರದ ಮಾತು ಅನ್ನಿಸಿದೆ. ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್ ಪ್ರಸಾದ್ ಕೂಡ 2018-19ರ ದೇಶಿ ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಉತ್ತಮ ಪಾರ್ಮ್ ತೋರಿಸಿಲ್ಲ ಎಂದಿದ್ದಾರೆ.
33ರ ಹರೆಯದ ಸುರೇಶ್ ರೈನಾ ಭಾರತ ತಂಡದ ಪರ 226 ಏಕದಿನ ಪಂದ್ಯಗಳು, 78 ಟಿ20ಐ ಪಂದ್ಯಗಳು, 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಜುಲೈ 2018ರಲ್ಲಿ ರೈನಾ ಇಂಗ್ಲೆಂಡ್ ವಿರುದ್ಧ ಕಡೇಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ದುರ್ಬಲ ಫಾರ್ಮ್‌ನಿಂದಾಗಿ ತಂಡದಿಂದ ಕೈಬಿಡಲ್ಪಟ್ಟಿದ್ದ ರೈನಾ ಗಾಯಕ್ಕೂ ತುತ್ತಾಗಿದ್ದರು.
ಗಾಯಕ್ಕೀಡಾಗಿದ್ದ ರೈನಾ, ಕಳೆದ ವರ್ಷ ನೆದರ್ಲ್ಯಾಂಡ್‌ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಐಪಿಎಲ್‌ನಲ್ಲಿ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯೇ ಮುಂದೂಡಲ್ಪಟ್ಟಿದೆ.
'ವಿವಿಎಸ್ ಲಕ್ಷ್ಮಣ್ ಅವರನ್ನೇ ನೋಡಿ, 1999ರಲ್ಲಿ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಆದರೆ ದೇಸಿ ಕ್ರಿಕೆಟ್‌ನಲ್ಲಿ 1400 ರನ್ ಬಾರಿಸಿದ ಲಕ್ಷ್ಮಣ್ ರಾಷ್ಟ್ರೀಯ ತಂಡಕ್ಕೆ ಆರಿಸಲೇಬೇಕಾದ ಒತ್ತಡ ಸೃಷ್ಟಿಸಿದ್ದರು. ಹಿರಿಯ ಆಟಗಾರರಿಂದ ನಾವಿದನ್ನೇ ಬಯಸುತ್ತೇವೆ,' ಎಂದು ಪಿಟಿಐ ಜೊತೆ ಮಾತನಾಡುತ್ತ ಎಂಎಸ್‌ಕೆ ಹೇಳಿದ್ದಾರೆ.
2018-19 ಸೀಸನ್‌ನಲ್ಲಿ ರೈನಾ ಐದು ರಣಜಿ ಪಂದ್ಯಗಳಲ್ಲಿ 243 ರನ್ ಬಾರಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕಗಳು ಸೇರಿದ್ದವು. ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿರುವ ರೈನಾ, 2019ರ ಸೀಸನ್‌ನಲ್ಲಿ ಸಿಎಸ್‌ಕೆ ಪರ 17 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 383 ರನ್ ಮಾತ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications