Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಆರ್‌ಸಿಬಿ ಕಪ್‌ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ

ಜಗತ್ತಿನಲ್ಲಿ ಯಾವುದಾರರೂ ಒಂದು ತಂಡಕ್ಕೆ ಗೆಲುವು ಅಥವಾ ಸೋಲು ಸಂಭವಿಸಿದಾಗ ಸದಾ ಬೆಂಬಲ ವ್ಯಕ್ತಪಡಿಸುವ ಅಭಿಮಾನಿಗಳಿದ್ದರೆ ಅದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಟೀಮ್‌ಗೆ ಮಾತ್ರ. ಅಷ್ಟರ ಮಟ್ಟಿಗೆ ಆರ್‌ಸಿಬಿ ಅಭಿಮಾನಿಗಳ ಕಣ ಕಣದಲ್ಲೂ ಬೆರತು ಹೋಗಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭವಾದ 2008 ರಿಂದಲೂ ಕೂಡ ಆರ್‌ಸಿಬಿ ತನ್ನ ಅಭಿಮಾನಿ ಬಳಗದಲ್ಲಿ ಎಂದಿಗೂ ಇಳಿಕೆ ಕಂಡಿಲ್ಲ. ಪ್ರತಿ ವರ್ಷ ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡು ಮುಂದೆ ಸಾಗುತ್ತಿದೆ. ವಿಪರ್ಯಸ 16 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಐಪಿಎಲ್‌ ಚಾಂಪಿಯನ್‌ ಆಗಿ ಟ್ರೋಫಿ ಎತ್ತಿ ಹಿಡಿದಿಲ್ಲ.

Suresh Raina gave a Big reason for RCB Not winning the IPL Trophy

ಸುಮಾರು ಒಂದು ದಶಕದಿಂದಲ್ಲೂ ಪ್ರತಿ ವರ್ಷ ಐಪಿಎಲ್‌ ಶುರುವಾದರೆ ಸಾಕು "ಈ ಸಲ್‌ ಕಪ್‌ ನಮ್ದೆ" ಎಂಬ ಸ್ಲೋಗನ್‌ ಎಲ್ಲ ಆರ್‌ಸಿಬಿ ಅಭಿಮಾನಿಗಳ ಬಾಯಿಯಲ್ಲಿ ಗುನುಗುತ್ತಿರುತ್ತದೆ. ಆದರೆ ಮೂರು ಫೈನಲ್‌ ಪ್ರವೇಶಿ ಹೊರತಾಗಿಯೂ ಆರ್‌ಸಿಬಿ ಕಪ್‌ ಅನ್ನು ತನ್ನದಾಗಿಸಿಕೊಳ್ಳುವುದಲ್ಲಿ ವಿಫಲವಾಗಿದೆ.

ಆರ್‌ಸಿಬಿ ಕಪ್‌ ಏಕೆ ಗೆಲ್ಲುತ್ತಿಲ್ಲ ಎಂದು ಈಗಾಗಲೆ ಆನೇಕ ಮಂದಿ ಕಾರಣಗಳನ್ನು ನೀಡಿದ್ದಾರೆ. ಆದರೆ ಆರ್‌ಸಿಬಿ ಎಂತಹ ಅದ್ಬುತ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಮಿಂಚಿದರು ಅದೃಷ್ಟ ಕೈ ಹಿಡಿಯುತ್ತಿಲ್ಲ. ಪ್ರಸ್ತುತ 2024ರ ಐಪಿಎಲ್‌ನಲ್ಲಿಯೂ ಇದೆ ಆಗಿದ್ದು, ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಆರ್‌ಸಿಬಿ ಜಯ ಗಳಿಸಿದೆ. ಹೀಗಾಗಿ ಈ ವರ್ಷವೂ ಕಪ್‌ ನಮ್ಮದಲ್ಲ ಎಂದು ಅಭಿಮಾನಿಗಳು ನಿರ್ಧಾರಿಸುವ ಹಂತಕ್ಕೆ ತಲುಪಿದ್ದಾರೆ.

ಹೀಗೆ ಸಾಲು ಸಾಲು ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಆರ್‌ಸಿಬಿ ಹೆಸರೆತ್ತದೆ, ಮಿಸ್ಟರ್‌ ಐಪಿಎಲ್‌ ಎಂಬ ಖ್ಯಾತಿ ಗಳಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಕಾಲೆಳೆದಿದ್ದಾರೆ. ಐಪಿಎಲ್‌ನಲ್ಲಿ ಸುರೇಶ್‌ ರೈನಾ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ಪ್ರಮುಖ ಭಾಗಿವಾಗಿದ್ದರು. ತಮ್ಮ ಆಲ್‌ ರೌಂಡರ್‌ ಪ್ರದರ್ಶನದಿಂದ ಸಿಎಸ್‌ಕೆ ತಂಡಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಮಿಸ್ಟರ್‌ ಐಪಿಎಲ್‌ ಎಂಬ ಬಿರುದು ಬಂದಿರುವುದು.

ಇಂತಹ ಆಟಗಾರ ತಮ್ಮ ಸಿಎಸ್‌ಕೆ ತಂಡ ಐದು ಬಾರಿ ಚಾಂಪಿಯನ್‌ ಆಗಲು ಮತ್ತು ಆರ್‌ಸಿಬಿ ಕಪ್‌ ಗೆಲ್ಲದಿರಲು ಕಾರಣ ನೀಡಿದ್ದಾರೆ. ಐಪಿಎಲ್‌ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಪಾರ್ಟಿ ಮಾಡುವ ಮೂಲಕ ಮಜಾ ಮಾಡಿದ ಉದಾಹರಣೆಗಳು ಇಲ್ಲ. ಇದಕ್ಕಾಗಿಯೇ ಸಿಎಸ್‌ಕೆ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವುದು. ಪಾರ್ಟಿ ಮಾಡಿ ಮಜಾ ಮಾಡಿದ ತಂಡಗಳು ಇನ್ನು ಒಂದು ಕಪ್‌ ಗೆದ್ದಿಲ್ಲ ಎಂದು ಆರ್‌ಸಿಬಿ ಜೊತೆಗೆ ಹಲವು ತಂಡಗಳ ಟೀಕಿಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಅರ್‌ಸಿಬಿ ಅತಿ ಹೆಚ್ಚು ಮನರಂಜನೆ ನೀಡುವ ತಂಡವಾಗಿದೆ. ಜೊತೆಗೆ ಪಂದ್ಯ ಗೆದ್ದ ಬಳಿಕ ಪಾರ್ಟಿ ಕೂಡ ಹೆಚ್ಚಾಗಿರುತ್ತದೆ. ಆಟಗಾರರು ಪಂದ್ಯ ನಾಳೆಯಿದ್ದರೂ ಮೋಜು-ಮಸ್ತಿ ಮಾಡುವುದರಲ್ಲೆ ಬ್ಯುಸಿಯಾಗಿರುತ್ತಾರೆ. ಇದಕ್ಕೆ ಟೀಮ್‌ ಮ್ಯಾನೆಜ್‌ಮೆಂಟ್ ನೀಡಿರುವ ಸ್ವತಂತ್ರವೇ ಕಾರಣ ಎಂಬುದು ಮೇಲೋಟಕ್ಕಿರುವ ಸತ್ಯದ ಸಂಗತಿ ಎನ್ನುತ್ತಿದ್ದಾರೆ ಅಭಿಮಾನಿಗಳು.

Story first published: Tuesday, April 23, 2024, 13:24 [IST]
Other articles published on Apr 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+