Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ಕ್ರಿಕೆಟ್‌ ನಿವೃತ್ತಿ ಬಗ್ಗೆ ಹೇಳಿಕೆ ನೀಡಿದ ಸುರೇಶ್ ರೈನಾ

ಧೋನಿ ನಿವೃತ್ತಿ ಯಾವಾಗ ಗೊತ್ತ | Oneindia Kannada
Suresh Raina has his say on MS Dhoni’s retirement

ನವದೆಹಲಿ, ಸೆಪ್ಟೆಂಬರ್ 27: ಮೈದಾನದ ಹೊರತಾಗಿಯೂ ಭಾರತದ ಆಟಗಾರ ಸುರೇಶ್ ರೈನಾ ಮತ್ತು ಮಾಜಿ ನಾಯಕ ಎಂಸ್ ಧೋನಿ ಬೆಸ್ಟ್ ಫ್ರೆಂಡ್ಸ್ ಅನ್ನೋದು ಗುಟ್ಟಿನ ವಿಚಾರವೇನಲ್ಲ. ಧೋನಿ ನಿವೃತ್ತಿ ಬಗ್ಗೆ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ ಧೋನಿ ಸ್ನೇಹಿತ ರೈನಾ ಕೂಡ ತನ್ನ ಹೇಳಿಕೆ ನೀಡಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಮುಕ್ತಾಯದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಆಡಿಲ್ಲ. ತಾನೇ ಕೊಂಚ ದಿನ ಕ್ರಿಕೆಟ್‌ನಿಂದ ಬಿಡುವು ಪಡೆಯುವುದಾಗಿ ಹೇಳಿದ್ದರು. ಧೋನಿ ಕ್ರಿಕೆಟ್‌ನಿಂದ ದೂರ ಉಳಿಯಲು ಗಾಯದ ಸಮಸ್ಯೆಯೂ ಕಾರಣ ಎನ್ನಲಾಗುತ್ತಿದೆ.

ಧೋನಿ ನಿವೃತ್ತಿ ವಿಚಾರದಲ್ಲಿ ರೈನಾ, ಧೋನಿ ಬೆನ್ನಿಗೆ ನಿಂತಿದ್ದಾರೆ. 'ಆಟವನ್ನು ಯಾವಾಗ ನಿಲ್ಲಿಸಬೇಕನ್ನೋದನ್ನು ಕೇವಲ ಧೋನಿಯೇ ನಿರ್ಧರಿಸುತ್ತಾರೆ,' ಎಂದು ರೈನಾ ಹೇಳಿದ್ದಾರೆ. ಕ್ರಿಕೆಟ್ ವಿಶ್ವಕಪ್‌ ಬಳಿಕ ಧೋನಿ ಯಾವುದೇ ಪಂದ್ಯ ಆಡದಿರುವುದು ಕ್ರಿಕೆಟ್‌ ವಲಯದಲ್ಲಿ ಧೋನಿ ನಿವೃತ್ತಿ ಬಗ್ಗೆ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದೆ.

'ಧೋನಿ ಈಗಲೂ ಫಿಟ್‌ ಆಗಿದ್ದಾರೆ. ಈಗಲೂ ಅಪಾಯಕಾರಿ ವಿಕೆಟ್‌ ಕೀಪರ್‌ ಆಗಿದ್ದಾರೆ ಮತ್ತು ಇಂದಿಗೂ ಶ್ರೇಷ್ಠ ಫಿನಿಷರ್‌ ಆಗಿಯೇ ಗುರುತಿಸಿಕೊಂಡಿದ್ದಾರೆ. ಮುಂಬರಲಿರುವ ಟಿ20 ವಿಶ್ವಕಪ್‌ ವೇಳೆಗೆ ಧೋನಿ ಟೀಮ್ ಇಂಡಿಯಾಕ್ಕೆ ಆಸ್ತಿಯಾಗಿರಲಿದ್ದಾರೆ,' ಎಂದು ಹಿಂದೂ ಜೊತೆ ಮಾತನಾಡಿದ ರೈನಾ ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್‌ ಕ್ಷಣವನ್ನ ಸ್ಮರಿಸಿದ ರೈನಾ, 'ಧೋನಿ ಅಂದಿನ ಸೆಮಿಫೈನಲ್ ಪಂದ್ಯದಲ್ಲಿ ಸ್ವಲ್ಪ ಮುಂಚಿತವಾಗಿ ಬರಬೇಕಿತ್ತು. ಆಗ ಪಂತ್‌ ಆಡಲು ಧೋನಿ ಮಾರ್ಗದರ್ಶಕರಾಗುತ್ತಿದ್ದರು. ಆ ವೇಳೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ವಿಕೆಟ್‌ ಇನ್ನೂ ನಮ್ಮ ಕೈಲ್ಲಿರುತ್ತಿತ್ತು,' ಎಂದರು.

ಮಾತು ಮುಂದುವರೆಸಿದ ರೈನಾ, 'ಅಷ್ಟಾಗಿಯೂ ಅಂದಿನ ಪಂದ್ಯದ ಕೊನೇ ಕ್ಷಣದವರೆಗೂ ಧೋನಿ ದೇಸಿ ತಂಡ ಗೆಲ್ಲಿಸಲು ಹೋರಾಡುತ್ತಿದ್ದರು. ಆದರೆ ಮಾರ್ಟಿನ್ ಗಪ್ಟಿಲ್ ಅವರ ಡೈರೆಕ್ಟ್ ಹಿಟ್ ನಮಗೆ ಹಿನ್ನಡೆ ತಂದಿತು,' ಎಂದು ವಿವರಿಸಿದರು. ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಧೋನಿ ರನ್ ಔಟ್ ಆಗಿದ್ದರು. ಪಂದ್ಯದಲ್ಲಿ ಭಾರತ 18 ರನ್‌ನಿಂದ ಸೋತಿತ್ತು.

Story first published: Friday, September 27, 2019, 19:35 [IST]
Other articles published on Sep 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+