
ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಸಂವಾದವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುವಂತಾಗಬೇಕು ಎಂದು ಒತ್ತಾಯವನ್ನು ಮಾಡಿದ್ದಾರೆ.
ಶನಿವಾರ ಇಬ್ಬರು ಭಾರತೀಯ ಕ್ರಿಕೆಟಿಗರು ನೇರ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಲವಾರು ಕ್ರಿಕೆಟ್ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಇತರ ದೇಶಗಳ ಕ್ರಿಕೆಟಿಗರು ಬೇರೆ ಬೇರೆ ರಾಷ್ಟ್ರಗಳ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವಂತೆಯೇ ಭಾರತೀಯರಿಗೂ ಈ ಅವಕಾಶ ಸಿಗಬೇಕು, ಬಿಸಿಸಿಐ ಈ ಬಗ್ಗೆ ತೀರ್ಮಾನವನ್ನು ತೆಗೆದುಕೋಳ್ಳಬೇಕು ಎಂದು ಹೇಳಿಕೊಂಡಿದ್ದಾರೆ.
ತನ್ನ ಹೆಸರು ತೆಗೆದುಕೊಳ್ಳದೆ ಸುರೇಶ್ ರೈನಾ ಮಾತನಾಡಿತ್ತಾ "ರಾಬಿನ್ ಉತ್ತಪ್ಪ ಅವರಂತಾ ಅನೇಕ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ. ಆದರೆ ಭಾರತೀಯ ಕ್ರಿಕೆಟ್ ತಂಡದಿಂದ ಬಹಳ ಸಮಯಗಳಿಂದ ಹೊರಬಿದ್ದಿದ್ದಾರೆ. ಅಂತಾ ಆಟಗಾರರಿಗೆ ಬೇರೆ ಬೇರೆ ವಿದೇಶಿ ಟೂರ್ನಿಗಳಲ್ಲಿ ಆಡಲು ಅವಕಾಶವನ್ನು ಬಿಸಿಸಿಐ ಬೀಡಬೇಕು" ಎಂದು ಹೇಳಿದ್ದಾರೆ.
ಇದಕ್ಕೆ ಇರ್ಫಾನ್ ಪಠಾಣ್ ಕೂಡ ಧ್ವನಿಗೂಡಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿಲ್ಲದ, ಕನಿಷ್ಟ 30 ವರ್ಷ ಮೇಲ್ಪಟ್ಟ ಆಟಗಾರರಿಗಾದರೂ ಈ ಅವಕಾಶ ಸಿಗಬೇಕು ಎಂದಿದ್ದಾರೆ. ಬಿಸಿಸಿಐ ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಇಂತಾ ಕ್ರಿಕೆಟಿಗರಿಗಾದರು ನೀಡಲಿ ಎಂದು ಹೇಳಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಕ್ರಿಕೆಟಿಗರು ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ನಿಯಮವನ್ನು ಮೀರಿ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಂಡರೆ ಅಂತಾ ಆಟಗಾರರು ನಿಷೇಧಕ್ಕೆ ಗುರಿಯಾಗುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್, ದೇಸಿ ಕ್ರಿಕೆಟ್ ಐಪಿಎಲ್ ಸೇರಿದಂತೆ ಎಲ್ಲಾ ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸಿದ ಬಳಿಕ ಮಾತ್ರವೇ ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅವಕಾಶವನ್ನು ನೀಡಿದೆ. ಅದೇ ಕಾರಣದಿಂದ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಬಳಿಕ ಅಬುದಾಬಿ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು.