Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸುರೇಶ್ ರೈನಾ ವಾಪಸ್ಸಾಗುತ್ತಾರೆ'

‘Suresh Raina might miss first few games, but he will be back with CSK squad’

ನವದೆಹಲಿ: ವೈಯಕ್ತಿಕ ಕಾರಣ ನೀಡಿ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿರುವುದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಐಪಿಎಲ್ ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಈ ನಡುವ ಸುರೇಶ್ ರೈನಾ ಮತ್ತೆ ವಾಪಸ್ಸಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ನಿಂದ ಸಿಎಸ್‌ಕೆ ಆಲ್ ರೌಂಡರ್ ಸುರೇಶ್ ರೈನಾ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹಿಂದೆ ಸರಿದಿದ್ದರು. ಸಿಎಸ್‌ಕೆ ಈಗ ಬದಲಿ ಆಟಗಾರರಿಗೆ ಯೋಚಿಸುತ್ತಿರುವಾಗಲೇ, ರೈನಾ ಮತ್ತೆ ವಾಪಸ್ಸಾಗಲಿದ್ದಾರೆ ಎನ್ನಲಾಗುತ್ತಿದೆ.

ಭಾರತದ ಮಾಜಿ ಬ್ಯಾಟ್ಸ್‌ಮನ್ ದೀಪ್‌ದಾಸ್ ಗುಪ್ತಾ ರೈನಾ ಬಗ್ಗೆ ಮಾತನಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ರೈನಾ ವಾಪಸ್ಸಾಗುತ್ತಾರೆ. ಟೂರ್ನಿಯ ಆರಂಭದ ಕೆಲ ಪಂದ್ಯಗಳನ್ನು ಸುರೇಶ್ ಮಿಸ್ ಮಾಡಿಕೊಳ್ಳಬಹುದು. ಆದರೆ ಮತ್ತೆ ವಾಪಸ್ಸಾಗುತ್ತಾರೆ ಎಂದಿದ್ದಾರೆ.

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ದಾಸ್‌ ಗುಪ್ತಾ, 'ನನಗನ್ನಿಸುವಂತೆ ಸುರೇಶ್ ರೈನಾ ವಾಪಸ್ಸಾಗಿ ಐಪಿಎಲ್ ನಲ್ಲಿ ಆಡುತ್ತಾರೆ. ಕ್ವಾರಂಟೈನ್ ನಿಯಮದಿಂದ ಬಹುಶಃ ಅವರು ಮೊದಲ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಹುದು. ಆದರೆ ಬರೋದಂತೂ ಬರುತ್ತಾರೆ ಅಂತ ನನಗನ್ನಿಸುತ್ತಿದೆ,' ಎಂದರು.

Story first published: Monday, September 7, 2020, 10:05 [IST]
Other articles published on Sep 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+