For Quick Alerts
ALLOW NOTIFICATIONS  
For Daily Alerts
 

2019ರ ವಿಶ್ವಕಪ್‌ನಲ್ಲಿ ರೋಹಿತ್ ಮಾಡಿದ ಆ ಕೆಲಸವನ್ನೇ ಈ ಬಾರಿ ಶುಬ್ಮನ್ ಗಿಲ್ ಮಾಡಲಿದ್ದಾರೆ: ರೈನಾ ಭವಿಷ್ಯ

ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಕೇವಲ ಎರಡು ವಾರಗಳು ಮಾತ್ರವೇ ಬಾಕಿಯಿದೆ. ಎಲ್ಲಾ ತಂಡಗಳು ಕೂಡ ಕೊನೆಯ ಹಂತದ ಸಿದ್ಧತೆಗಳನ್ನು ಈ ಟೂರ್ನಿಗಾಗಿ ಸದ್ಯ ನಡೆಸುತ್ತಿವೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಟೀಮ್ ಇಂಡಿಯಾದ ಓರ್ವ ಯುವ ಆಟಗಾರನ ವಿಚಾರವಾಗಿ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.

ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಈ ವರ್ಷ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿ ರನ್ ಮಳೆ ಹರಿಸಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿಯೂ ಶುಬ್ಮನ್ ಗಿಲ್ ತಮ್ಮ ರನ್ ಮಳೆ ಹರಿಸುವುದನ್ನು ಮುಂದುವರಿಸಲಿದ್ದಾರೆ ಎಂದು ರೈನಾ ಹೇಳಿಕೆ ನೀಡಿದ್ದಾರೆ. 2019ರಲ್ಲಿ ನಡೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರು ನಿರ್ವಹಿಸಿದ ಪಾತ್ರವನ್ನು ಈ ಬಾರಿ ಗಿಲ್ ನಿರ್ವಹಿಸಲಿದ್ದಾರೆ ಎನ್ನುವ ಭರವಸೆಯ ಮಾತುಗಳನ್ನು ಕೂಡ ಅವರು ಹೇಳಿದ್ದಾರೆ.

Suresh Raina praises Shubman Gill said he can do what Rohit Sharma did in 2019 world cup

2019ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿದ್ದ ರೋಹಿತ್ ಶರ್ಮಾ ರನ್ ಮಳೆಯನ್ನೇ ಹರಿಸಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ ಆ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ಬರೊಬ್ಬರಿ 5 ಶತಕಗಳನ್ನು ಸಿಡಿಸಿ ವಿಶ್ವಕಪ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ಸಾಧನೆ ಮಾಡಿದ್ದರು.

ಟೂರ್ನಿಯಲ್ಲಿ ರೋಹಿತ್ ಶರ್ಮಾ ಘಟಾನುಘಟಿ ಬೌಲಿಂಗ್ ಪಡೆಯನ್ನು ಹೊಂದಿದ್ದ ತಂಡಗಳನ್ನು ಕೂಡ ನಿರ್ದಯವಾಗಿ ದಂಡಿಸಿದ್ದು ರನ್ ಮಳೆಯನ್ನೇ ಹರಿಸಿದ್ದರು. ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ರೋಹಿತ್ ಭರ್ಜರಿ ಶತಕ ಸಿಡಿಸಿದ್ದರು. ಈ ಪೈಕಿ ಕೊನೆಯ ಮೂರು ಶತಕಗಳು ಸತತ ಮೂರು ಪಂದ್ಯಗಳಲ್ಲಿ ಬಂದಿತ್ತು ಎನ್ನುವುದು ಗಮನಾರ್ಹ. ಈ ಟೂರ್ನಿಯಲ್ಲಿ ಅವರು ಒಟ್ಟಾರೆಯಾಗಿ 648 ರನ್‌ಗಳನ್ನು ಗಳಿಸಿದ್ದರು.

ಯುವ ಆಟಗಾರ ಶುಬ್ಮನ್ ಗಿಲ್ ವಿಶ್ವಕಪ್ ಟೂರ್ನಿಗೆ ಅದ್ಭುತ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತುತ ಏಕದಿನ ಶ್ರೇಯಾಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಅವರು 2023ರಲ್ಲಿ ಈಗಾಗಲೇ 1000 ರನ್‌ಗಳನ್ನು ಪೂರೈಸಿದ್ದಾರೆ. ಈ ಪ್ರದರ್ಶನವನ್ನು ಉಲ್ಲೇಖಿಸಿರುವ ಸುರೇಶ್ ರೈನಾ ಟೀಮ್ ಇಂಡಿಯಾದ ಈ ಯುವ ಆಟಗಾರನ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

"ಕಳೆದ ಒಂದೂವರೆ ವರ್ಷದಿಂದ ಆತ ಬಹಳ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಸ್ವಲ್ಪ ಹಿನ್ನಡೆ ಅನುಭವಿಸಿದರೂ ಕೂಡ ಅದಾದ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಉತ್ತಮವಾಗಿ ರನ್‌ಗಳಿಸಿದ್ದಾರೆ. ಆತ ಉತ್ತಮವಾಗಿ ಕಾಣಿಸುತ್ತಿದ್ದು ಅದ್ಭುತವಾದ ಕಾಲ್ಚಲನೆ ಹೊಂದಿದ್ದಾಎ. ವಿಂಡಿಸ್ ವಿರುದ್ಧ 40ಕ್ಕೆ ಔಟಾದ ಬಳಿಕ ಈ ಅವರು ಸರಾಗವಾಗಿ 50, 100 ರನ್‌ಗಳನ್ನು ಬಾರಿಸುತ್ತಿದ್ದಾರೆ. ಆತ ವಿಶ್ವಕಪ್‌ನಲ್ಲಿ ಅತ್ಯಂತ ಪ್ರಮುಖವಾದ ಆಟಗಾರರಲ್ಲಿ ಓರ್ವ" ಎಂದಿದ್ದಾರೆ ಸುರೇಶ್ ರೈನಾ.

"ಆತ ಸೂಪರ್ ಸ್ಟಾರ್ ಆಗಲು ಬಯಸುತ್ತಿದ್ದಾನೆ ಎನ್ನುವುದು ಗೊತ್ತಿದೆ ಮತ್ತು ಆತ ಮುಂದಿನ ವಿರಾಟ್ ಕೊಹ್ಲಿಯಾಗಲು ಬಯಸುತ್ತಿದ್ದಾನೆ. ಆ ಪ್ರಯತ್ನದಲ್ಲಿ ಆತ ಈಗಾಗಲೇ ಇದ್ದು ಈ ವಿಶ್ವಕಪ್‌ನ ಬಳಿಕ ಆತನ ಬಳಿಕ ನಾವು ಸಾಕಷ್ಟು ಮಾತಾಡಲಿದ್ದೇವೆ. ಆತನ ಫಾರ್ಮ್, ಕೈಯ ವೇಗ ಅತ್ಯಂತ ಬಲಿಷ್ಠವಾಗಿದೆ. ಆತನಿಗೆ ಎಲ್ಲಿಗೆ ಬೌಲಿಂಗ್ ನಡೆಸಬೇಕು ಎನ್ನುವುದು ಸ್ಪಿನ್ನರ್‌ಗಳಿಗೆ ಅರ್ಥವಾಗುವುದಿಲ್ಲ. ವೇಗಿಗಳು ಚೆಂಡನ್ನು ಸ್ವಿಂಗ್ ಮಾಡದಿದ್ದರೆ ಅದನ್ನು ಆತ ಅದ್ಭುತವಾಗಿ ಬಾರಿಸುತ್ತಾರೆ" ಎಂದು ಶುಬ್ಮನ್ ಗಿಲ್ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ ಸುರೇಶ್ ರೈನಾ.

"ಆತನ ಈ ಮನಸ್ಥಿತಿ ಇಲ್ಲಿಗೆ ಮುಗಿಯುವುದಿಲ್ಲ. 2019ರಲ್ಲಿ ರೋಹಿತ್ ಶರ್ಮಾ ಮಾಡಿದ ಕೆಲಸವನ್ನು ಈ ವರ್ಷ ಗಿಲ್ ಅದನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆತನಿಗೆ ಬ್ಯಾಟಿಂಗ್ ಮಾಡಲು 50 ಓವರ್‌ಗಳು ದೊರೆಯುತ್ತದೆ. ಅದುವೇ ಆತನಿಗೆ ಮುನ್ನುಗ್ಗಲು ಅವಕಾಶ ನಿಡುತ್ತದೆ. ನನ್ನ ಪ್ರಕಾರ ಆತ ಹುಟ್ಟು ನಾಯಕ ಃಆಗೂ ಅದನ್ನು ತನ್ ನ ಆಟದಲ್ಲಿ ಆತ ತೋರಿಸುತ್ತಾನೆ" ಎಂದಿದ್ದಾರೆ ಸುರೇಶ್ ರೈನಾ.

Story first published: Thursday, September 21, 2023, 15:51 [IST]
Other articles published on Sep 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+