ಮಕ್ಕಳ ಮುದ್ದಾದ ವಿಡಿಯೋ ಹಂಚಿಕೊಂಡ ರೈನಾ, ರಶೀದ್, ರೋಡ್ಸ್: ವಿಡಿಯೋ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಭಾರತದ ಮಾಜಿ ಆಲ್ ರೌಂಡರ್, ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ ಆಡುತ್ತಿಲ್ಲ. ವೈಯಕ್ತಿಕ ಕಾರಣದಿಂದಾದಿ ರೈನಾ ಟೂರ್ನಿಯಿಂದ ಹೊರ ನಡೆದಿದ್ದರು. ಈಗ ಮನೆಯಲ್ಲಿ ಬಿಡುವಿನಲ್ಲಿರುವ ರೈನಾ ತನ್ನ ಮಗುವಿನ ಮುದ್ದಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಿಂಗ್ಸ್ 11 ಪಂಜಾಬ್‌ನ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ಸ್ಪಿನ್ನರ್ ರಶೀದ್ ಖಾನ್ ಕೂಡ ಮುದ್ದಾದ ಮಗುವಿನ ವಿಡಿಯೋ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಮಕ್ಕಳ ದಿನಾಚರಣೆಗೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿವೆ. ಈ ಮಧ್ಯೆ ಕ್ರಿಕೆಟರ್‌ಗಳು ಹಂಚಿಕೊಂಡಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪುಟಾಣಿಗಳ ವಿಡಿಯೋ ಶೇರ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳಲ್ಲಿ ರಶೀದ್ ಹಂಚಿಕೊಂಡಿರುವ ಪುಟಾಣಿಯ ವಿಡಿಯೋ ಅವರ ಸೋದರ ಸೊಸೆ ಹಸೀನಾಳದ್ದು. ಇನ್ನು ಸುರೇಶ್ ರೈನಾ ಮತ್ತು ಜಾಂಟಿ ರೋಡ್ಸ್ ತಮ್ಮ ತಮ್ಮ ಮಗುವಿನ ವಿಡಿಯೋ ಶೇರ್ ಮಾಡಿದ್ದಾರೆ.
ನನ್ನ ಪ್ರೀತಿಯ ಡೋಸ್
ಪುಟಾಣಿ ಮಗುವಿನ ಜೊತೆ ಆಡುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುರೇಶ್ ರೈನಾ, 'ಬೆಳಗಿನ ನನ್ನ ಪ್ರೀತಿಯ ಡೋಸ್' ಎಂದು ಬರೆದುಕೊಂಡಿದ್ದಾರೆ. ರೈನಾಗೆ ಗ್ರೇಸಿ ಎನ್ನುವ ಪುತ್ರಿಯಿದ್ದಾರೆ. ಈ ವಿಡಿಯೋದಲ್ಲಿರುವ ಮಗು ರೈನಾ ಪುತ್ರ ರಿಯೋ ರೈನಾ.
ಫ್ಲೈಯಿಂಗ್ ಕಿಸ್
ತನ್ನ ಪುಟಾಣಿ ಸೊಸೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ರಶೀದ್ ಖಾನ್, 'ನನ್ನ ಮುದ್ದಾದ ಪುಟಾಣಿ ಸೊಸೆ ಹಸೀನಾಳಿಂದ ಸಿಕ್ಕ ಕೆಲ ಫ್ಲೈಯಿಂಗ್ ಕಿಸ್‌ಗಳು. ಮಿಸ್ ಯೂ ಸೋ ಮಚ್' ಎಂದು ಬರೆದುಕೊಂಡಿದ್ದಾರೆ. ರಶೀದ್‌ಗೆ ಇನ್ನೂ ಮದುವೆಯಾಗಿಲ್ಲ. ಬಹುಶಃ ಈ ಮಗು ತಂಗಿ ಅಥವಾ ಅಕ್ಕನ ಪುತ್ರಿಯಿರಬೇಕು.
ಪುತ್ರನ ಕಸರತ್ತು
ವಿಶ್ವದ ಬೆಸ್ಟ್ ಫೀಲ್ಡರ್‌ಗಳಲ್ಲಿ ಗುರುತಿಸಿಕೊಂಡಿರುವ ಜಾಂಟಿ ರೋಡ್ಸ್, ತನ್ನ ಪುತ್ರ ದೈಹಿಕ ಕಸರತ್ತು ಮಾಡುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. 'ಇವತ್ತಿನ ಪಂದ್ಯಕ್ಕೆ ನೇತನ್ ರೋಡ್ಸ್ ವಾರ್ಮ್ ಅಪ್ ನಡೆಸುತ್ತಿದ್ದಾರೆ' ಎಂದು ರೋಡ್ಸ್ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications