ಇಂಗ್ಲೆಂಡ್ ಪ್ರವಾಸ: ರಾಯುಡು ಬದಲು ಏಕದಿನ ತಂಡಕ್ಕೆ ರೈನಾ ಆಯ್ಕೆ

ನವದೆಹಲಿ, ಜೂ. 17: ಇಂಗ್ಲೆಂಡ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡಕ್ಕೆ ಸುರೇಶ್ ರೈನಾ ಆಯ್ಕೆಗೊಂಡಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಅಂಬಟಿ ರಾಯುಡು ಫೇಲಾಗಿದ್ದರಿಂದ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ರಾಯುಡು ಸ್ಥಾನಕ್ಕೆ ರೈನಾ ಅವರನ್ನು ಆಯ್ಕೆಗೊಳಿಸಿದೆ.
ಶುಕ್ರವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್.ಸಿ.ಎ.ಯಲ್ಲಿ) ನಡೆದಿದ್ದ ಯೋಯೋ ಟೆಸ್ಟ್ ನಲ್ಲಿ ರಾಯುಡು ಫೇಲಾಗಿದ್ದರು. ಹಾಗಾಗಿ ಭಾರತ ಏಕದಿನ ತಂಡವನ್ನು ಸೇರಿಕೊಳ್ಳುವ ಅವಕಾಶ ರೈನ ಅವರಿಗೆ ಬಂದೊದಗಿದೆ.
ಅಕ್ಟೋಬರ್ 2015ರಲ್ಲಿ ದಕ್ಷಿಣ ಆಫ್ರಿಕಾ ಎದುರು ರೈನಾ ಕಡೆಯ ಏಕದಿನ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷವೂ ರೈನಾ ಮತ್ತು ಯುವರಾಜ್ ಸಿಂಗ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿ ತಂಡದಿಂದ ಹೊರಗುಳಿದಿದ್ದರು. ಆದರೆ ಈ ಬಾರಿ ರೈನಾ ಯೋಯೋ ಟೆಸ್ಟ್ ನಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
31ರ ಹರೆಯದ ರೈನಾ ಒಟ್ಟು 223 ಏಕದಿನ ಪಂದ್ಯಗಳನ್ನಾಡಿದ್ದು, 5,568 ರನ್ ಸಾಧನೆ ಹೊಂದಿದ್ದಾರೆ. ಸದ್ಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ರೈನಾಗೆ ಏಕದಿನ ಅವಕಾಶವೂ ಒದಗಿದಂತಾಗಿದೆ. ಇನ್ನೊಂದೆಡೆ ಯೋಯೋ ಟೆಸ್ಟ್ ನಲ್ಲಿ ರಾಯುಡು ಫೇಲಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications