ಧೋನಿ ಮತ್ತು ತಾನು ಒಂದೇ ದಿನ ನಿವೃತ್ತಿ ನೀಡಿದ್ದರ ಗುಟ್ಟು ಬಿಚ್ಚಿಟ್ಟ ರೈನಾ!

ನವದೆಹಲಿ, ಆಗಸ್ಟ್ 17: ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಮತ್ತು ಆಲ್ ರೌಂಡರ್ ಸುರೇಶ್ ರೈನಾ ಆಗಸ್ಟ್ 15ರ ಶನಿವಾರ ಸ್ವಾತಂತ್ರ್ಯೋತ್ಸವ ದಿನದಂದೇ ನಿವೃತ್ತಿ ಘೋಷಿಸಿ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ನೀಡಿದ್ದರು. ಧೋನಿ ಮತ್ತು ತಾನು ಒಂದೇ ದಿನ ನಿವೃತ್ತಿ ನೀಡಿದ್ದರ ಗುಟ್ಟನ್ನು ರೈನಾ ಬಿಚ್ಚಿಟ್ಟಿದ್ದಾರೆ.
ಆರಂಭದಲ್ಲಿ ಧೊನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಸುದ್ದಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಸುರೇಶ್ ರೈನಾ ನಿವೃತ್ತಿಯ ಸುದ್ದಿಯೂ ಕೇಳಿ ಬಂದಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಭಾರತದ ಬ್ಯಾಟ್ಸ್‌ಮನ್‌ಗಳಾದ ರೈನಾ ಮತ್ತು ಧೋನಿ ಇಬ್ಬರೂ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ನಿವೃತ್ತಿ ವಿಚಾರದಲ್ಲೂ ಜೊತೆಯಾಗುವ ಮೂಲಕ ಧೋನಿ-ರೈನಾ ಅಭಿಮಾನಿಗಳ ಹೃದಯ ತಾಗಿದ್ದರು.
ದೈನಿಕ್ ಜಾಗ್ರಣ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ 33ರ ಹರೆಯದ ರೈನಾ, ನಿವೃತ್ತಿಯ ಬಗ್ಗೆ ಇಬ್ಬರೂ ಮೊದಲೇ ನಿರ್ಧರಿಸಿದ್ದೆವು. ಸ್ವಾತಂತ್ರ್ಯೋತ್ಸವ ದಿನದಂದೇ ನಿವೃತ್ತಿ ಕೊಟ್ಟರೆ ಅರ್ಥಪೂರ್ಣ ಅನ್ನಿಸಿತು. ಅದಕ್ಕೇ ಆ ದಿನ ನಿವೃತ್ತಿಯ ನಿರ್ಧಾರ ಪ್ರಕಟಿಸಿದೆವು ಎಂದು ರೈನಾ ಹೇಳಿದ್ದಾರೆ.
'ಆಗಸ್ಟ್ 15ರ ಶನಿವಾರಕ್ಕೆ ನಾವು ಮನಸ್ಸು ಸಿದ್ಧ ಮಾಡಿಕೊಂಡಿದ್ದೆವು. ಧೋನಿಯ ಜೆರ್ಸಿ ನಂಬರ್ 7, ನನ್ನ ಜೆರ್ಸಿ ನಂಬರ್ 3. ಎರಡನ್ನೂ ಜೊತೆಗಿಟ್ಟರೆ 73 ಆಗುತ್ತದೆ. ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 73 ವರ್ಷ ತುಂಬುತ್ತದೆ. ಹೀಗಾಗಿ ಈ ದಿನಕ್ಕಿಂತ ಒಳ್ಳೆದಿನ ಬೇರೊಂದಿಲ್ಲ ಅನ್ನಿಸಿತು,' ಎಂದು ರೈನಾ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications