ಐಪಿಎಲ್‌ನಲ್ಲಿ 99 ರನ್ ಗಳಿಸಿ ಶತಕ ವಂಚಿತರು: ರೈನಾರಿಂದ ಇಶಾನ್ ಕಿಶಾನ್ ತನಕ

ಶಾರ್ಜಾ, ಸೆ. 28: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬ್ಯಾಟ್ಸ್ ಮನ್ ಗಳು ಭರ್ಜರಿ ಪ್ರದರ್ಶನ ನೀಡುವುದು ಮಾಮೂಲಿ. ಆದರೆ, ಘಟಾನುಘಟಿ ಬ್ಯಾಟ್ಸ್ ಮನ್ ಗಳು ಇನ್ನೇನು ಶತಕ ಗಳಿಸುತ್ತಾರೆ ಎನ್ನುವಾಗ ಎಡವಿದ್ದಾರೆ. 13 ಸೀಸನ್ ಗಳಲ್ಲಿ ಇಲ್ಲಿ ತನಕ ಐದು ಬಾರಿ ಬ್ಯಾಟ್ಸ್ ಮನ್ ಗಳು 99 ಸ್ಕೋರಿಗೆ ಔಟಾಗಿದ್ದಾರೆ.
ಕ್ರಿಕೆಟ್ ಇತಿಹಾಸವನ್ನು ನೋಡಿದರೆ ನರ್ವಸ್ ನೈಂಟಿಗೆ ಮೊದಲು ಆಹುತಿಯಾಗಿದ್ದು ಆಸ್ಟ್ರೇಲಿಯಾದ ಹ್ಲೆಮ್ ಹಿಲ್. ಹಿಲ್ ಅವರು 1902ರಲ್ಲಿ ಟೆಸ್ಟ್ ಪಂದ್ಯದಲ್ಲಿ 99ರನ್ನಿಗೆ ಔಟಾದ ಮೊದಲ ಆಟಗಾರ.
ನಂತರ ನರ್ವಸ್ ನೈಂಟಿಗೆ ಸಿಲುಕಿ 99ಕ್ಕೆ ಔಟಾದವರ ಪೈಕಿ ಸಚಿನ್ ತೆಂಡೂಲ್ಕರ್ ನಿಂದ ಮೈಕಲ್ ಸ್ಲೇಟರ್ ತುಂಬಾ ಕ್ರಿಕೆಟರ್ ಗಳಿದ್ದಾರೆ. ಆದರೆ, ಐಪಿಎಲ್ ಇತಿಹಾಸದಲ್ಲಿ 5 ಬಾರಿ ಈ ರೀತಿ ಸನ್ನಿವೇಶ ಎದುರಾಗಿದೆ. ಲೇಟೆಸ್ಟ್ ಈ ಪಟ್ಟಿಗೆ ಸೇರಿದವರು ಸೆಪ್ಟೆಂಬರ್ 28ರಂದು ಐಪಿಎಲ್ 2020ರಂದು ಆರ್ ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ನ ಇಶಾನ್ ಕಿಶಾನ್.

ಇಶಾನ್ ಕಿಶಾನ್
ಇಶಾನ್ ಕಿಶಾನ್ - 99ಔಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ, 2020

ಪೃಥ್ವಿ ಶಾ
ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಾ 99 ರನ್ ಗಳಿಸಿ ಔಟ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2019

ಕ್ರಿಸ್ ಗೇಲ್
ಕ್ರಿಸ್ ಗೇಲ್- ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡುತ್ತಾ 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 99ರನ್ ಗಳಿಸಿ ಔಟಾಗದೆ ಉಳಿದಿದ್ದರು.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ -99ಔಟ್, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ, 2013.

ಸುರೇಶ್ ರೈನಾ
ಸುರೇಶ್ ರೈನಾ- 99 ಔಟಾಗದೆ, ಸನ್ ರೈಸರ್ಸ್ ಹೈದರಾಬಾದ್, 2013.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications