ರೈನಾಗೆ ಜ್ವರ ಬಿಟ್ಟಿಲ್ಲ, ಕಿವೀಸ್ ವಿರುದ್ಧದ 2ನೇ ಪಂದ್ಯಕ್ಕೂ ಅಲಭ್ಯ
ಬೆಂಗಳೂರು, ಅಕ್ಟೋಬರ್ 18: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಎರಡನೇ ಪಂದ್ಯದಲ್ಲೂ ಆಡುತ್ತಿಲ್ಲ. ವೈರಲ್ ಜ್ವರದಿಂದ ಇನ್ನೂ ಗುಣಮುಖರಾಗದ ರೈನಾ ಅವರು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಮಂಗಳವಾರ ಸಂಜೆ ಹೇಳಿದೆ.
ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಲಭ್ಯರಾಗಿದ್ದ ರೈನಾ ಬದಲಿಗೆ ಯಾವುದೇ ಆಟಗಾರನನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಮಾಡಿರಲಿಲ್ಲ. [ಏಕದಿನ ಸರಣಿ ವೇಳಾಪಟ್ಟಿ]

ರೈನಾ ಬದಲಿಗೆ ತಂಡದಲ್ಲಿ ಕೇದಾರ್ ಜಾಧವ್ ಆಡಿದ್ದರು. ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಿರಾಟ್ ಕೊಹ್ಲಿ ನೇತೃತದ ಭಾರತ ತಂಡ ಗೆದ್ದುಕೊಂಡಿದೆ. ಈಗ ಕಿವೀಸ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜಯ ಕಂಡಿದೆ.[3 ಏಕದಿನ ಪಂದ್ಯಕ್ಕೆ ಭಾರತ ತಂಡ ಪ್ರಕಟ]
29 ವರ್ಷ ವಯಸ್ಸಿನ ರೈನಾ ಅವರು ಭಾರತದ ಪರ 223 ಏಕದಿನ ಪಂದ್ಯಗಳನ್ನಾಡಿದ್ದು, ಕಿವೀಸ್ ಸರಣಿಗಾಗಿ ತಂಡಕ್ಕೆ ಮರಳಿದಿದ್ದಾರೆ.
ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೈನಾ ಕೂಡಾ ತಂಡದಲ್ಲಿದ್ದಾರೆ. ಅಕ್ಟೋಬರ್ 25, 2015 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬೈನಲ್ಲಿ ಕೊನೆಯ ಪಂದ್ಯವನ್ನಾಡಿದ್ದರು. ಎರಡನೇ ಏಕದಿನ ಪಂದ್ಯ ಅಕ್ಟೋಬರ್ 19 (ಬುಧವಾರ) - (ಫಿರೋಜ್ ಶಾ ಕೋಟ್ಲಾ, ನವದೆಹಲಿ)
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications