ಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಯಲ್ಲಿದ್ದಾರೆ ಸ್ಫೋಟಕ ಬ್ಯಾಟ್ಸ್ಮನ್ ಸುರೇಶ್ ರೈನಾ

ಆ್ಯಂಸ್ಟರ್‌ಡ್ಯಾಮ್, ಆಗಸ್ಟ್ 10: ಭಾರತದ ಸ್ಫೋಟಕ ಬ್ಯಾಟ್ಸ್ಮನ್, ಅತ್ಯುತ್ತಮ ಫೀಲ್ಡರ್ ಸುರೇಶ್ ರೈನಾ ಶುಕ್ರವಾರ (ಆಗಸ್ಟ್ 9) ನೆದರ್ಲೆಂಡ್ಸ್‌ನ ಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಣಕಾಲು ನೋವಿನ ಸಮಸ್ಯೆ ಎದುರಿಸುತ್ತಿರುವ ರೈನಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
32ರ ಹರೆಯದ, ಎಡಗೈ ಬ್ಯಾಟ್ಸ್ಮನ್ ರೈನಾ, ಕಳೆದ ಕೆಲ ತಿಂಗಳಿನಿಂದ ಮೊಣಕಾಲು ಗಾಯದ ಸಮಸ್ಯೆಯಲ್ಲಿದ್ದರು. ಶಸ್ತ್ರ ಚಿಕಿತ್ಸೆ ನಡೆದಿದ್ದು, ರೈನಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ 6 ವಾರಗಳು ಬೇಕಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಬಿಸಿಸಿಐ ಕೂಡ ಟ್ವಿಟರ್‌ನಲ್ಲಿ ಈ ವಿಚಾರ ತಿಳಿಸಿದೆ.
'ಸುರೇಶ್ ರೈನಾ ಅವರು ಕಳೆದ ಕೆಲವು ತಿಂಗಳುಗಳಿಂದ ಮೊಣಕಾಲು ಗಾಯದ ಸಮಸ್ಯೆಯಲ್ಲಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಸಿಕೊಳ್ಳಲು 4-6 ವಾರಗಳು ಬೇಕಾಗಬಹುದು,' ಎಂದು ರೈನಾ ಅವರ ಡಚ್ ಸರ್ಜನ್, ಡಾ. ಎಚ್ ವ್ಯಾನ್ ಡೆರ್ ಹೋವೆನ್ ತಿಳಿಸಿದ್ದಾರೆ.
ಕಾಲು ನೋವಿನ ಕಾರಣ ರೈನಾ ಈ ತಿಂಗಳಾಂತ್ಯದಿಂದ ಆಂಭವಾಗಲಿರುವ ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತಾಗಿದೆ. ರೈನಾ, 18 ಟೆಸ್ಟ್, 226 ಏಕದಿನ ಪಂದ್ಯ, 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜುಲೈ 2018 ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರೈನಾ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications