Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರಡನೇ ಮಗುವಿನ ಖುಷಿಯಲ್ಲಿ ಸುರೇಶ್ ರೈನಾ-ಪ್ರಿಯಾಂಕಾ ರೈನಾ ದಂಪತಿ

Suresh Raina, wife Priyanka welcome 2nd child, name baby boy Rio

ನವದೆಹಲಿ, ಮಾರ್ಚ್ 23: ಭಾರತದ ಕ್ರಿಕೆಟರ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ರೈನಾ ದಂಪತಿ ಎರಡನೇ ಮಗುವಿನ ಖುಷಿಯಲ್ಲಿದೆ. ಸುರೇಶ್ ಪತ್ನಿ ಪ್ರಿಯಾಂಕಾ, ಸೋಮವಾರ (ಮಾರ್ಚ್ 23) ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಸುರೇಶ್ ರೈನಾ ಈ ವಿಚಾರವನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ರೈನಾಗೆ ಎರಡನೇ ಮಗು ಜನಿಸಿರುವ ವಿಚಾರವನ್ನು ಮೊದಲು ಹೇಳಿದ್ದು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸಹ ಆಟಗಾರ, ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು. ಟ್ವೀಟ್‌ ಮಾಡಿದ್ದ ಭಜ್ಜಿ, 'ಗಂಡು ಮಗುವಿಗಾಗಿ ಸುರೇಶ್ ರೈನಾ ಮತ್ತು ಪ್ರಿಯಾಂಕಾಗೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದರು.

ಹರ್ಭಜನ್ ಸಿಂಗ್ ಟ್ವೀಟ್ ಬಳಿಕ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ತಾಯಿ ಮಗುವಿನ ಚಿತ್ರ ಹಂಚಿಕೊಂಡಿದ್ದರು. 'ಈ ಹೊಸ ಆರಂಭದ ಹೊತ್ತಿನಲ್ಲಿ ಆಶ್ಚರ್ಯ, ಭರವಸೆ ಎಲ್ಲವೂ ಜೊತೆ ಜೊತೆಗೆ ಮೂಡುತ್ತಿದೆ. ನನ್ನ ಪುತ್ರಿ ಗ್ರೇಸಿಯಾಳ ಕಿರಿಯ ಸಹೋದರ, ನಮ್ಮ ಮಗ ರಿಯೋ ರೈನಾನನ್ನು ಸ್ವಾಗತಿಸಲು ನಮಗೆ ಹೆಮ್ಮೆಯೆನಿಸುತ್ತಿದೆ,' ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ಸುರೇಶ್ ರೈನಾ ಅವರೇ ಹೇಳಿಕೊಂಡಿರುವಂತೆ, ಎರಡನೇ ಮಗು ಗಂಡು ಮಗುವಾಗಿದ್ದು ಅದಕ್ಕೆ ರಿಯೋ ಎಂದು ನಾಮಕರಣ ಮಾಡಲಾಗಿದೆ. ಸುರೇಶ್-ಪ್ರಿಯಾಂಕಾ ಅಪ್ಪ-ಅಮ್ಮ ಎನಿಸಿದ್ದು ಪುತ್ರಿ ಗ್ರೇಸಿಯಾ ಜನಿಸಿದಾಗ. 2016ರಲ್ಲಿ ರೈನಾ ದಂಪತಿಗೆ ಮೊದಲ ಮಗುವಾಗಿತ್ತು.

Story first published: Monday, March 23, 2020, 18:41 [IST]
Other articles published on Mar 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+