Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020 ಗೆದ್ದ ಮುಂಬೈ: 'ಗ್ರೇಟ್ ಲೀಡರ್' ಎಂದ ರೈನಾ, ಸೆಹ್ವಾಗ್

Suresh Raina Wish To Mumbai Indians For 5th Title

2020ನೇ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮುಡಿಗೇರಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಕಾಣುವ ಮೂಲಕ ಐದನೇ ಸಲ ಐಪಿಎಲ್ ಗೆದಿದ್ದಾರೆ.

ಐಪಿಎಲ್ ಚಾಂಪಿಯನ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಶುಭಕೋರಿದ್ದಾರೆ. ''2020ರ ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭಾಶಯ. ಗ್ರೇಟ್ ಲೀಡರ್, ಸಹೋದರ ರೋಹಿತ್ ಶರ್ಮಾ. ಫೈನಲ್ ಪ್ರವೇಶಿಸಲು ಡೆಲ್ಲಿ ತಂಡವೂ ಅದ್ಭುತ ಪ್ರದರ್ಶನ ನೀಡಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಡೆಲ್ಲಿ ಸೋಲಿಸಿ 5ನೇ ಐಪಿಎಲ್ ಟ್ರೋಫಿ ಎತ್ತಿದ ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಐಪಿಎಲ್ ಗೆದ್ದ ಬಳಿಕ ವಿರೇಂದ್ರ ಸೆಹ್ವಾಗ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ''ಜಗತ್ತಿನ ಅತ್ಯುತ್ತಮ ಟಿ-ಟ್ವೆಂಟಿ ಪ್ರಾಂಚೈಸಿ ಮುಂಬೈ ಹಾಗೂ ಈ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಉತ್ತಮ ನಾಯಕ. ಮುಂಬೈ ಗೆಲ್ಲಲು ಅರ್ಹ ತಂಡ'' ಎಂದು ಶುಭಾಶಯ ತಿಳಿಸಿದ್ದಾರೆ.

ಕೊರೊನಾ ವೈರಸ್ ಸವಾಲಿನ ನಡುವೆಯೂ ಅದ್ಭುತವಾಗಿ ಐಪಿಎಲ್ ಆಯೋಜಿಸಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುರೇಶ್ ರೈನಾ ಅವರು 2020ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿಲ್ಲ. ಮೊದಲ ಪಂದ್ಯಕ್ಕೂ ಮುನ್ನವೇ ಕೌಟುಂಬಿಕ ಕಾರಣದಿಂದ ಐಪಿಎಲ್‌ನಿಂದ ಹೊರಗುಳಿದರು. ಕಳೆದ ಬಾರಿ ಐಪಿಎಲ್ ಫೈನಲ್ ಆಡಿದ್ದ ಚೆನ್ನೈ ತಂಡ ಈ ಸಲ ಲೀಗ್ ಹಂತದಲ್ಲೇ ಹೊರಬಿತ್ತು.

Story first published: Tuesday, November 10, 2020, 23:34 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+