Team India: ಗೌತಮ್ ಗಂಭೀರ್ ನಿಯಂತ್ರಣದಲ್ಲಿಲ್ಲ ಟೀಮ್ ಇಂಡಿಯಾ; ಮಾಜಿ ಆಟಗಾರ ಅಚ್ಚರಿ ಹೇಳಿಕೆ
ಭಾರತ ಕ್ರಿಕೆಟ್ ತಂಡ ಸಾಲು ಸಾಲು ಟೀಕೆಗಳನ್ನು ಎದುರಿಸುವಂತಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಭಾರತ ತಂಡದ ಉತ್ಸಾಹ ಕಡಿಮೆಯಾಗಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವು ಭಾರತ ತಂಡಕ್ಕೆ ಧೈರ್ಯ ತಂದಿತ್ತು. ಇದೀಗ ಅಡಿಲೇಡ್ ಮತ್ತು ಮೆಲ್ಬೋರ್ನ್ ಟೆಸ್ಟ್ ಪಂದ್ಯಗಳ ಸೋಲನ ಬಳಿಕ ಟೀಮ್ ಇಂಡಿಯಾ ಆಟಗಾರರಲ್ಲಿ ಉತ್ಸಾಹ ಕಳೆದುಕೊಂಡಿದ್ದಾರೆ. ಇದು ತಂಡದ ಮೇಲೆ ಪರಿಣಾಮ ಬೀರುತ್ತಿದ್ದು, ಆಟಗಾರರು ಮತ್ತು ಹೆಡ್‌ಕೋಚ್ ಗೌತಮ್ ಗಂಭೀರ್ ನಡುವೆ ಹೊಂದಾಣಿಕೆ ಇಲ್ಲ ಎಂಬುದನ್ನು ವರದಿಗಳು ಹೇಳುತ್ತಿವೆ. ಆದರೆ ಈ ಕುರಿತು ಗಂಭೀರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕೂ ಗುರುವಾರ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪಂದ್ಯದ ಮುನ್ನ ದಿನ ನಾಯಕ ಬಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಗೌತಮ್ ಗಂಭೀರ್ ಬಂದಿದ್ದಾರೆ. ಈ ನಡೆ ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೀಂದರ್ ಖನ್ನಾ ಅವರು ಟೀಮ್ ಇಂಡಿಯಾ ಗೌತಮ್ ಗಂಭೀರ್ ನಿಯಂತ್ರಣದಲ್ಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

ಖನ್ನಾ ಹೇಳಿದ್ದೇನು?
ಸಾಮಾನ್ಯವಾಗಿ ಒಬ್ಬ ಹೆಡ್‌ಕೋಚ್ ಜವಾಬ್ದಾರಿಯುತ ಸ್ಥಾನವನ್ನು ಹೊಂದಿರುತ್ತಾನೆ. ಅವನು ತಂಡದಲ್ಲಿ ತಂದೆಯಂತೆ ಇರುತ್ತಾನೆ. ತಂಡದ ಒಳಗೆ ಇರುವ ಸಮಸ್ಯೆಗಳನ್ನು ಕೋಚ್ ಆದವನು ನಿಭಾಯಿಸಲು ಸಾಧ್ಯವಾಗದಿದ್ದರೆ ತುಂಬಾ ಕೆಟ್ಟದು. ನೀವು ಕಾರ್ಪೊರೇಟ್ ಸೆಟ್-ಅಪ್‌ನಲ್ಲಿದ್ದ, ಬಾಸ್ ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂದುಕೊಳ್ಳೋಣ. ಈ ವೇಳೆ ಅವರೊಂದಿಗೆ ನಡೆಸುವ ಸಂಭಾಷಣೆಗಳು ಸಮಸ್ಯೆಗಳನ್ನು ಪರಿಹರಿಸುತ್ತವೆ. ಹಾಗೆಯೇ ಆಟಗಾರರು ಕೂಡ ಕೋಚ್ ಜೊತೆಗೆ ಸಂಭಾಷಣೆಗಳನ್ನು ನಡೆಸಬೇಕು. ಟೀಮ್ ಇಂಡಿಯಾದ ಮೇಲೆ ಗಂಭೀರ್ ಹಿಡಿತ ಕಳೆದುಕೊಂಡಂತೆ ಕಾಣುತ್ತಿದೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನಾಯಿತು ಎಂಬುದನ್ನು ನೀವೆಲ್ಲರೂ ಬರೆದಿರುವುದನ್ನು ನಾನು ಓದಿದ್ದೇನೆ ಎಂದು ಸುರೀಂದರ್ ಖನ್ನಾ ಹೇಳಿದ್ದಾರೆ.
ನಾಯಕತ್ವ ವಿಭಜನೆ
ಇಂಗ್ಲೆಂಡ್ ಮೂರು ಮಾದರಿ ಕ್ರಿಕೆಟ್‌ಗೆ ವಿವಿಧ ತಂಡಗಳನ್ನು ಹೊಂದಿದೆ. ಆದರೆ ಎರಡು ಅಥವಾ ಮೂರಕ್ಕಿಂತ ಹೆಚ್ಚು ಆಟಗಾರರು ಟಿ20 ಮತ್ತು ಟೆಸ್ಟ್ ತಂಡದಲ್ಲಿ ಇರುವುದಿಲ್ಲ. ಹೀಗಾಗಿ ಭಾರತ ತಂಡಕ್ಕೆ ಮೂವರು ನಾಯಕರು ಮತ್ತು ಮೂರು ವಿಭಿನ್ನ ತಂಡಗಳನ್ನು ಮಾಡಬೇಕು. ನಮಗೆ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ಗೆ ನಾಯಕರಾಗಿದ್ದಾರೆ. ಶುಭಮನ್ ಗಿಲ್ ಅವರಂತಹವರನ್ನು ಏಕದಿನ ನಾಯಕನನ್ನಾಗಿ ನೋಡಲು ನಾನು ಇಷ್ಟಪಡುತ್ತೇನೆ. ಆದರೆ, ಇತ್ತೀಚೆಗೆ ಸ್ಟಾರ್ ಆಟಗಾರರು ಫಿಟ್ನೆಸ್ ಮತ್ತು ಫಾರ್ಮ್ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ಸುರೀಂದರ್ ಖನ್ನಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications