ಮುಂಬೈ ಇಂಡಿಯನ್ಸ್ ಮಣಿಸಿದ ಹೈದರಾಬಾದ್
ಹೈದರಾಬಾದ್, ಮೇ 8: ಆರಂಭಿಕ ಆಟಗಾರ ಶಿಖರ್ ಧವನ್ ಅವರ ಅಜೇಯ ಅರ್ಧಶತಕದ (62) ನೆರವಿನಿಂದಾಗಿ ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ತಂಡ, ಸೋಮವಾರ (ಮೇ 8) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿತು.
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 140 ಗಳಿಸಿ ಜಯದ ನಗೆ ಬೀರಿತು.[ಸ್ಕೋರ್ ವಿವರ]

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡಕ್ಕೆ ಯಾವೊಬ್ಬ ಬ್ಯಾಟ್ಸ್ ಮನ್ ಗಟ್ಟಿಯಾಗಿ ನಿಂತು ಆಡಲಿಲ್ಲ. ಪರಿಣಾಮವಾಗಿ, ನೂರು ರನ್ ಗಡಿ ದಾಟುವಷ್ಟರಲ್ಲಿ 4 ವಿಕೆಟ್ (ಸೈಮನ್ಸ್, ರಾಣಾ, ಪಾರ್ಥೀವ್ ಪಟೇಲ್, ಹಾರ್ದಿಕ್ ಪಾಂಡ್ಯ) ಕಳೆದುಕೊಂಡಿತು.
ಆದರೆ, ನಾಯಕ ರೋಹಿತ್ ಶರ್ಮಾ (67 ರನ್, 45 ಎಸೆತ, 6 ಬೌಂಡರಿ, 2 ಸಿಕ್ಸರ್) ಆರ್ಭಟಿಸಿದ್ದರಿಂದಾಗಿ ಮುಂಬೈ 138 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.
ಮುಂಬೈ ನೀಡಿದ್ದ ಸಾಧಾರಣ ಸವಾಲನ್ನು ಬೆನ್ನಟ್ಟಿದ ಹೈದರಾಬಾದ್, ನಾಯಕ ಹಾಗೂ ಆರಂಭಿಕ ಡೇವಿಡ್ ವಾರ್ನರ್ ಅವರನ್ನು ಬೇಗನೇ ಕಳೆದುಕೊಂಡಿತಾದರೂ, ಮತ್ತೊಬ್ಬ ಆರಂಭಿಕ ಶಿಖರ್ ಧವನ್ (ಅಜೇಯ 62 ರನ್, 46 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಹೆನ್ರಿಕ್ಸ್ (44 ರನ್, 35 ಎಸೆತ, 6 ಬೌಂಡರಿ) ಅವರ ಜೋಡಿ, 3ನೇ ವಿಕೆಟ್ ಗೆ ಸೇರಿಸಿದ 91 ರನ್ ಗಳ ಜತೆಯಾಟವು, ತಂಡವನ್ನು ಗೆಲುವಿನ ಹಾದಿಗೆ ಕರೆತಂದು ನಿಲ್ಲಿಸಿತು.
ಆನಂತರ, 13 ಹಾಗೂ 15ನೇ ಓವರ್ ಗಳಲ್ಲಿ ಕ್ರಮವಾಗಿ ಹೆನ್ರಿಕ್ಸ್ ಹಾಗೂ ಯುವರಾಜ್ ಸಿಂಗ್ (9 ರನ್, 11 ಎಸೆತ, 1 ಬೌಂಡರಿ) ಉರುಳಿದರೂ, ಇನಿಂಗ್ಸ್ ನ ಕೊನೆಯ ಹಂತದಲ್ಲಿ ವಿಜಯ್ ಶಂಕರ್ (ಅಜೇಯ 15, 12 ಎಸೆತ, 1 ಬೌಂಡರಿ) ಅವರು ಶಿಖರ್ ಧವನ್ ಗೆ ನೀಡಿದ ಅನನ್ಯ ಬೆಂಬಲದಿಂದಾಗಿ, ಸನ್ ರೈಸರ್ಸ್ ಗೆಲುವಿನ ದಡ ಮುಟ್ಟಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 138ಕ್ಕೆ 7 (20 ಓವರ್ ) (ರೋಹಿತ್ ಶರ್ಮಾ 67, ಅಕ್ಷರ್ ಪಟೇಲ್ 23; ಸಿದ್ದಾರ್ಥ್ ಕೌಲ್ 24ಕ್ಕೆ 3, ಭುವನೇಶ್ವರ್ ಕುಮಾರ್ 29ಕ್ಕೆ 2); ಸನ್ ರೈಸರ್ಸ್ 140ಕ್ಕೆ 3 (18.2 ಓವರ್ ) (ಶಿಖರ್ ಧವನ್ ಅಜೇಯ 62, ಹೆನ್ರಿಕ್ಸ್ 44; ಮೆಕ್ಲೆನಾಘನ್ 26ಕ್ಕೆ 1, ಬುಮ್ರಾ 24ಕ್ಕೆ 1). ಪಂದ್ಯಶ್ರೇಷ್ಠ: ಶಿಖರ್ ಧವನ್ (ಸನ್ ರೈಸರ್ಸ್ ಹೈದರಾಬಾದ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications