ಕ್ರಿಕೆಟ್ : ಇಸಿಬಿಯಿಂದ ಹಿಂದಿ ಟ್ವೀಟ್, ಮೋದಿ ಪ್ರಶ್ನೆ
ಲಂಡನ್, ಜು.11: ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕೆಎಸ್ ಸಿಎ ಮಾಡದ ಸಾಹಸವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಾಡಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದ ಬಗ್ಗೆ ಹಿಂದಿ ಭಾಷೆ ಲಿಪಿಯಲ್ಲಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದು ಈ ಬಗ್ಗೆ ಮೋದಿ ಪ್ರಶ್ನೆ ಮಾಡಿದ್ದಾರೆ.
ಜುಲೈ 10 ರಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವೀಟ್ ಖಾತೆ (@ECB_cricket) ಟ್ವೀಟ್ ಮಾಡಿದ್ದು ಈ ಬಗ್ಗೆ ಕ್ರಿಕೆಟ್ ಅಭಿಮಾನಿಯಾದ ಭವ್ಯ ಮೋದಿ ಎಂಬುವರು ಪ್ರಶ್ನಿಸಿದ್ದಾರೆ. ನಿಮ್ಮ ಟ್ವೀಟ್ ನೋಡಿ ಅಚ್ಚರಿಯಾಗುತ್ತಿದೆ. ಏನಿದು? ಎಂದಿದ್ದಾರೆ.
ಪ್ರಾಯೋಗಿಕವಾಗಿ ಹಿಂದಿಯಲ್ಲಿ ಟ್ವೀಟ್ ಮಾಡುತ್ತಿದ್ದೇವೆ ನಿಮ್ಮ ಅಭಿಪ್ರಾಯವೇನು ಎಂದು ಇಸಿಬಿ ಉತ್ತರಿಸಿದೆ. ಇದು ಒಳ್ಳೆಯ ಬೆಳವಣಿಗೆ ಆದರೆ, ಇಂಗ್ಲೆಂಡಿನ ಜನರಿಗೆ ಕಿರಿಕಿರಿಯಾಗುವುದಿಲ್ಲವೇ. ನೀವು ನಿಮ್ಮ ಭಾಷೆಗೆ ಬದ್ಧರಾಗಿದ್ದರೆ ಒಳ್ಳೆಯದಲ್ಲವೇ ಎಂದು ಭವ್ಯ ಮೋದಿ (@mrbhavyamodi) ಉತ್ತರಿಸಿದ್ದಾರೆ.
ಟೆಸ್ಟ್ ಪಂದ್ಯದ ಸ್ಕೋರ್ ಕಾರ್ಡ್ ನೋಡಿ
ಕಳೆದ ಎರಡು ದಿನಗಳಿಂದ ಟೆಸ್ಟ್ ಬಗ್ಗೆ ಟ್ವೀಟ್ ಮಾಡುತ್ತಿರುವ ಇಸಿಬಿ ಸುಮಾರು 300,000 ಹಿಂಬಾಲಕರನ್ನು ಹೊಂದಿದೆ. ಮೊದಲಿಗೆ ಹಿಂದಿ ಟ್ವೀಟ್ ನೋಡಿದ ಕೆಲವು ಹಿಂಬಾಲಕರು ಟ್ವೀಟ್ ಐಡಿ ಹ್ಯಾಕ್ ಆಗಿರಬೇಕು ಎಂದು ಆತಂಕ ವ್ಯಕ್ತಪಡಿಸಿದ್ದರು.
ಆದರೆ, ಇದು ಇಸಿಬಿಯ ಅಸಲಿ ಟ್ವೀಟ್ ಎಂದು ತಿಳಿದ ಮೇಲೆ ಅಚ್ಚರಿಗೊಳಗಾದರು. ಇಷ್ಟಕ್ಕೂ ಇಸಿಬಿ ಯಾರನ್ನು ಮೆಚ್ಚಿಸಲು ಹಿಂದಿಯಲ್ಲಿ ಟ್ವೀಟ್ ಮಾಡುತ್ತಿದೆಯೋ ಗೊತ್ತಿಲ್ಲ. ಇಸಿಬಿ ಟ್ವೀಟ್ ಕಂಡು ಬಿಸಿಸಿಐ(@BCCI) ಬೆರಗಾಗುವುದೊಂದು ಬಾಕಿ ಇನ್ನು ಕೆಎಸ್ ಸಿಎ(@kscablr) ಕನ್ನಡದಲ್ಲಿ ಟ್ವೀಟ್ ಮಾಡಿದರೆ ಅದು ಪವಾಡವೇ ಸರಿ.

ಕ್ರಿಕೆಟ್ ಅಭಿಮಾನಿಗಳಿಂದ ಅಚ್ಚರಿ
ಜುಲೈ 10 ರಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವೀಟ್ ಖಾತೆ (@ECB_cricket) ಟ್ವೀಟ್ ಮಾಡಿದ್ದು ಈ ಬಗ್ಗೆ ಕ್ರಿಕೆಟ್ ಅಭಿಮಾನಿಯಾದ ಭವ್ಯ ಮೋದಿ ಎಂಬುವರು ಪ್ರಶ್ನಿಸಿದ್ದಾರೆ. ನಿಮ್ಮ ಟ್ವೀಟ್ ನೋಡಿ ಅಚ್ಚರಿಯಾಗುತ್ತಿದೆ. ಏನಿದು? ಎಂದಿದ್ದಾರೆ.
ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಟ್ವೀಟ್
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕೆಎಸ್ ಸಿಎ ಮಾಡದ ಸಾಹಸವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಾಡಿದೆ.
ಇಸಿಬಿಯಿಂದ ಎರಡನೇದಿನದ ಟ್ವೀಟ್
ಇಸಿಬಿಯಿಂದ ಟೆಸ್ಟ್ ಪಂದ್ಯದ ಎರಡನೇ ದಿನ ಸ್ಕೋರ್ ಜತೆಗೆ ಹಿಂದಿ ಟ್ವೀಟ್
ಪ್ರಾಯೋಗಿಕವಾಗಿ ಹಿಂದಿಯಲ್ಲಿ ಟ್ವೀಟ್
ಪ್ರಾಯೋಗಿಕವಾಗಿ ಹಿಂದಿಯಲ್ಲಿ ಟ್ವೀಟ್ ಮಾಡುತ್ತಿದ್ದೇವೆ ನಿಮ್ಮ ಅಭಿಪ್ರಾಯವೇನು ಎಂದು ಇಸಿಬಿ ಉತ್ತರಿಸಿದೆ.
ಇಂಗ್ಲೆಂಡಿನ ಜನರಿಗೆ ಕಿರಿಕಿರಿಯಾಗುವುದಿಲ್ಲವೇ
ಇಂಗ್ಲೆಂಡಿನ ಜನರಿಗೆ ಕಿರಿಕಿರಿಯಾಗುವುದಿಲ್ಲವೇ. ನೀವು ನಿಮ್ಮ ಭಾಷೆಗೆ ಬದ್ಧರಾಗಿದ್ದರೆ ಒಳ್ಳೆಯದಲ್ಲವೇ ಎಂದು ಭವ್ಯ ಮೋದಿ (@mrbhavyamodi) ಉತ್ತರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications