ಒಂದು ವಾರ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಮೇ 17ರಿಂದ ಆರಂಭವಾಗಲಿದೆ. ಭಾರತ ಹಾಗೂ ಪಾಕಿಸ್ತಾನ ಮಧ್ಯದಲ್ಲಿ ನಡೆದ ಉದ್ವಿಗ್ನತೆಯಿಂದಾಗಿ ಐಪಿಎಲ್ ಮುಂದೂಡಲಾಗಿತ್ತು. ಶನಿವಾರದಿಂದ ಮತ್ತೆ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳಿ ಕಾದಾಟ ನಡೆಸಲಿದೆ. ಈ ವೇಳೆ ಮತ್ತೆ ಆಟಗಾರರ ಕಣ್ಣುಗಳಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮೇಲೆ ನೆಟ್ಟಿರಲಿವೆ. ಹಾಗಿದ್ದರೆ ಸದ್ಯ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬ ಬಗ್ಗೆ ಕಂಪ್ಲಿಟ್ ರಿಪೋರ್ಟ್ ಇಲ್ಲಿದೆ.
ಆರೆಂಜ್ ಕ್ಯಾಪ್‌ಗಾಗಿ ಭಾರತೀಯ ಆಟಗಾರರು ಜಿದ್ದಾಜಿದ್ದಿನ ಫೈಟ್ ನಡೆಸುತ್ತಿದ್ದಾರೆ. ಈ ವೇಳೆ ಒಂದೆ ತಂಡದ ಇಬ್ಬರು ಆಟಗಾರರು ಟಾಪ್ ಮೂರರಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಆರ್‌ಸಿಬಿ ತಂಡದಿಂದ ವಿರಾಟ್ ಕೊಹ್ಲಿ, ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಸಹ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆರೆಂಜ್ ಕ್ಯಾಪ್ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಬಳಿ ಇದೆ. ಸೂರ್ಯ ಐಪಿಎಲ್ ಆರಂಭದಲ್ಲಿ ಕೊಂಚ ನೀರಸ ಪ್ರದರ್ಶನ ನೀಡಿದ್ರೂ ಸಹ ಕೊನೆಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಆಡಿದ 12 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 510 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ ಮೂರು ಅರ್ಧಶತಕಗಳು ಮೂಡಿ ಬಂದಿವೆ. ಇನ್ನು ಗುಜರಾತ್ ತಂಡದ ಭರವಸೆಯ ಆಟಗಾರ ಸಾಯಿ ಸುದರ್ಶನ್ (509 ರನ್), ಶುಭಮನ್ ಗಿಲ್ (508 ರನ್) ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇನ್ನು ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್, 510 ರನ್
ಸಾಯಿ ಸುದರ್ಶನ್, ಗುಜರಾತ್ ಟೈಟನ್ಸ್, 509 ರನ್
ಶುಭ್‌ಮನ್ ಗಿಲ್, ಗುಜರಾತ್ ಟೈಟನ್ಸ್, 508 ರನ್
ವಿರಾಟ್ ಕೊಹ್ಲಿ, ಆರ್‌ಸಿಬಿ, ಆರ್‌ಸಿಬಿ, 505 ರನ್
ಜೋಸ್ ಬಟ್ಲರ್, ಗುಜರಾತ್ ಟೈಟನ್ಸ್, 500 ರನ್

ಕರ್ನಾಟಕದ ಸ್ಟಾರ್ ಆಟಗಾರ ಪ್ರಸಿದ್ಧ್ ಕೃಷ್ಣಾ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಆಡಿದ 11 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿದ್ದಾರೆ. ಇನ್ನು ಉಳಿದ ಮೂರು ಸ್ಥಾನಗಳಲ್ಲಿ ವಿದೇಶಿ ಆಟಗಾರರು ಕಾಣಿಸಿಕೊಳ್ಳುತ್ತಾರೆ. ಐದನೇ ಸ್ಥಾನದಲ್ಲಿ ಮತ್ತೆ ಕೆಕೆಆರ್ ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ.
ಪ್ರಸಿದ್ಧ್ ಕೃಷ್ಣ, ಗುಜರಾತ್ ಟೈಟನ್ಸ್, 11 ಪಂದ್ಯ, 20 ವಿಕೆಟ್
ನೂರ ಅಹ್ಮದ್, ಸಿಎಸ್‌ಕೆ, 12 ಪಂದ್ಯ, 20 ವಿಕೆಟ್
ಜೋಶ್ ಹ್ಯಾಜಲ್‌ವುಡ್, ಆರ್‌ಸಿಬಿ, 10 ಪಂದ್ಯ, 18 ವಿಕೆಟ್
ಟ್ರೆಂಟ್ ಬೌಲ್ಟ್, ಮುಂಬೈ ಇಂಡಿಯನ್ಸ್, 11 ಪಂದ್ಯ, 18 ವಿಕೆಟ್
ವರುಣ್ ಚಕ್ರವರ್ತಿ, ಕೆಕೆಆರ್, 12 ಪಂದ್ಯ, 17 ವಿಕೆಟ್