Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs DC: ಡೆಲ್ಲಿ ವಿರುದ್ಧ ಮುಂಬೈಗೆ ಜಯ, ಪ್ಲೇ ಆಫ್‌ಗೆ ಎಂಟ್ರಿ

ಭರವಸೆಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬಾರಿಸಿದ ಅರ್ಧಶತಕ ಹಾಗೂ ಮಿಚೆಲ್ ಸ್ಯಾಂಟ್ನರ್‌ ಅವರ ಬಿಗುವಿನ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್‌ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ಲೇ ಆಫ್‌ಗೆ ಇಟ್ಟಿದೆ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಅಬ್ಬರಿಸಿದೆ. ಅಲ್ಲದೆ 2 ಅಂಕವನ್ನು ಕಲೆ ಹಾಕಿದೆ. ಈ ಮೂಲಕ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 18.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ ಪ್ಲೇ ಆಫ್‌ಗೆ ಕ್ವಾಲಿಫೈ ಆದರೆ, ಡೆಲ್ಲಿ ಮುಂದಿನ ಹಂತದ ಕನಸನ್ನು ಕೈ ಬಿಟ್ಟಿದೆ.

Suryakumar Yadav s Unbeaten Fifty Santner s Bowling Masterclass Propel Mumbai Indians to Playoffs

ಮುಂಬೈ ತಂಡ ಬ್ಯಾಟಿಂಗ್ ಮಾಡುವಾಗ ಕೊನೆಯ ಎರಡು ಓವರ್‌ಗಳಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿತು. ಕೊನೆಯ 12 ಎಸೆತಗಳಲ್ಲಿ ಮುಂಬೈ ಬ್ಯಾಟರ್‌ಗಳು 48 ರನ್‌ ಚಚ್ಚಿದ್ದು ತಮ್ಮ ಮೇಲಿನ ಒತ್ತಡವನ್ನು ಎದುರಾಳಿ ತಂಡದ ಮೇಲೆ ಹಾಕುವಂತೆ ಮಾಡಿತು. ಸೂರ್ಯಕುಮಾರ್‌ ಯಾದವ್‌ ಹಾಗೂ ತಿಲಕ್‌ ವರ್ಮಾ ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿ ಅಬ್ಬರಿಸಿದರು. ಇವರಿಬ್ಬರ ಅಮೋಘ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್‌ 181 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೀಡಿತು.

ರನ್‌ ಕಲೆ ಹಾಕುವಲ್ಲಿ ಬ್ಯಾಟರ್‌ಗಳು ವಿಫಲ

ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಫಾಫ್‌ ಡುಪ್ಲೇಸಿಸ್ (6), ಅಭಿಷೇಕ್‌ ಪೋರೆಲ್ (6), ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ ಕರ್ನಾಟಕದ ಕೆಎಲ್ ರಾಹುಲ್‌ 11 ರನ್‌ಗಳಿಗೆ ಆಟ ಮುಗಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪವರ್ ಪ್ಲೇನಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮೊದಲ ಆರು ಓವರ್‌ಗಳಲ್ಲಿ 49 ರನ್‌ ಸೇರಿಸಿ 3 ವಿಕೆಟ್‌ ಕಳೆಡುಕೊಂಡಿತ್ತು.

ಡೆಲ್ಲಿ ತಂಡದ ಪರ ಜೊತೆಯಾಟಗಳು ಬಾರದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿತು. ಯುವ ಆಟಗಾರ ಸಮೀರ್ ರಿಜ್ವಿ 39, ವಿಪ್ರಜ್‌ ನಿಗಮ್ 20, ಆಶುತೋಷ್ ಶರ್ಮಾ 18 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಡೆಲ್ಲಿ ಪರ ನಾಲ್ಕು ಬ್ಯಾಟರ್‌ಗಳನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ಮಿಚೆಲ್‌ ಅಬ್ಬರ

ಮುಂಬೈ ಇಂಡಿಯನ್ಸ್‌ ಪರ ಮಿಚೆಲ್ ಸ್ಯಾಂಟ್ನರ್‌ ಹಾಗೂ ಜಸ್ಪ್ರಿತ್‌ ಬುಮ್ರಾ ತಲಾ ಮೂರು ವಿಕೆಟ್‌ ಪಡೆದರು. ಉಳಿದಂತೆ ಟ್ರೆಂಟ್‌ ಬೌಲ್ಟ್‌, ದೀಪಕ್ ಚಹಾರ್, ವಿಲ್ ಜಾಕ್ಸ್, ಕರಣ್ ಶರ್ಮಾ ತಲಾ ಒಂದು ವಿಕೆಟ್‌ ಪಡೆದರು.

Suryakumar Yadav s Unbeaten Fifty Santner s Bowling Masterclass Propel Mumbai Indians to Playoffs

ಮುಂಬೈ ಇಂಡಿಯನ್ಸ್ ತಂಡದ ಆರಂಭ ಸಹ ಕಳಪೆಯಾಗಿತ್ತು. ಸ್ಟಾರ್ ಆಟಗಾರ ರೋಹಿತ್ ಶರ್ಮಾ (5) ದೊಡ್ಡ ಇನಿಂಗ್ಸ್‌ ಕಲೆ ಹಾಕಿದರು. ವಿಲ್‌ ಜಾಕ್ಸ್‌ (21) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮುಂಬೈ ಇಂಡಿಯನ್ಸ್ ಪವರ್ ಪ್ಲೇನಲ್ಲಿ 2 ವಿಕೆಟ್‌ ಕಳೆದುಕೊಂಡು ಸಕಂಷ್ಟಕ್ಕೆ ಸಿಲುಕಿತು. ಆದರೆ ಆರಂಭಿಕ ಆಟಗಾರ ರಯಾನ್ ರಿಕಲ್ಟನ್‌ (25) ಬಿಗ್ ಇನಿಂಗ್ಸ್ ಕಟ್ಟಲಿಲ್ಲ.

58 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ತಿಲಕ್ ವರ್ಮಾ (27) ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 49 ಎಸೆತಗಳಲ್ಲಿ55 ರನ್‌ ಸಿಡಿಸಿತು. ಹಾರ್ದಿಕ್ ಪಾಂಡ್ಯ (3) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರನೇ ವಿಕೆಟ್‌ಗೆ ಸೂರ್ಯಕುಮಾರ್‌ ಹಾಗೂ ನಮನ್‌ ಧೀರ್‌ (ಅಜೇಯ 24) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು.

ಸೂರ್ಯಕುಮಾರ್‌ ಅರ್ಧಶತಕ

ಸ್ಪೋಟಕ ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 73 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮುಕೇಶ್ ಕುಮಾರ್ 2 ವಿಕೆಟ್‌ ಕಬಳಿಸಿದರು.

Story first published: Wednesday, May 21, 2025, 23:49 [IST]
Other articles published on May 21, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+