Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿಯಾಗಿ ಮಿಂಚಿದ್ದ ಸುಶಾಂತ್ ರಜಪೂತ್ ಆತ್ಮಹತ್ಯೆಗೆ ಶರಣು!

Sushant Singh Rajput Commits Suicide At Mumbai Home

ಎಂಎಸ್ ಧೋನಿಯಾಗಿ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ರಾರಾಜಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಬಾಲಿವುಡ್‌ನ ಸ್ಫುರದ್ರೂಪಿ ನಟನೊಬ್ಬ ತನ್ನ ಜೀವನಕ್ಕೆ ತಾನೇ ಅಂತ್ಯ ಬರೆದುಕೊಂಡಿದ್ದಾರೆ.

ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದ ನಿವಾಸದಲ್ಲಿ ಸುಶಾಂತ್ ಮೃತ ದೇಹ ಫ್ಯಾನ್‌ಗೆ ನೇಣಿ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಟೀಮ್ ಇಂಡಿಯಾ ನಾಯಕ ಎಂಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ಸುಶಾಂತ್ ತಮ್ಮ ಅಮೋಘ ನಟನೆಯ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. ಸುಶಾಂತ್ ವೃತ್ತಿ ಜೀವನಕ್ಕೆ ಇದು ಅತಿ ದೊಡ್ಡ ಮೈಲಿಗಲ್ಲಾಗಿತ್ತು. ಧೋನಿಯ ಪಾತ್ರವನ್ನು ಅದ್ಭುತ ರೀತಿಯಲ್ಲಿ ನಿರ್ವಹಿಸಿ ಸುಶಾಂತ್ ಕ್ರಿಕೆಟ್ ಅಭಿಮಾನಿಗಳಿಂದಲೂ ಸೈ ಎನಿಸಿಕೊಂಡಿದ್ದರು.

ಸದ್ಯ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಯಾವುದೇ ಡೆತ್‌ ನೋಟ್ ಪತ್ತೆಯಾಗಿರುವ ಬಗ್ಗೆಯೂ ಸದ್ಯ ವರದಿಯಾಗಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಲಾಕ್‌ಡೌನ್‌ನಿಂದ ಕಂಗೆಟ್ಟ ಸಿನಿ ಲೋಕಕ್ಕೆ ಮತ್ತೊಂದು ಆಘಾತ ಈ ರೀತಿಯಾಗಿ ಬಂದೊದಗಿದೆ

ಆರ್ಥಿಕ ಮುಗ್ಗಟ್ಟು ಅಥವಾ ಲಾಕ್‌ಡೌನ್‌ನಿಂದಾಗಿ ಮಾನಸಿಕ ಖಿನ್ನತೆ ಅನುಭವಿಸಿ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ.

Story first published: Sunday, June 14, 2020, 16:09 [IST]
Other articles published on Jun 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+