For Quick Alerts
ALLOW NOTIFICATIONS  
For Daily Alerts
 

Champions Trophy: ಉದ್ಘಾಟನಾ ಸಮಾರಂಭಕ್ಕೆ ಪಾಕ್‌ಗೆ ರೋಹಿತ್‌ ಹೋಗ್ತಾರಾ? ಹೆಚ್ಚಿದೆ ಸಸ್ಪೆನ್ಸ್‌

ಸುಮಾರು ಏಳು ವರ್ಷಗಳ ಬಳಿಕ ಮತ್ತೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಬಾರಿ ಈ ಮೆಗಾ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ನೀಡಲಿದೆ. ಭಾರತ ಸೇರಿದಂತೆ ಒಟ್ಟು 8 ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಡಲಿದೆ.

ಪಾಕಿಸ್ತಾನಕ್ಕೆ ಭಾರತ ಪ್ರವಾಸ ಬೆಳೆಸದ ಹಿನ್ನೆಲೆಯಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಭಾರತ ಯುಎಇನಲ್ಲಿ ಆಡಲಿದೆ. ಒಂದೇ ಅಂಗಳದಲ್ಲಿ ಭಾರತ ಮೂರು ಪಂದ್ಯಗಳನ್ನು ಆಡಲಿದ್ದು, ಪಾಕಿಸ್ತಾನದ ಮೂರು ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಈ ಟೂರ್ನಿ ಫೆಬ್ರವರಿ 19ರಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಿಯನ್ನು ವರ್ಣರಂಜಿತ ಉದ್ಘಾಟನೆಗೆ ಪಾಕ್‌ ವೇದಿಕೆ ಸಿದ್ಧ ಮಾಡಿಕೊಂಡಿದೆ.

Suspense Over Rohit Sharma s Participation in ICC Champions Trophy Opening Ceremony

ಪಾಕ್‌ ರೋಹಿತ್ ಹೋಗ್ತಾರಾ?

ಪಾಕಿಸ್ತಾನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಉದ್ಘಟನಾ ಪಂದ್ಯದಲ್ಲಿ ಭಾಗವಹಿಸುತ್ತಾರಾ ಎಂಬ ಬಗ್ಗೆ ಕುತೂಹಲ ಇದ್ದೇ ಇದೆ. ಭಾರತ ತನ್ನ ಆಟಗಾರರು ಪಾಕಿಸ್ತಾನಕ್ಕೆ ಕಳಿಸುತ್ತಿಲ್ಲ. ಅಲ್ಲಿ ಭದ್ರತಾ ಕಾರಣಗಳನ್ನು ನೀಡಿ ಆಟಗಾರರನ್ನು ಪಾಕ್‌ಗೆ ಕಳಿಸಲು ಬಿಸಿಸಿಐ ನಿರಾಕರಿಸಿದೆ. ಆದರೆ ರೋಹಿತ್ ಶರ್ಮಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಾರಾ ಎಂಬ ಸಸ್ಪೆನ್ಸ್‌ ಇನ್ನು ಮನೆ ಮಾಡಿದೆ.

ರೋಹಿತ್‌ ಶರ್ಮಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲ. ವರದಿಯ ಪ್ರಕಾರ, ಬಿಸಿಸಿಐ ನಾಯಕ ರೋಹಿತ್ ಶರ್ಮಾ ಅವರಿಗೆ ಉದ್ಘಾಟನಾ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಹೋಗಲು ಅವಕಾಶ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಉದ್ಘಾಟನಾ ಸಮಾರಂಭವನ್ನು ಯಶಸ್ವಿಗೊಳಿಸುವುದು ಪಿಸಿಬಿಗೆ ಕಷ್ಟ ವಾಗಲಿದೆ.

ಏನು ಹೇಳುತ್ತೇ ಐಸಿಸಿ ನಿಯಮ?

ಯಾವುದೇ ಐಸಿಸಿ ಟೂರ್ನಿಗಳನ್ನು ಆಡಿಸುವ ಮುನ್ನ ಆತಿಥೇಯ ರಾಷ್ಟ್ರವು ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತದೆ. ಮಾಹಿತಿಯ ಪ್ರಕಾರ ಈ ಸಮಾರಂಭವನ್ನು ಪಾಕ್‌ ಫೆ.17 ರಂದು ನಡೆಸಲು ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಐಸಿಸಿ ನಿಯಮಗಳ ಪ್ರಕಾರ, ಎಲ್ಲಾ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಾಗುತ್ತದೆ.

Suspense Over Rohit Sharma s Participation in ICC Champions Trophy Opening Ceremony

ಈ ವೇಳೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳು ಟ್ರೋಫಿಯೊಂದಿಗೆ ಫೋಟೋ ಮತ್ತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಾರೆ. ಈ ಸಮಾರಂಭದಲ್ಲಿ ಎಲ್ಲ ತಂಡಗಳು ಪರಸ್ಪರ ಭೇಟಿ ಆಗುತ್ತವೆ. ಈ ಮೂಲಕ ಪಂದ್ಯವಾಳಿಯನ್ನುಆಟಗಾರರು ಎಷ್ಟು ಸ್ಪರ್ಧಾತ್ಮಕವಾಗಿ ನೋಡುತ್ತಾರೆ ಎಂಬುದನ್ನು ಸೂಚಿಸುತ್ತದೆ.

ಫೆಬ್ರರಿಯಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಲ್ಲದೆ ಈ ಮೆಗಾ ಟೂರ್ನಿಗೆ ಬಿಸಿಸಿಐ ಈಗಾಗಲೇ ಜೆರ್ಸಿಯನ್ನು ಸಹ ಬಿಡುಗಡೆ ಮಾಡಿದೆ. ಆದರೆ ಈ ಜೆರ್ಸಿಯಲ್ಲಿ ಬಿಸಿಸಿಐ ಆಯೋಜಿತ ದೇಶದ ಹೆಸರನ್ನು ಹಾಕಿಲ್ಲ ಎಂಬ ವಾದ ಹತ್ತಿಕೊಂಡಿದೆ. ಇದಕ್ಕೆ ಐಸಿಸಿ, ಬಿಸಿಸಿಐಗೆ ತರಾಠೆ ತೆಗೆದುಕೊಂಡಿದೆ.

Story first published: Thursday, January 23, 2025, 8:01 [IST]
Other articles published on Jan 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+