ಚೆಂಡಿಗೆ ಸ್ಯಾನಿಟೈಸರ್ ಬಳಕೆ ಆರೋಪ: ಸಸೆಕ್ಸ್ ವೇಗಿ ಕ್ಲೇಡನ್ ಅಮಾನತು

ಲಂಡನ್: ಮೂಲತಃ ಆಸ್ಟ್ರೇಲಿಯಾದಲ್ಲಿ ಜನಿಸಿದ ಇಂಗ್ಲೆಂಡ್ ಪ್ರಥಮದರ್ಜೆ ಕ್ರಿಕೆಟರ್ ಮಿಚ್ ಕ್ಲೇಡನ್ ತಾನು ಆಡುತ್ತಿದ್ದ ಕೌಂಟಿ ತಂಡ ಸಸೆಕ್ಸ್‌ನಿಂದ ಅಮಾನತಾಗಿದ್ದಾರೆ. ಹ್ಯಾಂಡ್ ಸ್ಯಾನಿಟೈಸರ್ ಅನ್ನು ಚೆಂಡಿಗೆ ಸವರಿದ ಆರೋಪ ಎದುರಿಸಿರುವ ಮಿಚ್ ಅಮಾನತಾಗಿದ್ದಾರೆ.
37ರ ಹರೆಯದ ಬಲಗೈ ವೇಗಿ ಮಿಚ್ ಕ್ಲೇಡನ್ ಕಳೆದ ತಿಂಗಳು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದ ವೇಳೆ ಚೆಂಡಿಗೆ ಹ್ಯಾಂಡ್ ಸ್ಯಾನಿಟೈಸರ್ ಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆ ಪಂದ್ಯದಲ್ಲಿ ಮಿಚ್ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
ಈ ದೂರಿಗೆ ಸಂಬಂಧಿಸಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ತನಿಖೆ ಆರಂಭಿಸಿದೆ. ಕೊರೊನಾವೈರಸ್ ಕಾರಣ ಮುನ್ನೆಚ್ಚರಿಕೆಯಾಗಿ ಚೆಂಡಿಗೆ ಎಂಜಲು ಬಳಸದಿರುವಂತೆ ಐಸಿಸಿ ನಿರ್ಬಂಧ ಹೇರಿತ್ತು. ಐಸಿಸಿ ಹೊಸ ನಿಯಮದ ಪ್ರಕಾರ ಚೆಂಡಿನ ಹೊಳಪಿಗೆ ಕೃತಕ ವಸ್ತುಗಳನ್ನೂ ಬಳಸುವಂತಿಲ್ಲ.
'ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದ ವೇಳೆ ಮಿಚ್ ಕ್ಲೇಡನ್ ಚೆಂಡಿಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿದ್ದಾರೆ ಎಂಬ ಆರೋಪ ಇಸಿಬಿಗೆ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಇದಕ್ಕೆ ಸಂಬಂಧಿಸಿ ಹೆಚ್ಚಿನ ಹೇಳಿಕೆ ನೀಡಲಾಗದು,' ಎಂದು ಸಸೆಕ್ಸ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications